ಟಿವಿ9 ಡಿಜಿಟಲ್ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಮಕ್ಕಳಿಗೆ ಊಟ ಸಿದ್ಧ
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಒಂದು ಹೊತ್ತಿನ ಊಟಕ್ಕಾಗಿ ಅಲೆದಾಡುತ್ತಿದ್ದಾರೆ. ಆದರೆ ಟಿವಿ9 ಡಿಜಿಟಲ್ನಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದಾರೆ. ಕಲಬುರಗಿ ಡಿಡಿಪಿಐ ಸಕ್ರಪ್ಪೆಗೌಡ ಬಿರಾದರ್ ಸೂಚನೆ ಮೇರೆಗೆ ಶಾಲೆಯಲ್ಲೇ ಬಿಸಿಯೂಟ ಸಿದ್ದಪಡಿಸಿದ್ದು, ಮಕ್ಕಳು ಊಟ ಮಾಡಿದ್ದಾರೆ.
ಕಲಬುರಗಿ, ಡಿಸೆಂಬರ್ 01: ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ (School) ಯಲ್ಲಿ ಬಿಸಿಯೂಟಕ್ಕಾಗಿ ಪ್ರತಿದಿನ 2 ಕಿಲೋ ಮೀಟರ್ ನಡೆದುಕೊಂಡೆ ಹೋಗಬೇಕಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರ ತವರಲ್ಲಿ ಅಮಾನವೀಯ ಕಂಡು ಬಂದಿತ್ತು. ಆದರೆ ಟಿವಿ9 ಡಿಜಿಟಲ್ನಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದಾರೆ. ಕಲಬುರಗಿ ಡಿಡಿಪಿಐ ಸಕ್ರಪ್ಪೆಗೌಡ ಬಿರಾದರ್ ಸೂಚನೆ ಮೇರೆಗೆ ಶಾಲೆಯಲ್ಲೇ ಬಿಸಿಯೂಟ ಸಿದ್ದಪಡಿಸಿದ್ದು, ಮಕ್ಕಳು ಊಟ ಮಾಡಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos