ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ; ಇಲ್ಲಿದೆ ವಿಡಿಯೋ

ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ; ಇಲ್ಲಿದೆ ವಿಡಿಯೋ

ಮದನ್​ ಕುಮಾರ್​
|

Updated on: Dec 01, 2023 | 7:18 PM

ಮೈಕೆಲ್​ ಅಜಯ್​ ಅವರು ವೀಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ಕನ್ನಡವನ್ನು ಕಲಿಯಲು ಆಸಕ್ತಿ ತೋರಿಸುತ್ತಿರುವುದೇ ಇದಕ್ಕೆಲ್ಲ ಕಾರಣ. ಕರುನಾಡಿನಲ್ಲಿ ಹುಟ್ಟಿ ಬೆಳೆದವರೇ ಇಂಗ್ಲಿಷ್​ ಮೋಹಕ್ಕೆ ಸಿಲುಕಿರುವಾಗ ನೈಜೀರಿಯಾದಲ್ಲಿ ಬೆಳೆದ ಮೈಕೆಲ್​ ಅವರು ಕನ್ನಡವನ್ನು ಇಷ್ಟು ಚೆನ್ನಾಗಿ ಮಾತನಾಡುತ್ತಿರುವುದಕ್ಕೆ ಎಲ್ಲರೂ ಭೇಷ್​ ಎನ್ನುತ್ತಿದ್ದಾರೆ.

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ಶೋನಲ್ಲಿ ಸ್ಪರ್ಧಿಸುತ್ತಿರುವ ಮೈಕೆಲ್​ ಅಜಯ್​ (Michael Ajay) ಅವರು ಒಂದಷ್ಟು ಕಾರಣಗಳಿಂದ ಜನಮನ ಗೆಲ್ಲುತ್ತಿದ್ದಾರೆ. ಕನ್ನಡವನ್ನು (Kannada Language) ಕಲಿತು ಮಾತನಾಡುತ್ತಿರುವ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ನೈಜೀರಿಯಾ ಮೂಲದ ಅವರು ತಮ್ಮದೇ ಶೈಲಿಯಲ್ಲಿ ಕನ್ನಡ ಮಾತನಾಡುತ್ತಾರೆ. ತಮಗೆ ಕನ್ನಡ ಬರುವುದಿಲ್ಲ ಎಂಬುದನ್ನು ನೆಪವಾಗಿ ಇಟ್ಟುಕೊಂಡು ಅವರು ಇಂಗ್ಲಿಷ್​ ಬಳಸುತ್ತಿಲ್ಲ. ಕನ್ನಡದ ಕಷ್ಟದ ಪದಗಳನ್ನು ಓದಲು ಕೂಡ ಅವರು ಪ್ರಯತ್ನಿಸಿದ್ದಾರೆ. ಅದಕ್ಕೆ ಸಾಕ್ಷಿ ಒದಗಿಸುವಂತಹ ಪ್ರೋಮೋ ವೈರಲ್​ ಆಗಿದೆ. ಪ್ರತಿ ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ದಲ್ಲಿ ಬಿಗ್​ ಬಾಸ್​ ಶೋ ಪ್ರಸಾರ ಆಗುತ್ತಿದೆ. ದಿನದ 24 ಗಂಟೆಯೂ ‘ಜಿಯೋ ಸಿನಿಮಾ’ದಲ್ಲಿ ಉಚಿತವಾಗಿ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.