ಶಕ್ತಿ ಯೋಜನೆ ಕೈ ಬಿಡುವಂತೆ ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕ ಆಟೋ ಚಾಲಕರ ಪ್ರತಿಭಟನೆ, ಸರ್ಕಾರದ ವಿರುದ್ಧ ಘೋಷಣೆ

|

Updated on: Jul 31, 2023 | 12:56 PM

ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಬದುಕು ದುಸ್ತರಗೊಂಡಿದೆ, ತೀವ್ರ ಕಷ್ಟದ ಸ್ಥಿತಿ ಬಂದಿದೆ, ಎಂದು ಆಟೋ ಚಾಲಕರು ವಾದಿಸುತ್ತಾರೆ.

ಧಾರವಾಡ: ಒಬ್ಬರಿಗೆ ನ್ಯಾಯ ಮತ್ತೊಬ್ಬರಿಗೆ ಅನ್ಯಾಯ-ಸಿದ್ದರಾಮಯ್ಯ ಸರ್ಕಾರ  (Siddaramaiah government) ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದ (Shakti Scheme) ರಾಜ್ಯದ ಮಹಿಳೆಯರು ಖುಷಿಯಾಗಿದ್ದಾರೆ. ಆದರೆ, ಆಟೋ ಚಾಲಕರು ಕಷ್ಟಪಡುವ ಸ್ಥಿತಿ ಬಂದಿದೆ. ಅವರ ವಾದವೆಂದರೆ, ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಅವರ ಬದುಕು ದುಸ್ತರಗೊಂಡಿದೆ. ಬಸ್ ಪ್ರಯಾಣ ಉಚಿತವಾಗಿರುವುದರಿಂದ ಮಹಿಳೆಯರು ಈಗ ಆಟೋಗಳಲ್ಲಿ ಪ್ರಯಾಣಿಸುವುದನ್ನು ಬಿಟ್ಟಿದ್ದಾರೆ. ಹುಬ್ಬಳ್ಳಿ-ಧಾರವಾಡದ ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ (Auto Rickshaw Drivers’ Union) ಸದಸ್ಯರು ಇಂದು ಬೆಳಗ್ಗೆ ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್ ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು. ಶಕ್ತಿಯೋಜನೆ ಕೈಬಿಡಲೇಬೇಕು ಅಂತ ಘೋಷಣೆ ಕೂಗಿದ ಅವರು ಸಿದ್ದರಾಮಯ್ಯ ಸರ್ಕಾರಕ್ಕೆ ಧಿಕ್ಕಾರ ಅಂತ ಹೇಳಿದರು.
.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ