ವರ್ಗಾವಣೆ ದಂಧೆಯಲ್ಲಿ ಜೆಟಿ ಪಾಟೀಲ್ ಪಿಎ ಭಾಗಿ ಆರೋಪ; ಇದು ನಿಜ ಎಂದ ಮಾಜಿ ಸಚಿವ ಮುರುಗೇಶ್ ನಿರಾಣಿ
ಬೀಳಗಿ ಕ್ಷೇತ್ರದಲ್ಲಿ ಈ ಹಿಂದೆ ಪ್ರಗತಿಯಲ್ಲಿದ್ದ ಕೆಲಸಗಳನ್ನು ನಿಲ್ಲಿಸಿದ್ದಾರೆ. ಪರ್ಸೆಂಟೇಜ್ ಕೊಟ್ಟರೆ ಮಾತ್ರ ಶಾಸಕರು ಆ ಕೆಲಸ ಮಾಡಿಸುತ್ತಿದ್ದಾರೆ. ಇಷ್ಟೆಲ್ಲ ಇದ್ದರೂ ತಾವು ಪ್ರಾಮಾಣಿಕ ಶಾಸಕನೆಂದು ಬುರುಡೆ ಬಿಡುತ್ತಾರೆ. ಮುಂದಿನ ಬಾರಿ ನಾನು ವಿಧಾನಸಭೆ ಚುನಾವಣೆಗೆ ನಿಲ್ಲಲ್ಲ. ಹಾಗಾಗಿ ನನಗೆ ದುಡ್ಡು ಕೊಟ್ಟರೇ ಕೆಲಸ ಮಾಡಿ ಕೊಡುವುದು ಎಂದು ಬಹಿರಂಗವಾಗಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಬಳಿ ಹೇಳಿದ್ದಾರೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಬೆಂಗಳೂರು, ಅ.12: ವರ್ಗಾವಣೆ ದಂಧೆಯಲ್ಲಿ ಶಾಸಕ ಜೆಟಿ ಪಾಟೀಲ್(JT Patil) ಪಿ.ಎ ಪ್ರಕಾಶ್ ಬೀಳಗಿ ಎಂಬುವವರು ಭಾಗಿ ಆದ ಆರೋಪ ಕೇಳಿಬಂದಿತ್ತು. ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್(Dinesh Gundu Rao) ಆಪ್ತ ಕಾರ್ಯದರ್ಶಿ ಹಿದಾಯತ್ ಅವರು ಪ್ರಕಾಶ್ ಬೀಳಗಿ ವಿರುದ್ಧ ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ ‘ಶಾಸಕರ ಪಿಎ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿರುವುದು ನಿಜ. ಆರೋಗ್ಯ ಇಲಾಖೆ ಕಚೇರಿಗೆ ಹೋಗಿ ಪ್ರಕಾಶ್ ದಬ್ಬಾಳಿಕೆ ಮಾಡಿದ್ದಾರೆ. ಬೋರ್ವೆಲ್ ಕೊರೆಸುವುದು ಸೇರಿದಂತೆ ಎಲ್ಲಾ ಕೆಲಸಕ್ಕೂ ಜೆ.ಟಿ.ಪಾಟೀಲ್ ಪಿಎ ಮೂಲಕ ಪರ್ಸೆಂಟೇಜ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಬೀಳಗಿ ಕ್ಷೇತ್ರದಲ್ಲಿ ಈ ಹಿಂದೆ ಪ್ರಗತಿಯಲ್ಲಿದ್ದ ಕೆಲಸಗಳನ್ನು ನಿಲ್ಲಿಸಿದ್ದಾರೆ. ಪರ್ಸೆಂಟೇಜ್ ಕೊಟ್ಟರೆ ಮಾತ್ರ ಶಾಸಕರು ಆ ಕೆಲಸ ಮಾಡಿಸುತ್ತಿದ್ದಾರೆ. ಇಷ್ಟೆಲ್ಲ ಇದ್ದರೂ ತಾವು ಪ್ರಾಮಾಣಿಕ ಶಾಸಕನೆಂದು ಬುರುಡೆ ಬಿಡುತ್ತಾರೆ. ಮುಂದಿನ ಬಾರಿ ನಾನು ವಿಧಾನಸಭೆ ಚುನಾವಣೆಗೆ ನಿಲ್ಲಲ್ಲ. ಹಾಗಾಗಿ ನನಗೆ ದುಡ್ಡು ಕೊಟ್ಟರೇ ಕೆಲಸ ಮಾಡಿ ಕೊಡುವುದು ಎಂದು ಬಹಿರಂಗವಾಗಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಬಳಿ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರಕ್ಕೆ ಮುರುಗೇಶ್ ನಿರಾಣಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ವರ್ಗಾವಣೆ ದಂಧೆಯಲ್ಲಿ ಶಾಸಕ ಜೆಟಿ ಪಾಟೀಲ್ ಪಿಎ ಭಾಗಿ ಆರೋಪ; ಸಚಿವ ದಿನೇಶ್ ಗುಂಡೂರಾವ್ ಆಪ್ತ ಕಾರ್ಯದರ್ಶಿ ದೂರು
ಸಭೆಯಲ್ಲಿ ತಮ್ಮ ಪಿಎ ವಿರುದ್ಧ ದೂರಿನ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಜೆಟಿಪಿ ಗರಂ
ಇನ್ನು ಆರೋಗ್ಯ ಸಚಿವರ ಆಪ್ತ ಕಾರ್ಯದರ್ಶಿ ತಮ್ಮ ಪಿಎ ವಿರುದ್ದ ದೂರು ನೀಡಿದ ವಿಚಾರ ‘ಅದು ದೊಡ್ಡ ವಿಚಾರವಲ್ಲ, ಏನೇ ಇದ್ರೂ ಸಿಎಂ ಜೊತೆ ಮಾತನಾಡುತ್ತೀನಿ ಎಂದರು. ಹಕ್ಕು ಬಾಧ್ಯತಾ ಸಮಿತಿ ಸಭೆಯಲ್ಲಿ ತಮ್ಮ ಪಿಎ ವಿರುದ್ಧ ದೂರಿನ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಜೆಟಿ ಪಾಟೀಲ್ ಗರಂ ಆಗಿದ್ದು, ಜೊತೆಗೆ ಮಾಧ್ಯಮಗಳ ವಿರುದ್ಧವೂ ಶಾಸಕರು ಹರಿಹಾಯ್ದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ