Bigg Boss Kannada: ತನಿಷಾ ವಿಚಾರದಲ್ಲೂ ಮುಲಾಜು ನೋಡಿಲ್ಲ ವರ್ತೂರು ಸಂತೋಷ್​; ಆಟ ಅಂದ್ರೆ ಆಟ ಅಷ್ಟೇ

Updated on: Dec 04, 2023 | 6:56 PM

ದಿನ ಕಳೆದಂತೆಲ್ಲ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋ ರೋಚಕತೆ ಪಡೆಯುತ್ತಿದೆ. ಮೊದಲು ಸ್ನೇಹಿತರಾಗಿದ್ದವರು ಈಗ ವೈರಿಗಳಾಗುತ್ತಿದ್ದಾರೆ. ವರ್ತೂರು ಸಂತೋಷ್​ ಅವರು ಅಸಲಿ ಆಟ ತೋರಿಸಲು ಮುಂದಾಗಿದ್ದಾರೆ. ಇಷ್ಟು ದಿನ ತಮ್ಮ ಜೊತೆ ಆಪ್ತವಾಗಿದ್ದ ತನಿಷಾ ಕುಪ್ಪಂಡ ವಿಚಾರದಲ್ಲೂ ಅವರು ಮುಲಾಜು ನೋಡಿಲ್ಲ.

ದೊಡ್ಮನೆಯಲ್ಲಿ ತನಿಷಾ ಕುಪ್ಪಂಡ (Tanisha Kuppanda) ಜೊತೆ ವರ್ತೂರು ಸಂತೋಷ್​ ಅವರು ತುಂಬ ಕ್ಲೋಸ್​ ಆಗಿದ್ದರು. ಆದರೆ ಈಗ ಅವರು ಬದಲಾಗಿದ್ದಾರೆ. 9ನೇ ವಾರದಲ್ಲಿ ನಾಮಿನೇಟ್​ ಮಾಡುವ ವಿಚಾರ ಬಂದಾಗ ವರ್ತೂರು ಸಂತೋಷ್ (Varthur Santhosh)​ ಅವರು ತುಂಬ ನಿಷ್ಠುರವಾಗಿ ನಡೆದುಕೊಂಡಿದ್ದಾರೆ. ‘ನಾವು ತ್ಯಾಗಮೂರ್ತಿಗಳಾಗಲು ಇಲ್ಲಿಗೆ ಬಂದಿಲ್ಲ. ನಾನು ತನಿಷಾ ಕುಪ್ಪಂಡ ಅವರನ್ನು ಬೇಕಂತಲೇ ಹೋಗಿ ತಳ್ಳಿಲ್ಲ. ಹಾಗಾಗಿ, ತನಿಷಾಗೆ ಮತ್ತೊಂದು ಅವಕಾಶ ಸಿಗಲಿ ಎಂದು ನಾನು ಕೇಳಲ್ಲ. ನಾವು ಮಾನವೀಯತೆ ಅಂತ ಹೋದರೆ ನಮ್ಮ ಮುಂದೆಯೇ ಹಳ್ಳ ತೋಡುತ್ತಾರೆ’ ಎಂದು ವರ್ತೂರು ಸಂತೋಷ್​ ನೇರವಾಗಿ ಹೇಳಿದ್ದಾರೆ. ‘ಜಿಯೋ ಸಿನಿಮಾ’ದಲ್ಲಿ ದಿನ 24 ಗಂಟೆಯೂ ಉಚಿತವಾಗಿ ಬಿಗ್​ ಬಾಸ್​ (Bigg Boss Kannada) ಕಾರ್ಯಕ್ರಮವನ್ನು ಲೈವ್​ ನೋಡಬಹುದು. ಪ್ರತಿ ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಎಪಿಸೋಡ್​ ಪ್ರಸಾರ ಆಗುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More