ಕರುನಾಡನ್ನು ಕತ್ತಲೆಗೆ ದೂಡಿ ಇಂಧನ ಸಚಿವರು ಕಾಣೆಯಾಗಿದ್ದಾರೆ ಎಂದ ಬಿಜೆಪಿ: ದೆಹಲಿಯಿಂದಲೇ ಕೆಜೆ ಜಾರ್ಜ್ ತಿರುಗೇಟು

ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ವಿಚಾರ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ, ಒಂದಡೆ ರೈತರು ಸಮರ್ಪಕವಾಗಿ ವಿದ್ಯುತ್ ಕೊಡುವಂತೆ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದರೆ, ಮತ್ತೊಂದೆಡೆ ಪ್ರತಿಪಕ್ಷ ಬಿಜೆಪಿ, ಸರ್ಕಾರದ ವಿರುದ್ಧ ಪೋಸ್ಟರ್ ವಾರ್ ಶುರುಮಾಡಿದೆ. ಲೋಡ್‌ಶೆಡ್ಡಿಂಗ್‌ನಿಂದಾಗಿ ಕರುನಾಡು ಕಗ್ಗತ್ತಲಲ್ಲಿ ಮುಳುಗಿದೆ. ಆದ್ರೆ ಇಂಧನ ಸಚಿವ ಕೆ.ಜೆ.ಜಾರ್ಜ್ ಕಾಣೆಯಾಗಿದ್ದಾರೆ ಹುಡುಕಿಕೊಡಿ ಎಂದು ಪೋಸ್ಟರ್ ವೈರಲ್ ಮಾಡಿದೆ. ಇದೀಗ ಇದಕ್ಕೆ ಇಂಧನ ಸಚಿವ ಕೆ.ಜೆ. ಜಾರ್ಜ್​ ದೆಹಲಿಯಿಂದಲೇ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಕರುನಾಡನ್ನು ಕತ್ತಲೆಗೆ ದೂಡಿ ಇಂಧನ ಸಚಿವರು ಕಾಣೆಯಾಗಿದ್ದಾರೆ ಎಂದ ಬಿಜೆಪಿ: ದೆಹಲಿಯಿಂದಲೇ ಕೆಜೆ ಜಾರ್ಜ್ ತಿರುಗೇಟು
ಇಂಧನ ಸಚಿವ ಕೆ.ಜೆ. ಜಾರ್ಜ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Oct 13, 2023 | 11:31 AM

ನವದೆಹಲಿ, (ಅಕ್ಟೋಬರ್ 13): ಕರ್ನಾಟಕದಲ್ಲಿ (Karnataka) ವಿದ್ಯುತ್ (Power) ಕಕಣ್ಣಾಮುಚ್ಚಾಲೆ ಆಡುತ್ತಿದ್ದು, ಜನರನ್ನ ಕತ್ತಲೆಗೆ ದೂಡುತ್ತಿದೆ. ಬರದ ನಡುವೆ ಅಘೋಷಿತ ಲೋಡ್ ಶೆಡ್ಡಿಂಗ್‌ನಿಂದಾಗಿ ರೈತರಿಗೆ ಗಾಯದ ಮೇಲೆ ಮತ್ತೆ ಬರೆ ಎಳೆದಿದೆ. ಇದರಿಂದ ಕಂಗೆಟ್ಟ ಅನ್ನದಾತರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದು, ವಿದ್ಯುತ್ ಪೂರೈಕೆ ಕಂಪನಿಗಳಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕುತ್ತಿದ್ದಾರೆ. ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಪೋಸ್ಟರ್ ವಾರ್ ಶುರುಮಾಡಿದೆ. ಲೋಡ್‌ಶೆಡ್ಡಿಂಗ್‌ನಿಂದಾಗಿ ಕರುನಾಡು ಕಗ್ಗತ್ತಲಲ್ಲಿ ಮುಳುಗಿದೆ. ಆದ್ರೆ ಇಂಧನ ಸಚಿವ ಕೆ.ಜೆ.ಜಾರ್ಜ್ (kj george) ಕಾಣೆಯಾಗಿದ್ದಾರೆ ಹುಡುಕಿಕೊಡಿ ಎಂದು ಪೋಸ್ಟರ್ ವೈರಲ್ ಮಾಡಿದೆ. ಇನ್ನು ಇದಕ್ಕೆ ಸ್ವತಃ ಇಂಧನ ಸಚಿವ ಕೆಜೆ ಜಾರ್ಜ್ ಪ್ರತಿಕ್ರಿಯಿಸಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜೆ ಜಾರ್ಜ್, ಬಿಜೆಪಿಯವರು 4 ವರ್ಷಗಳ ಕಾಲ ಇಂಧನ ಇಲಾಖೆಯಲ್ಲಿ ಏನು ಕೆಲಸ ಮಾಡಿಲ್ಲ. ಬಿಜೆಪಿ ಫೆಲ್ಯೂವರ್​ನಿಂದ ಈಗ ನಮಗೆ ಸಮಸ್ಯೆ ಉಂಟಾಗಿದೆ. ಡಿಕೆ ಶಿವಕುಮಾರ್​ ಇಂಧನ ಸಚಿವರಾಗಿದ್ದಾಗ ವಿದ್ಯುತ್ ಹೆಚ್ಚಿಸಿದ್ದೆವು. ಆದ್ರೆ, ಬಿಜೆಪಿ ಸರ್ಕಾರ ಈ ಹಿಂದೆ ಕೂಡಗಿಯಿಂದ 250 ಮೇಗಾ ವಾರ್ಟ್​ ವಿದ್ಯುತ್​ ತೆಗೆದುಕೊಳ್ಳದೆ ದೆಹಲಿಯವರಿಗೆ ಬಿಟ್ಟು ಕೊಟ್ಟಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ವಿದ್ಯುತ್ ಲೋಡ್​ ಶೆಡ್ಡಿಂಗ್: ಕೊನೆಗೂ ಸತ್ಯ ಒಪ್ಪಿಕೊಂಡ ಡಿಕೆ ಶಿವಕುಮಾರ್

ನಾವು ಲೋಡ್​ ಶೆಡ್ಡಿಂಗ್ ಮಾಡುತ್ತಿಲ್ಲ. ಸ್ವಲ್ಪ ದಿನಗಳಲ್ಲಿ ಸರಿ ಹೋಗುತ್ತದೆ. ನಾನು ಎಲ್ಲಿ ಹೋಗಿದ್ದೇನೆ ಎನ್ನುವುದನ್ನ ಪೋಸ್ಟ್​ ಮಾಡಿದ್ದೆ. ನಾನು ಕತ್ತಲೆಗೆ ತಳ್ಳಿಲ್ಲ ಬಿಜೆಪಿಯವರು ಕತ್ತಲಿಗೆ ತಳ್ಳಿದ್ದಾರೆ.. 4 ತಿಂಗಳಿನಿಂದ ಕತ್ತಲಿನಲ್ಲಿದ್ದ ರಾಜ್ಯ ಬೆಳಕಿಗೆ ಬಂದಿದೆ. ಬಿಜೆಪಿಯವರು ಕತ್ತಲೆಯಲ್ಲೇ ಇದ್ದರು. ಅದಕ್ಕೆ ಜನ ಬಿಜೆಪಿಯವರಿಗೆ ಬುದ್ದಿ ಕಲಿಸಿದ್ದಾರೆ. ಅಧಿಕಾರ ಕಳೆದುಕೊಂಡಿರುವುದರಿಂದ ಏನಾದ್ರು ಮಾಡಬೇಕು ಎಂದು ಹೀಗೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಕುಸುಮಾ ಯೋಜನೆಯನ್ನು ಬಿಜೆಪಿ ಏನು ಮಾಡಲಿಲ್ಲ. ಕುಮಾರಸ್ವಾಮಿ, ರೇವಣ್ಣನವರನ್ನು ಕೇಳಿ ಎಂದ ಜಾರ್ಜ್, ವಿದ್ಯುತ್ ​​ ಸಮಸ್ಯೆ ಆಗದಂತೆ ಮುಖ್ಯಮಂತ್ರಿಗಳು ಮೀಟಿಂಗ್ ಮಾಡುತ್ತಿದ್ದಾರೆ. ಸೆಕ್ಷನ್ 11ನ್ನು ಜಾರಿಗೆ ಮಾಡುತ್ತೆವೆ. ವಿದ್ಯುತ್ ​ ಉತ್ಪಾದನೆ ಮಾಡುವ ಖಾಸಗಿಯವರಿಂದಲೂ ವಿದ್ಯುತ್​ ಪಡೆದುಕೊಳ್ಳುತ್ತೇವೆ. ಉತ್ತರ ಪ್ರದೇಶ ಹಾಗೂ ಪಂಜಾಬ್​ನಿಂದ ಹೆಚ್ಚಿಗೆ ವಿದ್ಯುತ್​ ಪಡೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:31 am, Fri, 13 October 23