ಮಧುರಾ ಪಿಸು ಮಾತಿಗೆ ಹಾಡು ಹೇಳುತ್ತಾ ಹೆಜ್ಜೆ ಹಾಕಿದ ಉತ್ತರ ಕನ್ನಡ ಜಿಲ್ಲಾಧಿಕಾರಿ; ವಿಡಿಯೋ ವೈರಲ್

Edited By: sandhya thejappa

Updated on: May 24, 2022 | 4:50 PM

ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಮಧುರಾ ಪಿಸು ಮಾತಿಗೆ ಎಂಬ ಹಾಡು ಹೇಳುತ್ತಾ ಡ್ಯಾನ್ಸ್ ಮಾಡಿದ್ದಾರೆ. ದಾಂಡೇಲಿಯಲ್ಲಿ ನಡೆದ ಕಂದಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಡಿಸಿ ಹೆಜ್ಜೆ ಹಾಕಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ (Social Media) ದಿನಕ್ಕೆ ಹತ್ತಾರು ವಿಡಿಯೋಗಳು ವೈರಲ್ (Viral) ಆಗುತ್ತಿರುತ್ತವೆ. ಕೆಲ ವಿಡಿಯೋಗಳು ಚರ್ಚೆಗೆ ಕಾರಣವಾಗಬಹುದು. ಇನ್ನು ಕೆಲ ವಿಡಿಯೋಗಳು ಮಜಾ ಕೊಡಬಹುದು. ಸದ್ಯ ಉತ್ತರ ಕನ್ನಡ ಜಿಲ್ಲಾಧಿಕಾರಿಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಮಧುರಾ ಪಿಸು ಮಾತಿಗೆ ಎಂಬ ಹಾಡು ಹೇಳುತ್ತಾ ಡ್ಯಾನ್ಸ್ ಮಾಡಿದ್ದಾರೆ. ದಾಂಡೇಲಿಯಲ್ಲಿ ನಡೆದ ಕಂದಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಡಿಸಿ ಹೆಜ್ಜೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಜಿಲ್ಲಾಧಿಕಾರಿ ಹಾಡಿಗೆ, ಡ್ಯಾನ್ಸ್​ಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜನ ಕುಣಿದು ಕುಪ್ಪಳಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
TV9 Web

TV9 Kannada

Read More