ನಿರಂತರ ಕಾರ್ಯಚರಣೆ ನಡೆಸಿದರೂ ಸಿಗದ ಹುಲಿರಾಯ, ಕೊನೆಗೆ ವ್ಯಾಘ್ರನ ಬಂಧನಕ್ಕೆ ಬಂದ ಗಜರಾಜರು!

ಮೈಸೂರು ಜಿಲ್ಲೆಯ ಹುಣಸೂರು, ಹೆಚ್​ಡಿ ಕೋಟೆ, ಪಿರಿಯಾಪಟ್ಟಣ ಹಾಗೂ ನಂಜನಗೂಡು ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರಿದೆ. ಆಹಾರ ಅರಸಿ ಕಾಡಿನಿಂದ ನಾಡಿಗೆ ಬರುವ ಕಾಡು ಪ್ರಾಣಿಗಳು, ರೈತರ ನಿದ್ದೆಗೆಡಿಸಿವೆ. ಅದರಲ್ಲೂ ಬಂಡೀಪುರ ಅರಣ್ಯದ ಹೆಡಿಯಾಲ ವಲಯ ವ್ಯಾಪ್ತಿಯಲ್ಲಿ ಹುಲಿ ಕಾಟ ಶುರುವಾಗಿದ್ದು, ಈಗಾಗಲೇ ಓರ್ವ ವ್ಯಕ್ತಿಯನ್ನು ಬಲಿ ಪಡೆದುಕೊಂಡಿದೆ. ಇದೀಗ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸತತ ಕಾರ್ಯಚರಣೆ ನಡೆಸಿದರೂ ಫಲ ನೀಡಿಲ್ಲ. ಇದೀಗ ಅಂತಿಮವಾಗಿ ಇದೀಗ ಆ ವ್ಯಾಘ್ರನ ಬಂಧನಕ್ಕೆ ಗಜರಾಜರುಗಳನ್ನು ಕರೆತರಲಾಗಿದೆ.

ನಿರಂತರ ಕಾರ್ಯಚರಣೆ ನಡೆಸಿದರೂ ಸಿಗದ ಹುಲಿರಾಯ, ಕೊನೆಗೆ ವ್ಯಾಘ್ರನ ಬಂಧನಕ್ಕೆ ಬಂದ ಗಜರಾಜರು!
Follow us
ದಿಲೀಪ್​, ಚೌಡಹಳ್ಳಿ
| Updated By: ರಮೇಶ್ ಬಿ. ಜವಳಗೇರಾ

Updated on: Nov 04, 2023 | 11:02 AM

ಮೈಸೂರು, (ನವೆಂಬರ್ 04): ಪ್ರಾಣಿಗಳು ಕಾಡಿನಿಂದ ನಾಡಿನೊಳಗೆ ಬರುತ್ತಿವೆ. ಅದರಲ್ಲೂ ಮೈಸೂರು ಭಾಗದಲ್ಲಿ ಚಿರತೆ, ಆನೆ, ಹುಲಿಗಳ ಕಾಟ ಮಿತಿ ಮೀರಿದ್ದು, ಹಲವು ಜನರು ಹಾಗೂ ಹಸು, ಮೇಕೆಗಳನ್ನು ಬಲಿ ಪಡೆದುಕೊಂಡಿವೆ. ಈ ಹಿನ್ನೆಲೆಯಲ್ಲಿ ಜನರು ಆತಂಕದಲ್ಲಿ ಜೀವನ ನಡೆಸುವಂತಾಗಿದೆ. ಅದರಂತೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ‌ ಹೆಡಿಯಾಲ ಗ್ರಾಮದಲ್ಲಿ ಮೊನ್ನೇ ಅಷ್ಟೇ ವ್ಯಕ್ತಿಯೋರ್ವನನ್ನು ಹುಲಿ ಬಲಿ ಪಡೆದುಕೊಂಡಿತ್ತು. ಇದೀಗ ಆ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಸತತ ಕಾರ್ಯಚರಣೆ ನಡೆಸಿದ್ದು, ಈಗ ವ್ಯಾಘ್ರನ ಪತ್ತೆಗೆ ಆನೆಗಳನ್ನು ಕರೆತರಲಾಗಿದೆ.

ಹೌದು… ಬಂಡೀಪುರ ಅರಣ್ಯದ ವಲಯ ವ್ಯಾಪ್ತಿಯ ಹೆಡಿಯಾಲ ಗ್ರಾಮದ ಕಳೆದ ಮೂರು ದಿನಗಳ ಹಿಂದೆ ವ್ಯಕ್ತಿಯ ಮೇಲೆ ದಾಳಿ ಮಾಡಿದ್ದ ಹುಲಿ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದ್ದು, ಕಾರ್ಯಚರಣೆ ಸಂದರ್ಭದಲ್ಲೇ ಹುಲಿ ಮೇಕೆಯನ್ನ ಹೊತ್ತೊಯ್ದಿತ್ತು.ಇದರೊಂದಿಗೆ ಹುಲಿ ಪದೇ ಪದೇ ಆತಂಕ ಸೃಷ್ಟಿಸಿದೆ. ಅಲ್ಲದೇ ಸ್ಥಳೀಯ ಜನರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ಇದರಿಂದ ಅರಣ್ಯ ಇಲಾಖೆ, ವ್ಯಾಘ್ರನ ಬಂಧನಕ್ಕೆ ಬಂಡೀಪುರ, ರಾಂಪುರ ಆನೆ ಕ್ಯಾಂಪ್​ನಿಂದ ಆನೆಗಳನ್ನು ಕರೆತಂದಿದೆ.

ಇದನ್ನೂ ಓದಿ: ಹಸು, ಕರುವಿನ ಮೇಲೆ ಹುಲಿ ದಾಳಿ; ಬಿಡಿಸಲು ಹೋದ ವ್ಯಕ್ತಿ ಮೇಲೂ ಎರಗಿದ ವ್ಯಾಘ್ರ

ಒಂದು ಕಡೆ ಬಂಡೀಪುರ ರಾಂಪುರ ಆನೆ ಕ್ಯಾಂಪ್​ನ‌ ಪಾರ್ಥಸಾರಥಿ, ಧರ್ಮ ಆನೆಗಳ ಮೂಲಕ ಶೋಧಕಾರ್ಯ ನಡೆಯುತ್ತಿದ್ದರೆ, ಮತ್ತೊಂದೆಡೆ ಸಿಬ್ಬಂದಿಯಿಂದ ಕಾಲ್ನಡಿಗೆಯಲ್ಲಿ ಕಾರ್ಯಚರಣೆ ನಡೆಯುತ್ತಿದೆ.

ಕೇವಲ ನಂಜನಗೂಡು ಭಾಗದ ಕಥೆಯಲ್ಲ. ಹೆಚ್ ಡಿ ಕೋಟೆ, ಹುಣಸೂರು, ಪಿರಿಯಾಪಟ್ಟಣ ಸೇರಿದಂತೆ ಹಲವು ಭಾಗಗಳಲ್ಲಿ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದೆ. ಕೇವಲ ಹುಲಿ ಮಾತ್ರವಲ್ಲ ಚಿರತೆ ಆನೆಗಳು ನಾಡಿಗೆ ಬರುವುದು ಹೆಚ್ಚಾಗುತ್ತಿದೆ. ಒಂದು ಕಡೆ ಬೆಳೆ ನಾಶದಿಂದ ಲಕ್ಷಾಂತರ ರೂಪಾಯಿ ನಷ್ಟವುಂಟಾದರೆ ಮತ್ತೊಂದು ಕಡೆ ಜೀವವೇ ಹೋಗುವ ಭಯ ಕಾಡಂಚಿನ ಗ್ರಾಮದ ಜನರನ್ನು ಕಾಡುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ