Budget Session: ಸದನದಲ್ಲಿ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ನಡುವೆ ‘ಮೊಂಡಾಟದ’ ವಾಕ್ಸಮರ, ಪ್ರೇಕ್ಷಕರಾದ ಸ್ಪೀಕರ್!

|

Updated on: Jul 04, 2023 | 2:41 PM

ಬೊಮ್ಮಾಯಿ ಇಂಥ ಪದಬಳಕೆ ಸರಿಯಲ್ಲ ಎಂದು ಹೇಳಿದಾಗ ಮುಖ್ಯಮಂತ್ರಿಯವರು ಮೊಂಡಾಟ ಅಸಂಸದೀಯ ಪದವಲ್ಲ ಎನ್ನುತ್ತಾರೆ.

ಬೆಂಗಳೂರು: ನಿನ್ನೆ ಆರಂಭಗೊಂಡ ವಿಧಾನ ಸಭೆಯ ಬಜೆಟ್ ಅಧಿವೇಶನದ ಎರಡನೇ ದಿನವಾದ ಇಂದು ಸದನದಲ್ಲಿ ಗಲಾಟೆಮಯ ವಾತಾವರಣ. ಅಧಿಕಾರಕ್ಕೆ ಬರುವ ಮೊದಲು ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ 5 ಗ್ಯಾರಂಟಿಗಳ (5 Guarantees) ಬಗ್ಗೆ ಚರ್ಚೆಗೆ ಪ್ರತಿಪಕ್ಷ ಆಗ್ರಹಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅದರ ಅವಶ್ಯಕೆಯಿಲ್ಲ ಎಂದು ಹೇಳಿದರು. ಪ್ರತಿಪಕ್ಷದ ಮುಖಂಡತ್ವ ವಹಿಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಸಭಾಧ್ಯಕ್ಷ ಯುಟಿ ಖಾದರ್ (Speaker UT Khader) ತಮ್ಮ ಪರಮಾಧಿಕಾರ ಬಳಸಿ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದಾಗ ರೊಚ್ಚಿಗೆದ್ದ ಮುಖ್ಯಮಂತ್ರಿ ನೀವು ಮೊಂಡಾಟ ಮಾಡುತ್ತಿದ್ದೀರಿ ಎನ್ನುತ್ತಾರೆ. ಅವರು ಬಳಸಿದ ಮೊಂಡಾಟ ಪದ ಬೊಮ್ಮಾಯಿಯವರನ್ನು ಕೆರಳಿಸುತ್ತದೆ. ಅವರು ಇಂಥ ಪದಬಳಕೆ ಸರಿಯಲ್ಲ ಎಂದು ಹೇಳಿದಾಗ ಮುಖ್ಯಮಂತ್ರಿಯವರು ಮೊಂಡಾಟ ಅಸಂಸದೀಯ ಪದವಲ್ಲ ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ