‘ಸೈಲೆಂಟ್ ಆಗಿ ತಮಿಳುನಾಡಲ್ಲಿ ಮದುವೆ ಆದೆ, ಶೂಟಿಂಗಾ ಅಂತ ಕೇಳಿದ್ರು’; ಮನೋಹರ್ ವಿವಾಹ ಪ್ರಸಂಗ

Updated on: Feb 28, 2023 | 9:32 AM

ಹಲವು ಸೂಪರ್ ಹಿಟ್ ಚಿತ್ರಗಳಿಗೆ ಮನೋಹರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.

ವಿ. ಮನೋಹರ್ (V. Manohar) ಅವರು ಸಂಗೀತ ಸಂಯೋಜಕರಾಗಿ ಫೇಮಸ್ ಆಗಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳಿಗೆ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗ ಮನೋಹರ್ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ‘ನಾನು ಮದುವೆ ಆಗಲೇಬಾರದು ಎಂದುಕೊಂಡಿದ್ದೆ. ಆಗ ಒಂದು ಹುಡುಗಿ ಪರಿಚಯ ಆಯಿತು. ಅವರನ್ನೇ ಮದುವೆ ಆಗಬೇಕು ಎನ್ನುವ ನಿರ್ಧಾರಕ್ಕೆ ಬಂದೆ. ಮದುವೆ ಆಗಲ್ಲ ಎಂದಿದ್ದರಿಂದ ಎಲ್ಲರ ಎದುರು ವಿವಾಹ ಆಗಲು ಮುಜುಗರ ಆಯಿತು. ಹೀಗಾಗಿ, ತಮಿಳುನಾಡಲ್ಲಿ ಮದುವೆ ಆದೆ. ಅಲ್ಲಿ ಕನ್ನಡದ ವ್ಯಕ್ತಿ ಬಂದು ಶೂಟಿಂಗಾ ಸರ್ ಎಂದು ಕೇಳಿದ್ದ’ ಎಂಬುದಾಗಿ ಮನೋಹರ್ ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Feb 28, 2023 08:31 AM
Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More