Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ ಮಾಟ ಮಂತ್ರ ಮಾಡಿಸಿದ್ದರು; ಅದರಿಂದಲೇ‌ JDS ಅಸೆಂಬ್ಲಿ ಚುನಾವಣೆ ಸೋತಿದ್ದು ಎಂದ ಬಂಡೆಪ್ಪ ಕಾಶಂಪೂರ

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ (karnataka assembly elections 2023) ಜೆಡಿಎಸ್ ಪಕ್ಷದ (jds) ಸೋಲಿಗೆ ಕಾರಣ ಎನು ಎಂಬುದನ್ನು ಪಕ್ಷದ ಮಾಜಿ ಶಾಸಕ ಬಂಡೆಪ್ಪ ಕಾಶಂಪೂರ ಕಂಡುಹಿಡಿದಿದ್ದಾರೆ. ಇದು ನಿಮಗೆ ಯಾರಿಗೂ ಅರ್ಥ ಆಗಿಲ್ಲ. ಮಾಟ ಮಂತ್ರ ಮಾಡಿರೋದು ನೂರಕ್ಕೆ ನೂರು ನಿಜ. ಕಾಂಗ್ರೆಸ್ ನವರಿಗೆ 135 ಸೀಟ್ ಬರುತ್ತೆ ಅನ್ನೋದ ಗೊತ್ತಿರಲಿಲ್ಲ. ನಾವು 55 ಸೀಟ್ ಗೆಲ್ಲಬೇಕಿತ್ತು ಎಂದು ವ್ಯಾಖ್ಯಾನಿಸಿದ್ದಾರೆ.

ಕೇರಳ ಮಾಟ ಮಂತ್ರ ಮಾಡಿಸಿದ್ದರು; ಅದರಿಂದಲೇ‌ JDS ಅಸೆಂಬ್ಲಿ ಚುನಾವಣೆ ಸೋತಿದ್ದು ಎಂದ ಬಂಡೆಪ್ಪ ಕಾಶಂಪೂರ
ಮಾಟ ಮಂತ್ರದಿಂದಲೇ‌ ನಾವು ಅಸೆಂಬ್ಲಿ ಚುನಾವಣೆ ಸೋತಿದ್ದು ಎಂದ ಬಂಡೆಪ್ಪ ಕಾಶಂಪೂರ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 12, 2023 | 5:36 PM

ಹುಬ್ಬಳ್ಳಿ, ಅಕ್ಟೋಬರ್​ 12 : ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ (karnataka assembly elections 2023) ಜೆಡಿಎಸ್ ಪಕ್ಷದ (jds) ಸೋಲಿಗೆ ಕಾರಣ ಎನು ಎಂಬುದನ್ನು ಪಕ್ಷದ ಮಾಜಿ ಶಾಸಕ ಬಂಡೆಪ್ಪ ಕಾಶಂಪೂರ ಕಂಡುಹಿಡಿದಿದ್ದಾರೆ. ಪಕ್ಷದ ಪುನಃಶ್ಚೇತನ ಪರ್ವದಲ್ಲಿ ಭಾಷಣ ಮಾಡಿದ ಕಾಶಂಪೂರ ಅವರು (Former JDS MLA Bandeppa Kashampura) ಮಾಟ ಮಂತ್ರದಿಂದಲೇ‌ ನಾವು ಸೋತಿದ್ದು ಎಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಕೇರಳ ಮಾದರಿ ಮಾಟ ಮಂತ್ರದಿಂದಲೇ (Kerala witchcraft) ನಾವು ಸೋತಿದ್ದು. ಕಳೆದ ಚುನಾವಣೆಯಲ್ಲಿ ನಾವು 37 ಜ‌ನ ಗೆದ್ದಿದ್ವಿ. ಅದರಲ್ಲಿ ಏಳು ಜನ ಹೋಗಿ 30 ಜನ ಉಳಿದುಕೊಂಡಿದ್ವಿ. ಆದರೆ ಆ 30 ಜನರಲ್ಲಿ ಕೇವಲ ನಾಲ್ಕು ಜನ ಗೆದ್ದಿದ್ದಾರೆ. ಉಳಿದವರು ಸೋಲಲು‌ ಮಾಟ ಮಂತ್ರ ಕಾರಣ ಎಂದು ಬಂಡೆಪ್ಪ ಹೇಳಿದ್ದಾರೆ.

ಇದು ನಿಮಗೆ ಯಾರಿಗೂ ಅರ್ಥ ಆಗಿಲ್ಲ. ಮಾಟ ಮಂತ್ರ ಮಾಡಿರೋದು ನೂರಕ್ಕೆ ನೂರು ನಿಜ. ಕಾಂಗ್ರೆಸ್ ನವರಿಗೆ 135 ಸೀಟ್ ಬರುತ್ತೆ ಅನ್ನೋದ ಗೊತ್ತಿರಲಿಲ್ಲ. ನಾವು 55 ಸೀಟ್ ಗೆಲ್ಲಬೇಕಿತ್ತು ಎಂದು ಬಂಡೆಪ್ಪ ಕಾಶಂಪೂರ ವ್ಯಾಖ್ಯಾನಿಸಿದ್ದಾರೆ.

Also Read: ಮೈತ್ರಿಗೆ ವಿರೋಧವಿಲ್ಲ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪಕ್ಷ ಬಿಡುವುದಿಲ್ಲ: ಶಾಸಕ ಜಿಟಿ ದೇವೇಗೌಡ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೂ ಸ್ಥಾನವನ್ನ ಗೆಲ್ಲಬಾರದು. ಕಾಂಗ್ರೆಸ್ ವಿರುದ್ದ ಅವರದೇ 35 ಶಾಸಕರು ದಿನಾ ಒಂದು ಡೈಲಾಗ್ ಹೊಡಿತೀದಾರೆ. ಇನ್ನೊಂದು 20 ರಿಂದ 25 ಜನ ಡೈಲಾಗ್ ಹೊಡೆದರೂ ಸರ್ಕಾರದ ಕಥೆ ಮುಗೀತು ಎಂದು ಕಾಶಂಪೂರ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ (karnataka assembly elections 2023) ಜೆಡಿಎಸ್ ಪಕ್ಷದ (jds) ಸೋಲಿಗೆ ಕಾರಣ ಎನು ಎಂಬುದನ್ನು ಪಕ್ಷದ ಮಾಜಿ ಶಾಸಕ ಬಂಡೆಪ್ಪ ಕಾಶಂಪೂರ ಕಂಡುಹಿಡಿದಿದ್ದಾರೆ. ಇದು ನಿಮಗೆ ಯಾರಿಗೂ ಅರ್ಥ ಆಗಿಲ್ಲ. ಮಾಟ ಮಂತ್ರ ಮಾಡಿರೋದು ನೂರಕ್ಕೆ ನೂರು ನಿಜ. ಕಾಂಗ್ರೆಸ್ ನವರಿಗೆ 135 ಸೀಟ್ ಬರುತ್ತೆ ಅನ್ನೋದ ಗೊತ್ತಿರಲಿಲ್ಲ. ನಾವು 55 ಸೀಟ್ ಗೆಲ್ಲಬೇಕಿತ್ತು ಎಂದು ವ್ಯಾಖ್ಯಾನಿಸಿದ್ದಾರೆ.

ಪಂಚ ರಾಜ್ಯಗಳ ಅಸೆಂಬ್ಲಿ ಚುನಾವಣೆಗೆ ಕರ್ನಾಟಕದಿಂದ ಹಣ ಹೋಗ್ತಿದೆ -ಜಿ.ಟಿ.ದೇವೇಗೌಡ

ಇನ್ನು ಇದೇ ವೇಳೆ ಮಾತನಾಡಿದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಪಂಪಸೆಟ್​ಗಳಿಗೆ ಕರೆಂಟ್ ಇಲ್ಲ, ರೈತರ ಆತ್ಮಹತ್ಯೆ 6ನೇ ಗ್ಯಾರಂಟಿಯಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ ಸರ್ಕಾರ ಒಂದು ಕಾಳು ಅಕ್ಕಿಯನ್ನೂ ಕೂಡ ಕೊಟ್ಟಿಲ್ಲ. ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆ ಎಲ್ಲವೂ ಬೋಗಸ್​ ಎಂದು ವಾಗ್ದಾಳಿ ನಡೆಸಿದರು.

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕರ್ನಾಟಕದಿಂದ ಹಣ ಹೋಗ್ತಿದೆ. ಚುನಾವಣೆಗಾಗಿ ಲಂಚದ ದುಡ್ಡನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದ ಜಿಟಿಡಿ, ಯಾರು ಏನೇ ಎನ್ನಲಿ ಮತ್ತೆ ಮೋದಿ‌ಯನ್ನು ಪ್ರಧಾನಿ‌ ಮಾಡೋಣ ಎಂದು ಹುಬ್ಬಳ್ಳಿ ಜೆಡಿಎಸ್​ ಸಮಾವೇಶದಲ್ಲಿ ಕರೆಕೊಟ್ಟರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:26 pm, Thu, 12 October 23

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ