ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ ಮತ್ತು ಶಾಸಕರು
ಮೊದಲಿಗೆ ಅವರು ಡೊಳ್ಳು ಬಾರಿಸುವುದನ್ನು ದೃಶ್ಯಗಳಲ್ಲಿ ನೋಡಬಹುದು. ಡೊಳ್ಳನ್ನು ಹೆಗಲಿಗೇರಿಸಿದ ಕೂಡಲೇ ಅವರಿಗೆ ಬಾರಿಸುವುದು ಗೊತ್ತಾಗಲ್ಲ, ತಡವರಿಸುತ್ತಾರೆ. ಗುಂಪಿನಲ್ಲಿರುವವರು ಬಾರಿಸುವುದನ್ನು ಗಮನಿಸಿ, ಆಲಿಸಿ ನಾದ ಹಿಡಿದು ಹುರುಪಿನಿಂದ ಆವೇಶಕ್ಕೊಳಗಾದವರಂತೆ ಬಾರಿಸತೊಡಗುತ್ತಾರೆ. ಅಮೇಲೆ ಕುಣಿತ. ಶಾಸಕ ತುಕಾರಾಂ ನುರಿತ ಪಟುವಿನಂತೆ ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕುತ್ತಾರೆ.
ವಿಜಯನಗರ: ಯಾವುದೇ ಕ್ಷೇತ್ರದ ಜನ ಉತ್ಸವ ಆಚರಿಸುವಾಗ ath ಜಾತ್ರೆಯಂಥ ಕಾರ್ಯಕ್ರಮಗಳಲ್ಲಿ ತಾವು ಆರಿಸಿದ ಪ್ರತಿನಿಧಿ (representative of people) ಜೊತೆಗಿದ್ದರೆ ಬಹಳ ಸಂತೋಷಪಡುತ್ತಾರೆ. ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಇಂದು ಕನಕದಾಸ ಜಯಂತಿಯನ್ನು (Kanakadasa Jayanti) ಬಹಳ ಸಂಭ್ರಮದಿಂದ ಅಚರಿಸಲಾಯಿತು. ಜಯಂತಿ ಉತ್ಸವದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad), ಸಂಡೂರು ಶಾಸಕ ಈ ತುಕಾರಾಂ (E Tukaram) ಮತ್ತು ಕೂಡ್ಲಿಗೆ ಶಾಸಕ ಡಾ ಎನ್ ಟಿ ಶ್ರೀನಿವಾಸ (Dr NT Srinivas) ಭಾಗಿಯಾಗಿದ್ದರು. ಗಣ್ಯರು ಭಾಗಿಯಾಗಿದ್ದಷ್ಟೇ ಅಲ್ಲ, ಜನರೊಂದಿಗೆ ಡೊಳ್ಳು ಬಾರಸಿದರು ಮತ್ತು ಕುಣಿದರು. ಮೊದಲಿಗೆ ಅವರು ಡೊಳ್ಳು ಬಾರಿಸುವುದನ್ನು ದೃಶ್ಯಗಳಲ್ಲಿ ನೋಡಬಹುದು. ಡೊಳ್ಳನ್ನು ಹೆಗಲಿಗೇರಿಸಿದ ಕೂಡಲೇ ಅವರಿಗೆ ಬಾರಿಸುವುದು ಗೊತ್ತಾಗಲ್ಲ, ತಡವರಿಸುತ್ತಾರೆ. ಗುಂಪಿನಲ್ಲಿರುವವರು ಬಾರಿಸುವುದನ್ನು ಗಮನಿಸಿ, ಆಲಿಸಿ ನಾದ ಹಿಡಿದು ಹುರುಪಿನಿಂದ ಆವೇಶಕ್ಕೊಳಗಾದವರಂತೆ ಬಾರಿಸತೊಡಗುತ್ತಾರೆ. ಅಮೇಲೆ ಕುಣಿತ. ಶಾಸಕ ತುಕಾರಾಂ ನುರಿತ ಪಟುವಿನಂತೆ ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕುತ್ತಾರೆ. ಸಂತೋಷ್ ಲಾಡ್ ಮತ್ತು ಶ್ರೀನಿವಾಸ್ ಕುಣಿತ ಮೊಹರಂ ಕುಣಿತವನ್ನು ಜ್ಞಾಪಿಸುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ