Varthur Santhosh: ಸ್ಪರ್ಧಿಗಳಿಗೆ ಹೊಡೆದು ಬಿಗ್​ ಬಾಸ್​ ಮನೆಯಿಂದ ಹೊರಬರಲು ವರ್ತೂರು ಸಂತೋಷ್​ ಪ್ಲ್ಯಾನ್​?

Updated on: Nov 13, 2023 | 7:58 PM

ಹೇಗಾದರೂ ಮಾಡಿ ತಾವು ಬಿಗ್​ ಬಾಸ್​ ಮನೆಯಿಂದ ಹೊರಗೆ ಹೋಗಬೇಕು ಎಂದು ವರ್ತೂರು ಸಂತೋಷ್​ ಅವರು ತೀರ್ಮಾನಿಸಿದ್ದಾರೆ. ಆದರೆ ಅವರ ಮನವೊಲಿಸಲು ಸಕಲ ಪ್ರಯತ್ನ ಮಾಡಲಾಗುತ್ತಿದೆ. ಹಾಗಿದ್ದರೂ ಕೂಡ ಅವರು ದೊಡ್ಮನೆ ತೊರೆಯಲು ಏನೇನೋ ಪ್ಲ್ಯಾನ್​ ಮಾಡುತ್ತಿದ್ದಾರೆ. ಅವರ ಸಂಭಾಷಣೆಯ ಪ್ರೋಮೋ ಇಲ್ಲಿದೆ..

ಕಳೆದ ಎರಡು ದಿನಗಳಿಂದ ಬಿಗ್​ ಬಾಸ್​ ಮನೆಯಲ್ಲಿ ವರ್ತೂರು ಸಂತೋಷ್​ (Varthur Santhosh) ಅವರೇ ಹೆಚ್ಚು ಹೈಲೈಟ್​ ಆಗುತ್ತಿದ್ದಾರೆ. ಹೇಗಾದರೂ ಮಾಡಿ ತಾವು ಬಿಗ್​ ಬಾಸ್​ (Bigg Boss Kannada) ಮನೆಯಿಂದ ಹೊರಗೆ ಹೋಗಬೇಕು ಎಂದು ಅವರು ತೀರ್ಮಾನಿಸಿದ್ದಾರೆ. ಆದರೆ ಅವರ ಮನವೊಲಿಸಲು ಸಕಲ ಪ್ರಯತ್ನ ಮಾಡಲಾಗುತ್ತಿದೆ. ಹಾಗಿದ್ದರೂ ಕೂಡ ವರ್ತೂರು ಸಂತೋಷ್​ ಅವರು ದೊಡ್ಮನೆ ತೊರೆಯಲು ಏನೇನೋ ಪ್ಲ್ಯಾನ್​ ಮಾಡುತ್ತಿದ್ದಾರೆ. ‘ಎರಡು ದೊಡ್ಡ ಡ್ರೋನ್​ ತರಿಸು. ಅದರ ಮೇಲೆ ಕಾಲಿಟ್ಟುಕೊಂಡು ಹಾರಿ ಹೋಗ್ತೀನಿ’ ಎಂದು ಪ್ರತಾಪ್​ಗೆ ವರ್ತೂರು ಸಂತೋಷ್​ ಹೇಳಿದ್ದಾರೆ. ಅವರಿಗೆ ತುಕಾಲಿ ಸಂತೋಷ್​ (Tukali Santosh) ಕೂಡ ಒಂದಷ್ಟು ಐಡಿಯಾ ಕೊಟ್ಟಿದ್ದಾರೆ. ‘ನಿಮ್ಮನ್ನೆಲ್ಲ ಹೊಡೆದರೆ ಸಾಕು. ಅವರೇ ನನ್ನನ್ನು ಹೊರಗೆ ಕಳಿಸುತ್ತಾರೆ’ ಎಂದು ವರ್ತೂರು ಸಂತೋಷ್​ ಹೇಳಿದ್ದಾರೆ. ಈ ಮೂವರ ಸಂಭಾಷಣೆ ಇರುವ ಪ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಲೈವ್​ ವೀಕ್ಷಿಸಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 13, 2023 07:57 PM
Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More