Video: ಮಗುವನ್ನು ಎದೆಗವಚಿ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಗಸ್ತು ತಿರುಗುವ ಮಹಿಳಾ ಕಾನ್​ಸ್ಟೆಬಲ್

|

Updated on: Feb 18, 2025 | 11:32 AM

ಅತಿ ಹೆಚ್ಚು ಜನ ದಟ್ಟಣೆ ಇರುವ ದೆಹಲಿ ರೈಲ್ವೆ ನಿಲ್ದಾಣದಲ್ಲಿ ತನ್ನ ಕಷ್ಟದ ಬಗ್ಗೆ ಯೋಚಿಸದೆ ಮಗುವನ್ನು ಎದೆಗವಚಿ ಪ್ರಯಾಣಿಕರ ರಕ್ಷಣೆಗಾಗಿ ಗಸ್ತು ತಿರುಗುತ್ತಿರುವ ಆರ್​ಪಿಎಸ್​ಎಫ್ ಮಹಿಳಾ ಕಾನ್​​ಸ್ಟೆಬಲ್ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ರಾತ್ರಿ ಹೊತ್ತು ಪುಟ್ಟ ಮಗುವನ್ನು ಎದೆಗವಚಿಕೊಂಡು ರೈಲ್ವೆ ನಿಲ್ದಾಣದ ಪ್ಲಾಟ್​ಫಾರಂನಲ್ಲಿ ಗಸ್ತು ತಿರುಗುತ್ತಿದ್ದರು. ಕಳೆದ ಎರಡು ದಿನಗಳ ಹಿಂದಷ್ಟೇ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ ಉಂಟಾಗಿ 18 ಮಂದಿ ಸಾವನ್ನಪ್ಪಿದ್ದರು.

ಆರ್​ಪಿ​ಎಫ್​ನ ಖಾತೆಯು ಈ ವಿಡಿಯೋವನ್ನು ಹಂಚಿಕೊಂಡಿದೆ. ಒಂದು ಕೈಯಲ್ಲಿ ಲಾಠಿ ಹಿಡಿದು ಮತ್ತೊಂದು ಕಡೆ ಮಗುವನ್ನು ಎದೆಗೆ ಅವಚಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ರೀನಾ ಎಂಬುವವರು ಕರ್ತವ್ಯಕ್ಕೂ ಲೋಪವಾಗದಂತೆ, ಮಗುವಿಗೂ ಅನ್ಯಾಯವಾಗದಂತೆ ಎರಡನ್ನೂ ಸರಿದೂಗಿಸಿಕೊಂಡು ಹೋಗಿದ್ದನ್ನು ಕಾಣಬಹುದು.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿದ ಬಳಿಕ ಹೆರಿಗೆ ರಜೆಯಲ್ಲಿದ್ದವರನ್ನು ವಾಪಸ್ ಕರೆಸಿಕೊಳ್ಳಲಾಯಿತು. ರೀನಾ ಅವರ ಪತಿ, ಸಿಆರ್‌ಪಿಎಫ್ ಕಾನ್‌ಸ್ಟೆಬಲ್ ಆಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಅತ್ತೆ, ಮಾವ ಬದುಕಿಲ್ಲ, ಮಗುವನ್ನು ನೋಡಿಕೊಳ್ಳಲು ಬೇರೆ ಯಾರೂ ಇಲ್ಲದ ಕಾರಣ ಅನಿವಾರ್ಯವಾಗಿ ಮಗುವಿನೊಂದಿಗೆ ಕರ್ತವ್ಯಕ್ಕೆ ಹಾಜರಾಗಬೇಕಾಯಿತು. ಮಗುವನ್ನು ಆರೈಕೆ ಮಾಡಲು ಜನರ ಹುಡುಕಾಟದಲ್ಲಿದ್ದಾರೆ. ರೀನಾ ಕರ್ತವ್ಯದಲ್ಲಿರುವಾಗ ತನ್ನ ಮಗುವಿಗೆ ಮನೆಯಲ್ಲಿ ತಯಾರಿಸಿದ ಗಂಜಿ, ಕಂಬಳಿ, ಡೈಪರ್ ಮತ್ತು ಹಾಲು ಒಯ್ಯುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ