Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ ಅಗ್ರಗಣ್ಯ ನಾಯಕನಾಗಿ ಬೆಳೆದಿರುವ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕಿದೆ: ಹೆಚ್ ಡಿ ದೇವೇಗೌಡ

ವಿಶ್ವದ ಅಗ್ರಗಣ್ಯ ನಾಯಕನಾಗಿ ಬೆಳೆದಿರುವ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕಿದೆ: ಹೆಚ್ ಡಿ ದೇವೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 01, 2023 | 6:19 PM

ಅನುಭವಿ ರಾಜಕಾರಣಿ ದೇವೇಗೌಡ ತಮ್ಮ ರಾಜಕೀಯ ಚಾಣಾಕ್ಷ್ಯತೆಯನ್ನು ಕಾರ್ಯಕರ್ತರೊಂದಿಗೆ ಮಾತಾಡುವಾಗ ಪ್ರದರ್ಶಿಸಿದರು. ಹಾಲಿ ಶಾಸಕ ಪ್ರಜ್ವಲ್ ರೇವಣ್ಣ ಅವರೇ ಹಾಸನ ಲೋಕ ಸಭಾ ಕ್ಷೇತ್ರದಿಂದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಎಂದು ಅವರು ಹೇಗೆ ಹೇಳುತ್ತಾರೆ ಅನ್ನೋದನ್ನು ಗಮನಿಸಿ! ವಿಧಾನ ಸಭಾ ಚುನಾವಣೆಯಲ್ಲಿ ಹಾಸನದಿಂದ ಸೋತ ಬಿಜೆಪಿಯ ಪ್ರೀತಂ ಗೌಡ, ದೇವೇಗೌಡರ ಮಾತಿಗೆ ಹೇಗೆ ಪ್ರತಿಕ್ರಿಯಿಸುತ್ತಾರೋ ಕಾದು ನೋಡಬೇಕು.

ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಶ್ರೀರಾಮದೇವರ ಕಟ್ಟೆಯಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡ (HD Devegowda) ಅವರು, ಹಿಂದೆ ಬಿಜೆಪಿ ವಿರುದ್ಧ ಹೋರಾಟ ಮಾಡಿದು ಸತ್ಯ ಆದರೆ ಈಗ ಅದನ್ನೆಲ್ಲ ಮರೆತು ಒಟ್ಟಾಗಿ ಕೆಲಸ ಮಾಡಿ ಲೋಕ ಸಭಾ ಚುನಾವಣೆಯಲ್ಲಿ ಗೆದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಕೈ ಬಲಪಡಿಸಬೇಕೆಂದು ಕರೆ ನೀಡಿದರು. ಪ್ರಧಾನಿ ಮೋದಿಯವರು ದೊಡ್ಡ ವ್ಯಕ್ತಿಯಾಗಿ ಬೆಳೆದಿದ್ದಾರೆ, ಕೇವಲ ಭಾರತ ಮಾತ್ರವಲ್ಲ ಇಡೀ ವಿಶ್ವದಲ್ಲೇ ಅಗ್ರಗಣ್ಯ ನಾಯಕನೆಂದು (world’s prominent leader) ಗುರುತಿಸಿಕೊಂಡಿದ್ದಾರೆ ಎಂದು ದೇವೇಗೌಡ ಹೇಳಿದರು. ಬಿಜೆಪಿಯ ರಾಜ್ಯಾಧ್ಯಕ್ಷನಾಗಿ ಆಯ್ಕೆಯಾದ ಬಳಿಕ ಬಿಎಸ್ ಯಡಿಯೂರಪ್ಪನವರ ಮಗ ಬಿವೈ ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕರಾಗಿ ನೇಮಕಗೊಂಡ ಮೇಲೆ ಆರ್ ಅಶೋಕ ಬಂದು ತಮ್ಮೊಂದಿಗೆ ಮಾತಾಡಿದ್ದಾರೆ. ಹಾಗಾಗಿ, ಹಿಂದಿನ ದ್ವೇಷ, ಅಸೂಯೆ ಕೋಪ-ತಾಪ, ಅಸಮಾಧಾನ ಎಲ್ಲವನ್ನು ಮರೆತು ಒಂದಾಗಿ, ಒಟ್ಟಾಗಿ ಹೊರಾಡೋಣ ಎಂದು ದೇವೇಗೌಡ ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ