ಶೀಘ್ರವೇ ಒಟಿಟಿಗೆ ಬರಲಿದೆ ಮುತ್ತಯ್ಯ ಮುರಳೀಧರನ್‌ ಬಯೋಪಿಕ್​ ‘800’: ಇಲ್ಲಿದೆ ವಿವರ..

ಖ್ಯಾತ ಕ್ರಿಕೆಟ್ ಆಟಗಾರ ಮುತ್ತಯ್ಯ ಮುರಳೀಧರನ್ ಅವರ ವೈಯಕ್ತಿಕ ಜೀವನ ಮತ್ತು ವೃತ್ತಿ ಬದುಕಿನ ಸಾಧನೆಗಳನ್ನು ‘800’ ಸಿನಿಮಾದಲ್ಲಿ ತೋರಿಸಲಾಗಿದೆ. ಡಿಸೆಂಬರ್ 2ರಿಂದ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಈ ಚಿತ್ರ ಸ್ಟ್ರೀಮ್​ ಆಗಲಿದೆ. ಕನ್ನಡದಲ್ಲಿಯೂ ವೀಕ್ಷಣೆಗೆ ಲಭ್ಯವಾಗುತ್ತಿದೆ ಎಂಬುದು ವಿಶೇಷ.

ಶೀಘ್ರವೇ ಒಟಿಟಿಗೆ ಬರಲಿದೆ ಮುತ್ತಯ್ಯ ಮುರಳೀಧರನ್‌ ಬಯೋಪಿಕ್​ ‘800’: ಇಲ್ಲಿದೆ ವಿವರ..
‘800’ ಸಿನಿಮಾ
Follow us
|

Updated on:Nov 21, 2023 | 5:09 PM

ಹೊಸ ಸಿನಿಮಾಗಳನ್ನು ಜನರಿಗೆ ತಲುಪಿಸುವಲ್ಲಿ ಒಟಿಟಿ ಪ್ಲಾಟ್​ಫಾರ್ಮ್​ಗಳ ನಡುವೆ ಪೈಪೋಟಿ ಇದೆ. ‘ಜಿಯೋ ಸಿನಿಮಾ’ (Jio Cinema) ಒಟಿಟಿ ಕೂಡ ಅನೇಕ ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡುತ್ತಿದೆ. ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿದ್ದ 800’ ಸಿನಿಮಾ (800 Movie) ಕೂಡ ಶೀಘ್ರದಲ್ಲೇ ‘ಜಿಯೋ ಸಿನಿಮಾ’ದಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಅಂದಹಾಗೆ, ಇದು ಖ್ಯಾತ ಕ್ರಿಕೆಟರ್​ ಮುತ್ತಯ್ಯ ಮುರಳೀಧರನ್‌ (Muttiah Muralitharan) ಅವರ ಜೀವನವನ್ನು ಆಧರಿಸಿ ಸಿದ್ಧವಾದ ಸಿನಿಮಾ. ಈ ಚಿತ್ರಕ್ಕೆ ಎಂ.ಎಸ್‌. ಶ್ರೀಪತಿ ನಿರ್ದೇಶನ ಮಾಡಿದ್ದಾರೆ. ಡಿಸೆಂಬರ್ 2ರಿಂದ ಒಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮ್​ ಆಗಲಿದೆ.

ಶ್ರೀಲಂಕಾದ ಕ್ರಿಕೆಟ್ ಆಟಗಾರ ಮುತ್ತಯ್ಯ ಮುರಳೀಧರನ್ ಅವರ ವೈಯಕ್ತಿಕ ಜೀವನ ಮತ್ತು ವೃತ್ತಿ ಬದುಕಿನ ಸಾಧನೆಗಳನ್ನು ‘800’ ಸಿನಿಮಾದಲ್ಲಿ ತೋರಿಸಲಾಗಿದೆ. ಟೆಸ್ಟ್​ ಕ್ರಿಕೆಟ್​ನಲ್ಲಿ ಬರೋಬ್ಬರಿ 800 ವಿಕೆಟ್​ಗಳನ್ನು ಪಡೆದಿದ್ದು ಮುತ್ತಯ್ಯ ಮುರಳೀಧರನ್​ ಅವರ ಸಾಧನೆ. ಅದೇ ಕಾರಣಕ್ಕಾಗಿ ಈ ಸಿನಿಮಾಗೆ ಈ ಶೀರ್ಷಿಕೆ ಇಡಲಾಗಿದೆ. ಸಿನಿಪ್ರಿಯರಿಗೆ ಮತ್ತು ಕ್ರಿಕೆಟ್​ ಪ್ರೇಮಿಗಳಿಗೆ ಈ ಸಿನಿಮಾ ಇಷ್ಟ ಆಗಲಿದೆ. ವಿವೇಕ್‌ ರಂಗಾಚಾರಿ ನಿರ್ಮಾಣ ಮಾಡಿರುವ ಈ ಸಿನಿಮಾ ತಮಿಳು ಮಾತ್ರವಲ್ಲದೇ ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ ಹಾಗೂ ಕನ್ನಡದಲ್ಲಿಯೂ ವೀಕ್ಷಣೆಗೆ ಲಭ್ಯವಾಗುತ್ತಿದೆ.

ಇದನ್ನೂ ಓದಿ: ಸಚಿನ್ ಅಥವಾ ಸೆಹ್ವಾಗ್, ಯಾರಿಗೆ ಬೌಲಿಂಗ್ ಮಾಡುವುದು ಕಷ್ಟ? ಮುತ್ತಯ್ಯ ಮುರಳೀಧರನ್ ಉತ್ತರ ಹೀಗಿದೆ

ಸೆಲೆಬ್ರಿಟಿಗಳ ಬದುಕು ದೂರದಿಂದ ಒಂದು ರೀತಿ ಕಾಣುತ್ತದೆ. ಆದರೆ ಹತ್ತಿರದಿಂದ ನೋಡಿದಾಗ ಬೇರೆ ವಿವರಗಳು ತೆರೆದುಕೊಳ್ಳುತ್ತವೆ. ಮುತ್ತಯ್ಯ ಮುರಳೀಧರನ್​ ಅವರ ಜೀವನದ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಹಂಬಲ ಇರುವವರು ‘800’ ಸಿನಿಮಾ ನೋಡಬೇಕು. ಅವರ ಖಾಸಗಿ ಬದುಕಿನಲ್ಲಿ ಅನೇಕ ಸಂಕಷ್ಟಗಳು ಇದ್ದವು. ವಿವಾದಗಳನ್ನು ಮೀರಿ ನಿಂತ ಕಾರಣಕ್ಕೆ ಅವರು ಸಾಧಕ ಎನಿಸಿಕೊಂಡಿದ್ದಾರೆ. ಅನೇಕರಿಗೆ ಸ್ಫೂರ್ತಿ ಆಗುವಂತಹ ಅವರ ಜೀವನದ ಕಹಾನಿ ಈ ಚಿತ್ರದಲ್ಲಿದೆ. ಮುತ್ತಯ್ಯ ಮುರಳೀಧರನ್ ಅವರ ಪಾತ್ರಕ್ಕೆ ಕಾಲಿವುಡ್​ನ ನಟ ಮಧುರ್ ಮಿತ್ತಲ್ ಅವರು ಜೀವ ತುಂಬಿದ್ದಾರೆ. ಮಹಿಮಾ ನಂಬಿಯಾರ್, ನಾಸರ್ ಮುಂತಾದವರು ಕೂಡ ನಟಿಸಿದ್ದಾರೆ.

ಇದನ್ನೂ ಓದಿ: ‘ಜಿಯೋ ಸಿನಿಮಾ’ದಲ್ಲಿ 24 ಗಂಟೆಯೂ ಬಿಗ್​ ಬಾಸ್​ ಉಚಿತ ಪ್ರಸಾರ; ವೀಕ್ಷಕರಿಗೂ ಬಹುಮಾನ ಗೆಲ್ಲುವ ಅವಕಾಶ

‘ಚಿಕ್ಕ ವಯಸ್ಸಿನಿಂದಲೂ ನಾನು ಕ್ರಿಕೆಟ್‌ ಅಭಿಮಾನಿ. ಮುತ್ತಯ್ಯ ಮುರಳೀಧರನ್ ಅವರ ಆಟವನ್ನು ನೋಡಿ ಬೆಳೆದವನು ನಾನು. ಅವರ ಪಾತ್ರದಲ್ಲಿ ನಟಿಸಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಪಾಲಿಗೆ ದೊಡ್ಡ ಸಮ್ಮಾನ. ಈಗ ಒಟಿಟಿ ಮೂಲಕ ಈ ಚಿತ್ರ ಜನರನ್ನು ತಲುಪುತ್ತಿರುವುದಕ್ಕೆ ಖುಷಿಯಿದೆ’ ಎಂದು ಮಧುರ್ ಮಿತ್ತಲ್ ಹೇಳಿದ್ದಾರೆ. ‘800’ ಸಿನಿಮಾದ ಒಟಿಟಿ ರಿಲೀಸ್​ ಬಗ್ಗೆ ಸ್ವತಃ ಮುತ್ತಯ್ಯ ಮುರಳೀಧರನ್​ ಮಾತನಾಡಿದ್ದಾರೆ. ‘ಈ ಚಿತ್ರಕ್ಕೆ ಬಹಳ ಉತ್ತಮವಾದ ಪ್ರತಿಸ್ಪಂದನೆ ಸಿಗುತ್ತದೆ ಎಂಬ ನಂಬಿಕೆ ನನಗೆ ಇದೆ. ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿರುವ ಅಸಂಖ್ಯಾತ ಯುವ ಪ್ರತಿಭಾವಂತರಿಗೆ ಈ ಸಿನಿಮಾ ಸ್ಫೂರ್ತಿ ಆಗಲಿ ಅಂತ ನಾನು ಹಾರೈಸುತ್ತೇನೆ’ ಎಂದು ಅವರು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:08 pm, Tue, 21 November 23

ತಾಜಾ ಸುದ್ದಿ
ನಾಲ್ಕನೇ ಟಿ20 ಪಂದ್ಯಕ್ಕಾಗಿ ರಾಯ್​ಪುರ ತಲುಪಿದ ಟೀಮ್ ಇಂಡಿಯಾ ಆಟಗಾರರು
ನಾಲ್ಕನೇ ಟಿ20 ಪಂದ್ಯಕ್ಕಾಗಿ ರಾಯ್​ಪುರ ತಲುಪಿದ ಟೀಮ್ ಇಂಡಿಯಾ ಆಟಗಾರರು
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜೋಕ್ ನೆನಪಿಸಿಕೊಂಡ ಯೋಗರಾಜ್ ಭಟ್
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜೋಕ್ ನೆನಪಿಸಿಕೊಂಡ ಯೋಗರಾಜ್ ಭಟ್
ನಿಮ್ಹಾನ್ಸ್ ಆಸ್ಪತ್ರೆಯ​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ ಆರೋಪ
ನಿಮ್ಹಾನ್ಸ್ ಆಸ್ಪತ್ರೆಯ​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ ಆರೋಪ
ತೆಲಂಗಾಣದಲ್ಲಿ ಕೆಸಿಅರ್ ನನ್ನ ಡೋಂಗಿ ಅಂತ  ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ತೆಲಂಗಾಣದಲ್ಲಿ ಕೆಸಿಅರ್ ನನ್ನ ಡೋಂಗಿ ಅಂತ  ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಶಿವಕುಮಾರ್​
ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಶಿವಕುಮಾರ್​