Video: ದೊಡ್ಡ ತೆರೆಗೆ ಸಿಲುಕಿ ಮುಳುಗಿದ ಮೀನುಗಾರಿಕೆ ಬೋಟ್: 12 ಮೀನುಗಾರರ ರಕ್ಷಣೆ
ಬಿರುಗಾಳಿ, ಅಲೆಯಿಂದ ಸಮುದ್ರದಲ್ಲಿ ಮೀನುಗಾರಿಕೆ ಬೋಟ್ ಮುಳುಗಡೆಯಾಗಿದ್ದು, ಬೋಟ್ನಲ್ಲಿದ್ದ 12 ಮೀನುಗಾರರ ರಕ್ಷಣೆ ಮಾಡಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬೆಳ್ಳಂಬಾರ ಸಮುದ್ರದಲ್ಲಿ ನಡೆದಿದೆ.
ಕಾರವಾರ: ಬಿರುಗಾಳಿ, ಅಲೆಯಿಂದ ಸಮುದ್ರದಲ್ಲಿ ಮೀನುಗಾರಿಕೆ ಬೋಟ್ ಮುಳುಗಡೆ (Boat Drowning) ಯಾಗಿದ್ದು, ಬೋಟ್ನಲ್ಲಿದ್ದ 12 ಮೀನುಗಾರರ ರಕ್ಷಣೆ ಮಾಡಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬೆಳ್ಳಂಬಾರ ಸಮುದ್ರದಲ್ಲಿ ನಡೆದಿದೆ. ಮೀನುಗಾರಿಕೆ ಬೋಟ್ನ ತಳಭಾಗದ ಫೈಬರ್ ಕಿತ್ತು ನೀರು ಒಳನುಗ್ಗಿದೆ. ಚಂದ್ರಾವತಿ ಸುಭಾಷ್ ಖಾರ್ವಿ ಎನ್ನುವವರಿಗೆ ಸೇರಿದ ಪರ್ಷಿಯನ್ ಬೋಟ್ ಇದಾಗಿದೆ. ಅಂದಾಜು 1.50 ಕೋಟಿ ರೂ. ಹಾನಿ ಎನ್ನಲಾಗುತ್ತಿದೆ. ಸಮೀಪದಲ್ಲೇ ಇದ್ದ ಮತ್ತೊಂದು ಬೋಟ್ನಿಂದ ಮೀನುಗಾರರ ರಕ್ಷಣೆ ಮಾಡಿದ್ದು, ಭಾರಿ ಅನಾಹುತ ತಪ್ಪಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.