AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಚಿತ್ರರಂಗದಲ್ಲಿ ಸ್ಟ್ಯಾಂಡ್ ಆಗೋ ಥರ ಮಾಡಿದ್ದು ಜಗ್ಗೇಶ್​’; ಸಹಾಯ ನೆನೆದ ಮನೋಹರ್

‘ತರ್ಲೆ ನನ್ಮಗ’ ಸಿನಿಮಾ ಮೂಲಕ ವಿ. ಮನೋಹರ್ ಅವರು ಸಂಗೀತ ಸಂಯೋಜಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದು ಉಪೇಂದ್ರ ನಿರ್ದೇಶನದ ಮೊದಲ ಸಿನಿಮಾ. ಈ ಚಿತ್ರದಿಂದ ಮನೋಹರ್ ವೃತ್ತಿಜೀವನಕ್ಕೆ ಭದ್ರ ಬುನಾದಿ ಸಿಕ್ಕಿತು.

ರಾಜೇಶ್ ದುಗ್ಗುಮನೆ
|

Updated on:Feb 25, 2023 | 8:46 AM

Share

ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ ಖ್ಯಾತಿ ವಿ. ಮನೋಹರ್ (V. Manohar) ಅವರಿಗೆ ಸಲ್ಲಿಕೆ ಆಗುತ್ತದೆ. ಅವರು ಸಂಗೀತ ಸಂಯೋಜನೆ ಮಾಡಿದ ಅನೇಕ ಹಾಡುಗಳು ಈಗಲೂ ಫೇಮಸ್. 1992ರಿಂದ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸಂಗೀತ ಸಂಯೋಜನೆ ಜೊತೆ ಕೆಲ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಮನೋಹರ್ ಅವರು ಚಿತ್ರರಂಗದಲ್ಲಿ ಸ್ಟ್ಯಾಂಡ್ ಆಗೋಕೆ ನಟ ಜಗ್ಗೇಶ್ (Jaggesh) ಮುಖ್ಯ ಕಾರಣವಂತೆ. ಈ ವಿಚಾರವನ್ನು ಮನೋಹರ್ ಅವರು ಟಿವಿ9 ಕನ್ನಡ ನಡೆಸಿದ ವಿಶೇಷ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

‘ತರ್ಲೆ ನನ್ಮಗ’ ಸಿನಿಮಾ ಮೂಲಕ ವಿ. ಮನೋಹರ್ ಅವರು ಸಂಗೀತ ಸಂಯೋಜಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದು ಉಪೇಂದ್ರ ನಿರ್ದೇಶನದ ಮೊದಲ ಸಿನಿಮಾ. ಜಗ್ಗೇಶ್ ನಟನೆಯ ಈ ಸಿನಿಮಾ ಯಶಸ್ಸು ಕಂಡಿತು. ಈ ಚಿತ್ರದ ಹಾಡುಗಳು ಕೂಡ ಜನಪ್ರಿಯತೆ ಪಡೆದವು. ಈ ಚಿತ್ರದಿಂದ ಮನೋಹರ್ ವೃತ್ತಿಜೀವನಕ್ಕೆ ಭದ್ರ ಬುನಾದಿ ಸಿಕ್ಕಿತು.

ಉಪೇಂದ್ರ ಕೊಟ್ರು ಆಫರ್

‘ಉಪೇಂದ್ರ ಅವರು ‘ತರ್ಲೆ ನನ್ಮಗ’ ಸಿನಿಮಾದಲ್ಲಿ ಕೆಲಸ ಮಾಡೋಕೆ ರೆಡಿ ಆಗಿದ್ದರು. ಅವರ ನಿರ್ದೇಶನದ ಮೊದಲ ಸಿನಿಮಾ ಆಗಿದ್ದರಿಂದ ನಾನು ಜೊತೆಯಲ್ಲಿ ಇರುವಂತೆ ಹೇಳಿದರು. ನಾನು ಸಹಾಯಕನಾಗಿ ಕೆಲಸ ಮಾಡಿದೆ. 15 ದಿನ ಶೂಟಿಂಗ್ ಮುಗಿದು ಬ್ರೇಕ್ ತೆಗೆದುಕೊಂಡರು. ಎಸ್​.ಎ.ರಾಜ್​ಕುಮಾರ್ ಅವರು ಸಂಗೀತ ಸಂಯೋಜಕರಾಗಿದ್ದರು. ಆ ಸಮಯದಲ್ಲಿ ಅವರು ತುಂಬಾ ಫೇಮಸ್ ಆದರು. ಅವರು ಸಿಗಲ್ಲ ಎಂದಾಗ ನನಗೆ ಅವಕಾಶ ಸಿಕ್ತು. ನಾನು ಧೈರ್ಯ ತೆಗೆದುಕೊಂಡು ಮ್ಯೂಸಿಕ್ ಮಾಡಿದೆ’ ಎಂದಿದ್ದಾರೆ ಮನೋಹರ್.

ಮೊದಲ ಟ್ಯೂನ್..

‘ಡಂ ಡಂ ಡಗಾರ್ ಡಗಾರ್​ ನಾನು ಮಾಡಿದ ಮೊದಲು ಟ್ಯೂನ್. ‘ಸಂಗೀತಾ ಕಲಿಸಿಕೊಡು ಸಂಗೀತಾ..’ ಎರಡನೇ ಹಾಡು. ಚಿತ್ರದ ಎಲ್ಲಾ ಹಾಡುಗಳು ಹಿಟ್ ಆದವು. ಈ ಚಿತ್ರದಲ್ಲಿ ಜಗ್ಗೇಶ್ ಒಂದು ಹಾಡನ್ನು ಹಾಡಿದರು. ಇದು ಅವರಿಗೂ ಸಾಕಷ್ಟು ಇಷ್ಟವಾಗಿತ್ತು’ ಎಂದಿದ್ದಾರೆ ಮನೋಹರ್.

ಜಗ್ಗೇಶ್ ಜೊತೆ 22 ಸಿನಿಮಾ

ಜಗ್ಗೇಶ್ ಹಾಗೂ ವಿ. ಮನೋಹರ್ 22 ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿ.ಮನೋಹರ್, ‘ಜಗ್ಗೇಶ್​ಗೆ ತರ್ಲೆ ನನ್ಮಗ ಚಿತ್ರದ ಹಾಡುಗಳು ಇಷ್ಟ ಆದವು. ಜಗ್ಗೇಶ್ ನನ್ನ ಪ್ರಮೋಟ್ ಮಾಡಿದರು. ಬಂದ ನಿರ್ಮಾಪಕರ ಬಳಿ ನಮ್ಮ ಮನೋಹರ್ ಹತ್ತಿರ ಮ್ಯೂಸಿಕ್ ಮಾಡ್ಸಿ, ಅವರು ಹೊಂದಿಕೆ ಆಗುತ್ತಾರೆ ಎನ್ನುತ್ತಿದ್ದರು. ಅವರ ಜೊತೆ 22 ಸಿನಿಮಾ ಮಾಡಿದೆ. ನಾನು ಚಿತ್ರರಂಗದಲ್ಲಿ ಸ್ಟ್ಯಾಂಡ್​ ಆಗುವಂತೆ ಮಾಡಿದ್ದು ಜಗ್ಗೇಶ್​’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:46 am, Sat, 25 February 23

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ