ಪರಭಾಷೆಯಿಂದ ಕನ್ನಡಕ್ಕೆ ಬಂದ ಕನ್ನಡತಿ ವರ್ಷಾ ಬೊಳ್ಳಮ್ಮ: ವಿಡಿಯೋ

Updated on: Sep 21, 2025 | 8:23 PM

Varsha Bollamma: ವರ್ಷಾ ಬೊಳ್ಳಮ್ಮ, ಅಪ್ಪಟ ಕನ್ನಡತಿ ಆದರೆ ಮಿಂಚುತ್ತಿದ್ದಿದ್ದು ಮಾತ್ರ ಪರಭಾಷೆ ಸಿನಿಮಾಗಳಲ್ಲಿ. ತಮಿಳಿನ "ಬಿಗಿಲ್", "96" ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಹಾಗೂ ತೆಲುಗು, ಮಲೆಯಾಳಂ ಚಿತ್ರಗಳಲ್ಲೂ‌ ನಟಿಸಿರುವ ವರ್ಷ ಬೊಳ್ಳಮ್ಮ ಇದೀಗ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಈ ಬಗ್ಗೆ ನಟಿ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ...

ವರ್ಷಾ ಬೊಳ್ಳಮ್ಮ, ಅಪ್ಪಟ ಕನ್ನಡತಿ ಆದರೆ ಮಿಂಚುತ್ತಿದ್ದಿದ್ದು ಮಾತ್ರ ಪರಭಾಷೆ ಸಿನಿಮಾಗಳಲ್ಲಿ. ತಮಿಳಿನ “ಬಿಗಿಲ್”, “96” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಹಾಗೂ ತೆಲುಗು, ಮಲೆಯಾಳಂ ಚಿತ್ರಗಳಲ್ಲೂ‌ ನಟಿಸಿರುವ ವರ್ಷ ಬೊಳ್ಳಮ್ಮ ಇದೀಗ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಕನ್ನಡದ ‘ಮಹಾನ್’ ಸಿನಿಮಾನಲ್ಲಿ ವರ್ಷಾ ಬೊಳ್ಳಮ್ಮ ನಟಿಸುತ್ತಿದ್ದಾರೆ. ಮೂಲತಃ ಕನ್ನಡದವಳಾದ ನಾನು ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಈಗ ಇದೇ ಮೊದಲ ಬಾರಿಗೆ ಕನ್ನಡದ “ಮಹಾನ್” ಚಿತ್ರದಲ್ಲಿ ನಟಿಸುತ್ತಿದ್ದೇನೆ. ಮಾತೃಭಾಷೆಯ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಬಹಳ ಖುಷಿಯಾಗುತ್ತಿದೆ ಎಂದಿದ್ದಾರೆ, ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ