PKL 12: ಕಬಡ್ಡಿ ಆಟಗಾರರೊಂದಿಗೆ ಕ್ರಿಕೆಟ್ ಆಡಿದ ವೈಭವ್ ಸೂರ್ಯವಂಶಿ; ವಿಡಿಯೋ

Updated on: Aug 29, 2025 | 9:04 PM

Vaibhav Suryavanshi: ಐಪಿಎಲ್ ನ ಯುವ ಸ್ಟಾರ್ ವೈಭವ್ ಸೂರ್ಯವಂಶಿ ಅವರು ಪ್ರೊ ಕಬಡ್ಡಿ ಲೀಗ್‌ನ 12ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು. ಕಬಡ್ಡಿ ಆಟಗಾರರೊಂದಿಗೆ ಕ್ರಿಕೆಟ್ ಆಡಿದ ಅವರು ಮೂರು ಸಿಕ್ಸರ್‌ಗಳನ್ನು ಬಾರಿಸಿ ಎಲ್ಲರನ್ನೂ ರಂಜಿಸಿದರು. ಈ ಘಟನೆಯ ವಿಡಿಯೋ ವೈರಲ್ ಆಗಿದೆ.

ತನ್ನ ಹೊಡಿಬಡಿ ಆಟದ ಮೂಲಕವೇ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿರುವ ಭಾರತದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಸುದ್ದಿಯಲಿದ್ದಾರೆ. ಕೇವಲ 14 ನೇ ವಯಸ್ಸಿನಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿ ಸ್ಫೋಟಕ ಶತಕ ಬಾರಿಸುವ ಮೂಲಕ ಇಡೀ ಪ್ರಪಂಚದ ಗಮನ ಸೆಳೆದಿದ್ದ ವೈಭವ್ ಸೂರ್ಯವಂಶಿ ಇದೀಗ ಕಬಡ್ಡಿ ಅಂಗಳದಲ್ಲೂ ಕಾಣಿಸಿಕೊಮಡಿದ್ದಾರೆ. ವಾಸ್ತವವಾಗಿ ಇಂದಿನಿಂದ 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಆರಂಭವಾಗಿದೆ. ಈ ಲೀಗ್​ನ ಉದ್ಘಾಟನೆಗೆ ವೈಭವ್ ಸೂರ್ಯವಂಶಿ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು. ಅದರಂತೆ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ವೈಭವ್ ಕಬಡ್ಡಿ ಅಂಗಳದಲ್ಲಿ ಕಬಡ್ಡಿ ಆಟಗಾರರೊಂದಿಗೆ ಕ್ರಿಕೆಟ್ ಆಡಿದ್ದಾರೆ. ಇದೀಗ ಅದರ ವಿಡಿಯೋ ವೈರಲ್ ಆಗಿದೆ.

ಪ್ರೊ ಕಬಡ್ಡಿ ಲೀಗ್‌ನ 12 ನೇ ಸೀಸನ್ ಆಗಸ್ಟ್ 29 ರ ಶುಕ್ರವಾರದಿಂದ ಪ್ರಾರಂಭವಾಗಿದೆ. ಅದರ ಉದ್ಘಾಟನೆಗೆ ವೈಭವ್ ಸೂರ್ಯವಂಶಿ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು. ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ವೈಭವ್ ಅವರನ್ನು ನೋಡಿದ ತಕ್ಷಣ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು. ಇದೇ ವೇಳೆ ಕಬಡ್ಡಿ ಆಟಗಾರರೊಂದಿಗೆ ಕ್ರಿಕೆಟ್ ಆಡಿದ ವೈಭವ್ ಒಂದೊಂದಾಗಿ 3 ಸಿಕ್ಸರ್‌ಗಳನ್ನು ಬಾರಿಸಿದರು.