Daily Devotional: ದಿಕ್ಕುಗಳ ಮಹತ್ವ ಹಾಗೂ ವಿಶೇಷತೆ ತಿಳಿಯಿರಿ
ವಾಸ್ತುಶಾಸ್ತ್ರದಲ್ಲಿ ಎಂಟು ದಿಕ್ಕುಗಳಿಗೆ ವಿಶೇಷ ಮಹತ್ವವಿದೆ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ವಾಯವ್ಯ, ಈಶಾನ್ಯ, ನೈಋತ್ಯ ಮತ್ತು ಆಗ್ನೇಯ ದಿಕ್ಕುಗಳ ಜೊತೆಗೆ ಆಕಾಶ ಮತ್ತು ಪಾತಾಳವನ್ನು ಸಹ ದಿಕ್ಕುಗಳೆಂದು ಪರಿಗಣಿಸಲಾಗುತ್ತದೆ. ಪ್ರತಿ ದಿಕ್ಕಿಗೂ ಒಬ್ಬ ದಿಕ್ಪಾಲಕನಿದ್ದು, ಅವರ ಪ್ರಭಾವ ವಾಸ್ತು ಮತ್ತು ಜೀವನದ ಮೇಲೆ ಬೀರುತ್ತದೆ ಎಂದು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ವಿವರಿಸಿದ್ದಾರೆ.
ಎಲ್ಲರಿಗೂ ಸಾಮಾನ್ಯವಾಗಿ ತಿಳಿದಂತೆ ಪ್ರಮುಖ ದಿಕ್ಕುಗಳು ನಾಲ್ಕು ಇವೆ. ಆದರೆ ಇನ್ನೂ ನಾಲ್ಕು ದಿಕ್ಕುಗಳ ಬಗ್ಗೆ ತಿಳಿದಿರುವುದು ಕಡಿಮೆ (ಅಷ್ಟ ದಿಕ್ಕುಗಳು). ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕುಗಳಿಗೆ ಮಹತ್ವವಿರುವಂತೆ, ವಾಯವ್ಯ, ಈಶಾನ್ಯ, ನೈಋತ್ಯ ಮತ್ತು ಆಗ್ನೇಯ ದಿಕ್ಕುಗಳಿಗೂ ಸಹ ವಿಶೇಷ ಮಹತ್ವವಿದೆ. ಅಷ್ಟೇ ಅಲ್ಲದೆ ಆಕಾಶ ಮತ್ತು ಪಾತಾಳವನ್ನು ಸಹ ದಿಕ್ಕುಗಳೆಂದು ತಿಳಿಯಬೇಕೆಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಆಯಾ ದಿಕ್ಕು ಮತ್ತು ದಿಕ್ಪಾಲಕರ ಬಗ್ಗೆ ತಿಳಿಸಿರುವ ವಿಶೇಷತೆಗಳ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.