Shivarajkumar: ಎ. ಹರ್ಷ ಜತೆ ಮತ್ತೆ ಸಿನಿಮಾ ಮಾಡಿದ್ರೆ ನಿಮ್ಗೆ ಹೊಟ್ಟೆಕಿಚ್ಚು ಯಾಕೆ? ನೇರವಾಗಿ ಕೇಳಿದ ಶಿವಣ್ಣ

Edited By:

Updated on: Dec 26, 2022 | 7:22 PM

Vedha Movie | A Harsha: ‘ವೇದ’ ಚಿತ್ರ ಯಶಸ್ಸು ಕಂಡಿದೆ. ಹಾಗಾಗಿ ಹಲವು ಚಿತ್ರಮಂದಿರಗಳಿಗೆ ಎ. ಹರ್ಷ ಮತ್ತು ಶಿವಣ್ಣ ಜೊತೆಯಾಗಿ ಭೇಟಿ ನೀಡುತ್ತಿದ್ದಾರೆ.

ನಿರ್ದೇಶಕ ಎ. ಹರ್ಷ (A Harsha) ಮತ್ತು ನಟ ಶಿವರಾಜ್​ಕುಮಾರ್ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾ ಮಾಡುತ್ತಿದ್ದಾರೆ. ‘ಭಜರಂಗಿ’, ‘ವಜ್ರಕಾಯ’, ‘ಭಜರಂಗಿ 2’ ಬಳಿಕ 4ನೇ ಬಾರಿಗೆ ‘ವೇದ’ ಸಿನಿಮಾ (Vedha Movie) ಕೂಡ ಅವರಿಬ್ಬರ ಕಾಂಬಿನೇಷನ್​ನಲ್ಲಿ ಮೂಡಿಬಂದಿದೆ. ಈ ಚಿತ್ರ ಯಶಸ್ಸು ಕಂಡಿದ್ದು, ಹಲವು ಚಿತ್ರಮಂದಿರಗಳಿಗೆ ಎ. ಹರ್ಷ ಮತ್ತು ಶಿವಣ್ಣ (Shivarajkumar) ಜೊತೆಯಾಗಿ ಭೇಟಿ ನೀಡುತ್ತಿದ್ದಾರೆ. ಪದೇಪದೇ ಒಟ್ಟಿಗೆ ಸಿನಿಮಾ ಮಾಡುತ್ತಿರುವ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರಿಂದ ಪ್ರಶ್ನೆ ಎದುರಾಯಿತು. ಅದಕ್ಕೆ ಉತ್ತರಿಸಿದ ಶಿವಣ್ಣ, ‘ಇನ್ನೂ ಹತ್ತು ಸಿನಿಮಾ ಒಟ್ಟಿಗೆ ಮಾಡ್ತೀವಿ. ನಿಮಗೇನಾದರೂ ಹೊಟ್ಟೆಕಿಚ್ಚಾ? ಅವರ ಜೊತೆ ಯಾವಾಗಲೂ ನನಗೆ ಕಂಫರ್ಟ್​ ಆಗಿರುತ್ತದೆ’ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
TV9 Web

TV9 Kannada

Read More