‘ರಜನಿಕಾಂತ್ ತಮಿಳು ಪರ ಎಂದರೆ ರಾಜ್ಯಕ್ಕೆ ಕಾಲಿಡಕೂಡದು’; ವಾಟಾಳ್ ನಾಗರಾಜ್
ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಈ ಬೆನ್ನಲ್ಲೇ ಪ್ರತಿಭಟನೆ ಭುಗಿಲೆದ್ದಿದೆ. ಈ ಬೆಳವಣಿಗೆ ಬಗ್ಗೆ ಮಾತನಾಡಿರುವ ವಾಟಾಳ್ ನಾಗರಾಜ್, ರಜನಿಕಾಂತ್ ಹಾಗೂ ತಮಿಳು ಸಿನಿಮಾಗಳ ವಿರುದ್ಧ ಕಿಡಿಕಾರಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಕರ್ನಾಟಕಕ್ಕೆ ಹಿನ್ನಡೆ ಆಗಿದೆ. ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಈ ಬೆನ್ನಲ್ಲೇ ಪ್ರತಿಭಟನೆ ಭುಗಿಲೆದ್ದಿದೆ. ಈ ಬೆಳವಣಿಗೆ ಬಗ್ಗೆ ಮಾತನಾಡಿರುವ ವಾಟಾಳ್ ನಾಗರಾಜ್, ರಜನಿಕಾಂತ್ (Rajanikanth) ಹಾಗೂ ತಮಿಳು ಸಿನಿಮಾಗಳ ವಿರುದ್ಧ ಕಿಡಿಕಾರಿದ್ದಾರೆ. ‘ರಜನಿಕಾಂತ್ ಕರ್ನಾಟಕ ಪರವೋ ಅಥವಾ ತಮಿಳುನಾಡು ಪರವೋ ಎಂಬುದನ್ನು ಹೇಳಲಿ. ಒಂದೊಮ್ಮೆ ಅವರು ತಮಿಳುನಾಡುಪರ ಎಂದಾದರೆ ಅವರು ರಾಜ್ಯಕ್ಕೆ ಕಾಲಿಡೋದು ಬೇಡ. ತಮಿಳು ಸಿನಿಮಾಗಳು ಇಲ್ಲಿ ಪ್ರದರ್ಶನ ಕಾಣೋದು ಬೇಡ’ ಎಂದು ಅವರು ಹೇಳಿದ್ದಾರೆ. ಈ ಎಚ್ಚರಿಕೆ ಮುಂದಿನ ದಿನಗಳಲ್ಲಿ ರಿಲೀಸ್ ಆಗುವ ತಮಿಳು ಸಿನಿಮಾಗಳ ಮೇಲೆ ಪ್ರಭಾವ ಬೀರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 22, 2023 08:37 AM
Latest Videos