ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ದಿನಗಳ ನೆನಪಿಸಿಕೊಂಡ ಅನಂತ್

Updated on: Oct 03, 2026 | 7:38 PM

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಹಿರಿಯ ನಟ ಅನಂತ್ ನಾಗ್ ಅವರು ಕೇವಲ ಚಿತ್ರನಟನಾಗಿರದೇ ರಾಜಕೀಯ ಪಯಣದಲ್ಲಿಯೂ ಅಗಾಧ ಸೇವೆಯನ್ನ ಸಲ್ಲಿಸಿದ್ದಾರೆ. ಹೌದು...ಈ ಹಿಂದೆ ಜೆಹೆಚ್​ ಪಟೇಲ್ ಸರ್ಕಾರದಲ್ಲಿ ಬೆಂಗಳೂರಿನ ನಗರಾಭಿವೃದ್ಧಿ ಸಚಿವರಾಗಿ ದರ್ಬಾರ್ ಮಾಡಿದ್ದಾರೆ. ನಟ ಅನಂತ್ ನಾಗ್ ಅವರ ಸಿನಿಮಾಗೆ ಮಾತ್ರವಲ್ಲದೆ, ಅವರ ಸಕ್ರಿಯ ರಾಜಕೀಯ ಜೀವನ ಹಾಗೂ ಬೆಂಗಳೂರನ್ನು ಮಂತ್ರಿಯಾಗಿ ಆಳಿದ್ದ ಸುವರ್ಣ ಕಾಲದ ಬಗ್ಗೆಯೂ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಹಿರಿಯ ನಟ ಅನಂತ್ ನಾಗ್ ಅವರು ಕೇವಲ ಚಿತ್ರನಟನಾಗಿರದೇ ರಾಜಕೀಯ ಪಯಣದಲ್ಲಿಯೂ ಅಗಾಧ ಸೇವೆಯನ್ನ ಸಲ್ಲಿಸಿದ್ದಾರೆ. ಹೌದು…ಈ ಹಿಂದೆ ಜೆಹೆಚ್​ ಪಟೇಲ್ ಸರ್ಕಾರದಲ್ಲಿ ಬೆಂಗಳೂರಿನ ನಗರಾಭಿವೃದ್ಧಿ ಸಚಿವರಾಗಿ ದರ್ಬಾರ್ ಮಾಡಿದ್ದಾರೆ. ನಟ ಅನಂತ್ ನಾಗ್ ಅವರ ಸಿನಿಮಾಗೆ ಮಾತ್ರವಲ್ಲದೆ, ಅವರ ಸಕ್ರಿಯ ರಾಜಕೀಯ ಜೀವನ ಹಾಗೂ ಬೆಂಗಳೂರನ್ನು ಮಂತ್ರಿಯಾಗಿ ಆಳಿದ್ದ ಸುವರ್ಣ ಕಾಲದ ಬಗ್ಗೆಯೂ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.

ಅನಂತ್ ನಾಗ್ ಅವರ ರಾಜಕೀಯ ಯಶಸ್ಸು ಸಾಮಾನ್ಯವಾದುದಲ್ಲ. 1988ರಿಂದ 1994ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ (MLC) ಸೇವೆ ಸಲ್ಲಿಸಿದ ಅವರು, 1994ರಲ್ಲಿ ಮಲ್ಲೇಶ್ವರಂ ಕ್ಷೇತ್ರದಿಂದ ಗೆದ್ದು ವಿಧಾನಸಭೆಗೆ ಪ್ರವೇಶಿಸಿ 1996ರಲ್ಲಿ  ಅಂದಿನ ಮುಖ್ಯಮಂತ್ರಿಯಾಗಿದ್ದ ಜೆ.ಎಚ್. ಪಟೇಲ್ ಅವರ ಸಂಪುಟದಲ್ಲಿ ಬೆಂಗಳೂರು ನಗರ ಅಭಿವೃದ್ಧಿ ಸಚಿವರಾಗಿ, ಅಭಿವೃದ್ಧಿಯ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇದೀಗ ಮತ್ತೆ ಅನಂತ್ ನಾಗ್ ಅವರು ತಮ್ಮ ಹಿಂದಿನ ರಾಜಕೀಯ ಜೀವನವನ್ನು ಮೆಲುಕು ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More