ಕಾರ್ಮಿಕ ಇಲಾಖೆ ಸಚಿವರ ಶಿಫಾರಸ್ಸಿಗಿಲ್ಲ ಕಿಮ್ಮತ್ತು! ವರ್ಗಾವಣೆ ಮಾಡಿರುವ ಅಧಿಕಾರಿಗಳ ಸೇವಾ ವಿವರ ನೀಡುವಂತೆ ಸಂತೋಷ್ ಲಾಡ್ ಟಿಪ್ಪಣಿ

ಆಗಸ್ಟ್ ತಿಂಗಳಲ್ಲಿ ಸಚಿವರ ಗಮನಕ್ಕೇ ತಾರದೇ 40 ಮಂದಿ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಇದೀಗ ಅಧಿಕಾರಿಗಳು ಸಚಿವರಿಗೂ ಮಾಹಿತಿ ನೀಡದೇ ವರ್ಗಾವಣೆ ಪಟ್ಟಿ ಸಿದ್ದಪಡಿಸಿದ್ದಾರೆ. ಸಚಿವರ ಶಿಫಾರಸ್ಸುಗಳನ್ನೇ ಕಸದ ಬುಟ್ಟಿಗೆ ಹಾಕಿ ವರ್ಗಾವಣೆ ಪಟ್ಟಿ ಸಿದ್ಧಪಡಿಸಿದ್ದಕ್ಕೆ ಸಂತೋಷ್ ಲಾಡ್ ಗರಂ ಆಗಿದ್ದಾರೆ.

ಕಾರ್ಮಿಕ ಇಲಾಖೆ ಸಚಿವರ ಶಿಫಾರಸ್ಸಿಗಿಲ್ಲ ಕಿಮ್ಮತ್ತು! ವರ್ಗಾವಣೆ ಮಾಡಿರುವ ಅಧಿಕಾರಿಗಳ ಸೇವಾ ವಿವರ ನೀಡುವಂತೆ ಸಂತೋಷ್ ಲಾಡ್ ಟಿಪ್ಪಣಿ
ಸಂತೋಷ್ ಲಾಡ್
Follow us
| Updated By: Rakesh Nayak Manchi

Updated on:Nov 04, 2023 | 10:55 AM

ಬೆಂಗಳೂರು, ನ.4: ಆಗಸ್ಟ್ ತಿಂಗಳಲ್ಲಿ ಸಚಿವರ ಗಮನಕ್ಕೇ ತಾರದೇ 40 ಮಂದಿ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಇದೀಗ ಅಧಿಕಾರಿಗಳು ಸಚಿವರಿಗೂ ಮಾಹಿತಿ ನೀಡದೇ ಸಿಎಂ ಸಚಿವಲಾಯದ ಅಧಿಕಾರಿಗಳು ವರ್ಗಾವಣೆ ಪಟ್ಟಿಯನ್ನು ಸಿದ್ಧಪಡಿಸಿರುವುದು ಸಚಿವ ಸಂತೋಷ್ ಲಾಡ್ (Santosh Lad) ಕೋಪಕ್ಕೆ ಕಾರಣವಾಗಿದೆ.

ಸಚಿವ ಸಂತೋಷ್ ಲಾಡ್ ಅವರ ಶಿಫಾರಸುಗಳನ್ನೇ ಕಸದ ಬುಟ್ಟಿಗೆ ಹಾಕಿರುವ ಸಿಎಂ ಸಚಿವಾಲಯದ ಅಧಿಕಾರಿಗಳು, ಸಚಿವರಿಗೇ ಮಾಹಿತಿ ನೀಡದೇ ಅಧಿಕಾರಿಗಳ ವರ್ಗಾವಣೆ ಪಟ್ಟಿ ಸಿದ್ಧಪಡಿಸಿದ್ದಾರೆ. ಇದು ಸಂತೋಷ್ ಲಾಡ್ ಹಾಗೂ ಸಿಎಂ ಸಚಿವಾಲಯ ಅಧಿಕಾರಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.

ಸಚಿವರ ಹೆಸರಲ್ಲಿ ತಾವೇ ಅಧಿಕಾರ ಚಲಾಯಿಸುತ್ತಿರುವ ಸಿಎಂ ಸಚಿವಾಲಯದ ಅಧಿಕಾರಿಗಳ ಅಬ್ಬರಕ್ಕೆ ತೀವ್ರ ಕೋಪಗೊಂಡಿರುವ ಸಚಿವ ಸಂತೋಷ್ ಲಾಡ್, ಅತ್ತ ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳಲೂ ಆಗದೇ, ಸುಮ್ಮನಿರಲೂ ಆಗದೇ ಇರುವ ಸ್ಥಿತಿಯಲ್ಲಿ ಕುಳಿತಿದ್ದಾರೆ. ಅಲ್ಲದೆ, ವರ್ಗಾವಣೆ ಮಾಡಿರುವ ಅಧಿಕಾರಿಗಳ ಸೇವಾ ವಿವರ ನೀಡುವಂತೆ ಟಿಪ್ಪಣಿ ಕಳಿಸಿದ್ದಾರೆ.

ಏನಿದು ಜಟಾಪಟಿ?

ಆಗಸ್ಟ್ ತಿಂಗಳಲ್ಲಿ ಕಾರ್ಮಿಕ ಇಲಾಖೆಯ 40 ಅಧಿಕಾರಿಗಳನ್ನು ಸಚಿವರು ವರ್ಗಾವಣೆ ಮಾಡಿದ್ದರು. ವರ್ಗಾವಣೆಗೆ ಸಿಎಂ ಸಿದ್ದರಾಮಯ್ಯ ಅವರ ಅನುಮೋದನೆ ಇಲ್ಲ ಎಂದು ಐದೇ ದಿನಕ್ಕೆ ವರ್ಗಾವಣೆ ರದ್ದುಗೊಳಿಸಲಾಗಿತ್ತು. ಇದೀಗ ಮತ್ತೆ ಸಚಿವರು ಕೇವಲ ನಾಲ್ಕು ಅಧಿಕಾರಿಗಳ ವರ್ಗಾವಣೆಗಾಗಿ ಸಿಎಂ ಅನುಮೋದನೆಗೆ ಶಿಫಾರಸ್ಸು ಮಾಡಿದ್ದರು.

ಇದನ್ನೂ ಓದಿ: ವರ್ಗಾವಣೆ ದಂಧೆಯಲ್ಲಿ ಜೆಟಿ ಪಾಟೀಲ್ ಪಿಎ ಭಾಗಿ ಆರೋಪ; ಇದು ನಿಜ ಎಂದ ಮಾಜಿ ಸಚಿವ ಮುರುಗೇಶ್ ನಿರಾಣಿ

ಸಿಎಂ ಅನುಮೋದನೆ ಪಡೆಯುವ ವೇಳೆ ಸಿಎಂ ಸಚಿವಲಾಯದ ಅಧಿಕಾರಿಗಳು ಹೆಚ್ಚುವರಿ ಪಟ್ಟಿ ಸಿದ್ಧಪಡಿಸಿ ಬಿಟ್ಟಿದ್ದಾರೆ. ಸಚಿವರು ಕೊಟ್ಟಿದ್ದ ಪಟ್ಟಿ ಕಸದ ಬುಟ್ಟಿಗೆ ಹಾಕಿ ಸಚಿವರ ಗಮನಕ್ಕೇ ತಾರದೇ 40 ಮಂದಿ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಸಚಿವರ ಬೇಸರ ಗೊತ್ತಿಲ್ಲದೇ ಸಿದ್ದರಾಮಯ್ಯ ಅವರು ವರ್ಗಾವಣೆ ಪಟ್ಟಿಗೆ ಅನುಮೋದನೆ ನೀಡಿದ್ದಾರೆ.

ಸಚಿವರು ಹಾಗೂ ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡದೆ ಅಧಿಕಾರಿಗಳೇ ವರ್ಗಾವಣೆ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಸಿಎಂ ಕಚೇರಿ ಅಧಿಕಾರಿಗಳ ನಡೆಗೆ ಸಚಿವ ಸಂತೋಷ್ ಲಾಡ್ ತೀವ್ರ ಬೇಸರಗೊಂಡಿದ್ದಾರೆ. ಅಲ್ಲದೆ, ಅಧಿಕಾರಿಗಳಿಂದ ನೇರ ವರ್ಗಾವಣೆ ಪಟ್ಟಿ ತಯಾರಿಕೆ ವೇಳೆ ಮಾರ್ಗಸೂಚಿ ಉಲ್ಲಂಘನೆಯ ಆರೋಪ ಹಿನ್ನೆಲೆ ವರ್ಗಾವಣೆ ಮಾಡಿರುವ ಅಧಿಕಾರಿಗಳ ಸೇವಾ ವಿವರ ನೀಡುವಂತೆ ಸಚಿವರು ಟಿಪ್ಪಣಿ ಕಳಿಸಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:55 am, Sat, 4 November 23

ತಾಜಾ ಸುದ್ದಿ
ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಸ್ವಿಮ್ಮಿಂಗ್; ಇಲ್ಲಿದೆ ವಿಡಿಯೋ
ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಸ್ವಿಮ್ಮಿಂಗ್; ಇಲ್ಲಿದೆ ವಿಡಿಯೋ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಚೆಂಡಿಯಾದಲ್ಲಿ ಮನೆಗಳು ಜಲಾವೃತ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಚೆಂಡಿಯಾದಲ್ಲಿ ಮನೆಗಳು ಜಲಾವೃತ
ಟೀಮ್ ಇಂಡಿಯಾ ವಿಜಯಯಾತ್ರೆ ವೇಳೆ ಪಾಕಿಸ್ತಾನ್ ಘೋಷಣೆ ಕೂಗಿದ ಫ್ಯಾನ್ಸ್..!
ಟೀಮ್ ಇಂಡಿಯಾ ವಿಜಯಯಾತ್ರೆ ವೇಳೆ ಪಾಕಿಸ್ತಾನ್ ಘೋಷಣೆ ಕೂಗಿದ ಫ್ಯಾನ್ಸ್..!
ಕೊಡಗು: ತಡ ರಾತ್ರಿ ನಡು ರಸ್ತೆಯಲ್ಲಿ ಲಾರಿ ತಡೆದು ತರಕಾರಿ ಭಕ್ಷಿಸಿದ ಗಜರಾಜ
ಕೊಡಗು: ತಡ ರಾತ್ರಿ ನಡು ರಸ್ತೆಯಲ್ಲಿ ಲಾರಿ ತಡೆದು ತರಕಾರಿ ಭಕ್ಷಿಸಿದ ಗಜರಾಜ
Mohammed Siraj: ಮೊಹಮ್ಮದ್ ಸಿರಾಜ್​ಗೆ ಅದ್ಧೂರಿ ಸ್ವಾಗತ
Mohammed Siraj: ಮೊಹಮ್ಮದ್ ಸಿರಾಜ್​ಗೆ ಅದ್ಧೂರಿ ಸ್ವಾಗತ
ದರ್ಶನ್​ಗೆ ಲಕ್ಷ ಲಕ್ಷ ಹಣ ಕೊಟ್ಟಿದ್ದಕ್ಕೆ ಕಾರಣ ನೀಡಿದ ಮಾಜಿ ಮೇಯರ್
ದರ್ಶನ್​ಗೆ ಲಕ್ಷ ಲಕ್ಷ ಹಣ ಕೊಟ್ಟಿದ್ದಕ್ಕೆ ಕಾರಣ ನೀಡಿದ ಮಾಜಿ ಮೇಯರ್
ಕ್ಲಿಕ್ ಮಾಡುತ್ತಿದ್ದಂತೆ ಇನ್​ಸ್ಟಂಟ್ ಫೋಟೊ ಪ್ರಿಂಟ್
ಕ್ಲಿಕ್ ಮಾಡುತ್ತಿದ್ದಂತೆ ಇನ್​ಸ್ಟಂಟ್ ಫೋಟೊ ಪ್ರಿಂಟ್
Nithya Bhavishya: ಈ ರಾಶಿಯವರು ಹಣ ಕಳೆದುಕೊಂಡು ಚಿಂತಿತರಾಗುವ ಸಾಧ್ಯತೆ
Nithya Bhavishya: ಈ ರಾಶಿಯವರು ಹಣ ಕಳೆದುಕೊಂಡು ಚಿಂತಿತರಾಗುವ ಸಾಧ್ಯತೆ
Daily Devotional: ಸಾವಿನ ಮನೆಯಲ್ಲಿ ಈ ಕೆಲಸ ಯಾವತ್ತೂ ಮಾಡಬೇಡಿ
Daily Devotional: ಸಾವಿನ ಮನೆಯಲ್ಲಿ ಈ ಕೆಲಸ ಯಾವತ್ತೂ ಮಾಡಬೇಡಿ
ತುಮಕೂರಿನಲ್ಲಿ ವಿದ್ಯುತ್​ ಟ್ರಾನ್ಸ್​ಫಾರ್ಮರ್ ಏರಿ ​​ವ್ಯಕ್ತಿಯ ಹುಚ್ಚಾಟ
ತುಮಕೂರಿನಲ್ಲಿ ವಿದ್ಯುತ್​ ಟ್ರಾನ್ಸ್​ಫಾರ್ಮರ್ ಏರಿ ​​ವ್ಯಕ್ತಿಯ ಹುಚ್ಚಾಟ