ಕೂಲಿ ನಾಲಿ ಮಾಡಿಕೊಂಡಿದ್ದ ಜನರಿಗೆ ಸಿದ್ದರಾಮಯ್ಯ ಸರ್ಕಾರ ಮೋಸ ಮಾಡಿದೆ: ಚಿತ್ರದುರ್ಗದ ಮಹಿಳೆಯರು
ಸಿದ್ದರಾಮಯ್ಯ ಸರ್ಕಾರ ಬಡವರನ್ನು ಉದ್ಧಾರ ಮಾಡುತ್ತದೆ, ಮಕ್ಕಳಿಗೆ ಹೊಟ್ಟೆ ತುಂಬ ಊಟ ಸಿಕ್ಕುತ್ತದೆ ಅಂದುಕೊಂಡಿದ್ದು ಸುಳ್ಳಾಗಿದೆ. ಗ್ಯಾರಂಟಿ ಸ್ಕೀಮುಗಳನ್ನು ಶ್ರೀಮಂತರಿಗಾಗಿ ಜಾರಿ ಮಾಡಿದ್ದರೆ? ಬಡವರಿಗೆ ಸುಳ್ಳು ಹೇಳುವ ಕೆಲಸ ಸರ್ಕಾರ ಮಾಡಬಾರದಿತ್ತು, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಜನ ಕೂಲಿ-ನಾಲಿ ಮಾಡಿಕೊಂಡು ಜೀವನದ ಸಾಗಿಸುತ್ತಿದ್ದರು, ಗ್ಯಾರಂಟಿ ಯೋಜನೆಗಳು ಮೋಸ ಮಾಡಿದವು ಎಂದು ಮಹಿಳೆಯರು ಹೇಳುತ್ತಾರೆ
ಚಿತ್ರದುರ್ಗ: ಕರ್ನಾಟಕ ಸರ್ಕಾರ ನಮಗೆ ಮೋಸ ಮಾಡಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ ಹೊಟ್ಟೆ ಮೇಲೆ ಬರೆ ಎಳೆಯುತ್ತಿದ್ದಾರೆ ಎಂದು ಚಿತ್ರದುರ್ಗದ ಮಹಿಳೆಯರು ಹೇಳುತ್ತಿದ್ದಾರೆ. ಇಲ್ಲೂ ಅದೇ ಗೋಳು. ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಸ್ಕೀಮಿನ ದುಡ್ಡನ್ನು ಸರ್ಕಾರ ಕ್ರಮವಾಗಿ ಮೂರು ಮತ್ತು ಐದು ತಿಂಗಳುಗಳಿಂದ ಫಲಾನುಭವಿಗಳ ಖಾತೆಗೆ ಹಾಕಿಲ್ಲ. ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ನಾಯಕರು ನೀಡಿದ ಆಶ್ವಾಸನೆಗಳನ್ನು ನಂಬಿ, ನಮ್ಮ ಬದುಕು ಹಸನಾದೀತು, ವಯಸ್ಸಾದವರ ಔಷಧಿ, ಮಕ್ಕಳ ಶಾಲಾ ಫೀಸು ಮತ್ತು ಮನೆ ಬಾಡಿಗೆಗೆ ನೆರವಾದೀತು ಅವರಿಗೆ ವೋಟು ಹಾಕಿ ಮೋಸ ಹೋಗಿದ್ದೇವೆ ಎಂದು ದುರ್ಗದ ಮಹಿಳೆಯರು ಹೇಳುತ್ತಿದ್ದಾರೆ..
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಕಳೆದ ನಾಲ್ಕೈದು ತಿಂಗಳಿಂದ ಸಿಕ್ಕಿಲ್ಲ ಹಣ, ವಿಶ್ರಾಂತಿಯಲ್ಲಿ ಸಚಿವೆ