ಅಸಲಿಗೆ ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ಕ್ರಿಕೆಟ್ ವಿಶ್ವಕ್ಕೆ ಮುರಳಿ ಅಂತಲೇ ಚಿರಪರಿಚಿತರಾಗಿರುವ ಶ್ರೀಲಂಕಾದ ಸ್ಲಿನ್ ಮಾಂತ್ರಿಕ ಟೆಸ್ಟ್ ಕ್ರಿಕೆಟ್ ನಲ್ಲಿ 800 ವಿಕೆಟ್ ಪಡೆದಿರುವುದು ಪ್ರಾಯಶಃ ಯಾವುದೇ ಬೌಲರ್ ಸರಿಗಟ್ಟಲಾಗದ ದಾಖಲೆಯಾಗಿ ಉಳಿದುಬಿಡಲಿದೆ. ಮುರಳಿಯ ತಂದೆತಾಯಿ ಭಾತೀಯಯ ಮೂಲದವರು ಮತ್ತು ಲಂಕಾದ ಮಾಜಿ ಆಟಗಾರ ಮದುವೆಯಾಗಿರೋದು ಚೆನೈನ ಮಧಿಮಲಾರ್ ರಾಮಮೂರ್ತಿ ಹೆಸರಿನ ಯುವತಿಯನ್ನು! ದಂಪತಿಗೆ ನರೆನ್ ಹೆಸರಿನ ಮಗನಿದ್ದಾನೆ.
ಬೆಂಗಳೂರು: ಗ್ಲಾಸ್ ನಿಂದ ತಯಾರಿಸಿದ ಪಿಚ್ ಮೇಲೂ ಈ ಮಹಾಶಯ ಕ್ರಿಕೆಟ್ ಬಾಲನ್ನು ಸ್ಪಿನ್ ಮಾಡುತ್ತಾನೆ ಅಂತ ಪೊಲಿಟಿಶಿಯನ್ ಟರ್ನ್ಡ್ ಕ್ರಿಕೆಟರ್ ಮೊಹ್ಮಮ್ಮದ್ ಅಜರುದ್ದೀನ್ (Mohammad Azharuddin) ಹೇಳಿದ್ದು ಯಾರ ವಿಷಯದಲ್ಲಿ ಗೊತ್ತಾ? ಇಲ್ಲಿ ದೃಶ್ಯಗಳಲ್ಲಿ ಕಾಣುತ್ತಿದ್ದಾರಲ್ಲ ಮುತ್ತಯ್ಯ ಮುರಳೀಧರನ್ (Muttiah Muralitharan)! ಮುರಳಿಯ ಖ್ಯಾತಿ ಬೇರೆ ಗ್ರಹಗಳವರೆಗೆ ಹಬ್ಬಿದೆ ಅಂದರೆ ತಪ್ಪಾಗಲಾರದು. ಇವರ ಕರೀಯರ್ ಮತ್ತು ಬದುಕನ್ನು ಆಧಾರಿತ (biopic) ಬಯೋಪಿಕ್ ‘800’ ಹೆಸರಲ್ಲಿ ತಯಾರಾಗಿದ್ದು, ಒಟಿಟಿ ಪ್ಲಾಟ್ಫಾರ್ಮೊಂದರಲ್ಲಿ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುರಳೀಧರನ್ ಚಿತ್ರದ ಪ್ರಮೋಶನ್ ಗೆ ಅಂತ ಬೆಂಗಳೂರಿಗೆ ಬಂದಿದ್ದಾರೆ. ಟಿವಿ9 ಕನ್ನಡ ವಾಹಿನಿಯ ವರದಿಗಾರ್ತಿಯೊಂದಿಗೆ ಅವರು ತಮ್ಮ ಬೇರು, ಸಂಗಾತಿ, ಕ್ರಿಕೆಟ್, ಆರ್ ಸಿಬಿ, ಮೊದಲಾದ ಸಂಗತಿಗಳ ಬಗ್ಗೆ ಮಾತಾಡಿದ್ದಾರೆ. 800 ಸಿನಿಮಾ ಬಗ್ಗೆ ಅವರು ತೀವ್ರ ಉತ್ಸುಕರಾಗಿದ್ದಾರೆ. ಅಸಲಿಗೆ ಅವರಿಗೆ ತಮ್ಮ ಬಯೋಪಿಕ್ ಬೇಕಿರಲಿಲ್ಲವಂತೆ. ಆಮೇಲೆ ಅವರ ಮ್ಯಾನೇಜರ್ ಮತ್ತು ಸಿನಿಮಾದ ನಿರ್ದೇಶಕ ಎಮ್ ಎಸ್ ಶ್ರೀಪತಿ ಕನ್ವಿನ್ಸ್ ಮಾಡಿದರಂತೆ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ಪರ 3 ಸೀಸನ್ ಆಡಿದ್ದರಿಂದ ಕನ್ನಡಿಗರೊಂದಿಗೆ ಗಾಢವಾದ ನಂಟಿದೆ ಅಂತ ಅವರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ