ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಕಳೆದ ನಾಲ್ಕೈದು ತಿಂಗಳಿಂದ ಸಿಕ್ಕಿಲ್ಲ ಹಣ, ವಿಶ್ರಾಂತಿಯಲ್ಲಿ ಸಚಿವೆ
ಗ್ಯಾರಂಟಿ ಯೋಜನೆಗಳ ನಿಯಮಿತವಾಗಿ ಅನುಷ್ಠಾನಗೊಳ್ಳುವುದನ್ನು ನೋಡಿಕೊಳ್ಳಲು ಸರ್ಕಾರ ಒಂದು ಸಮಿತಿಯನ್ನೂ ರಚಿಸಿದೆ. ಅದರ ಅಧ್ಯಕ್ಷ ಮತ್ತು ಸದಸ್ಯರಿಗೆ ಸಂಭಾವನೆ, ಭತ್ಯೆ, ಪೆಟ್ರೋಲು, ಫೋನ್ ಮೊದಲಾದ ಎಲ್ಲ ಸೌಲಭ್ಯಗಳನ್ನು ನೀಡುತ್ತಿರಬಹುದು. ಆದರೆ ಸಮಿತಿ ಸಕ್ರಿಯವಾಗಿದೆಯೋ ಅಥವಾ ಊನಗೊಂಡಿದೆಯೋ ಗೊತ್ತಿಲ್ಲ, ಸಕ್ರಿಯವಾಗಿದ್ದರೆ 4-5 ತಿಂಗಳುಗಳಿಂದ ಗೃಹ ಲಕ್ಷ್ಮಿ ಯೋಜನೆ ಹಣ ಸಿಗದಿರುವುದು ಗೊತ್ತಾಗಬೇಕಿತ್ತಲ್ಲವೇ?
ಹುಬ್ಬಳ್ಳಿ: ಅಗತ್ಯ ವಸ್ತುಗಳ ಬೆಲೆ ಜನಸಾಮಾನ್ಯರ ಕೈಗೆಟುಕದಷ್ಟು ಮೇಲೆ ಹೋಗಿವೆ, ಅವರಿಗೆ ಒಂದಷ್ಟು ನೆರವಾಗಲು ತಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಅಂತ ಸರ್ಕಾರದ ಪ್ರತಿನಿಧಿಗಳು ಹೇಳುತ್ತಾರೆ, ಅದರೆ ಜನಸಾಮಾನ್ಯರು ಏನು ಹೇಳುತ್ತಾರೆ ಅಂತ ಕೇಳಿ. ಹುಬ್ಬಳ್ಳಿ ಮಹಿಳೆಯರು ಹೇಳುವ ಪ್ರಕಾರ ನಾಲ್ಕೈದು ತಿಂಗಳುಗಳಿಂದ ಅವರಿಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಸಿಕ್ಕಿಲ್ಲ. ಮೊದಲೆಲ್ಲ ತಡವಾದರೂ ನಿಯಮಿತವಾಗಿ ಬರುತ್ತಿತ್ತಂತೆ, ಅದರೆ ಈಗ ಅದು ಸ್ಥಗಿತಗೊಂಡಿದೆ ಎಂದು ಅವರು ಹೇಳುತ್ತಾರೆ. ಕಳೆದ ತಿಂಗಳು ಅಪಘಾತವೊಂದರಲ್ಲಿ ಬೆನ್ನುಮೂಳು ಮುರಿದು ಚಿಕಿತ್ಸೆಯ ಬಳಿಕ ವಿಶ್ರಾಂತಿ ಪಡೆಯುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮಗಳಿಗೆ ನಾಟ್ ರೀಚೇಬಲ್ ಆಗಿದ್ದಾರೆ. ಜನ ಯಾರನ್ನು ಕೇಳೋದು?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗೃಹಲಕ್ಷ್ಮಿ ಆಯ್ತು, ಈಗ ಅನ್ನಭಾಗ್ಯ ಯೋಜನೆಯಲ್ಲೂ ಫಲಾನುಭವಿಗಳಿಗೆ ಶಾಕ್ ನೀಡಿದ ಸರ್ಕಾರ