Video: ಪ್ರಧಾನಿ ಮೋದಿ ಬೆಂಗಾವಲು ವಾಹನ ರಿಹರ್ಸಲ್ ಮಾಡುತ್ತಿದ್ದ ರಸ್ತೆಯಲ್ಲಿ ಅಡ್ಡ ಬಂದ ಸೈಕಲ್ ಸವಾರನಿಗೆ ಥಳಿತ

|

Updated on: Mar 08, 2025 | 11:45 AM

ಪ್ರಧಾನಿ ನರೇಂದ್ರ ಮೋದಿ ಬೆಂಗಾವಲು ಪಡೆ ರಿಹರ್ಸಲ್ ಮಾಡುತ್ತಿದ್ದ ಪ್ರದೇಶದಲ್ಲಿ ಆಕಸ್ಮಿಕವಾಗಿ ಅಡ್ಡಬಂದ ಸೈಕಲ್ ಸವಾರನಿಗೆ ಪೊಲೀಸ್​ ಸಬ್​ಇನ್​ಸ್ಪೆಕ್ಟರ್ ದೈಹಿಕವಾಗಿ ಹಲ್ಲೆ ನಡೆಸಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ. ಪ್ರಧಾನಿಯವರ ಸೂರತ್ ಭೇಟಿಗೆ ಒಂದು ದಿನ ಮೊದಲು ಗುರುವಾರ ನಡೆದ ಈ ಘಟನೆಯ ವಿಡಿಯೋ ವೈರಲ್ ಆಗಿದೆ. ನಗರದ ಲಿಂಬಾಯತ್ ಪ್ರದೇಶದ ಖಾಲಿ ರಸ್ತೆಯಲ್ಲಿ ಪ್ರಧಾನಿಯವರ ಬೆಂಗಾವಲು ಪಡೆಯ ವಾಹನಗಳು ಹಾದುಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಗುಜರಾತ್, ಮಾರ್ಚ್​ 08: ಪ್ರಧಾನಿ ನರೇಂದ್ರ ಮೋದಿ ಬೆಂಗಾವಲು ಪಡೆ ರಿಹರ್ಸಲ್ ಮಾಡುತ್ತಿದ್ದ ಪ್ರದೇಶದಲ್ಲಿ ಆಕಸ್ಮಿಕವಾಗಿ ಅಡ್ಡಬಂದ ಸೈಕಲ್ ಸವಾರನಿಗೆ ಪೊಲೀಸ್​ ಸಬ್​ಇನ್​ಸ್ಪೆಕ್ಟರ್ ದೈಹಿಕವಾಗಿ ಹಲ್ಲೆ ನಡೆಸಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ. ಪ್ರಧಾನಿಯವರ ಸೂರತ್ ಭೇಟಿಗೆ ಒಂದು ದಿನ ಮೊದಲು ಗುರುವಾರ ನಡೆದ ಈ ಘಟನೆಯ ವಿಡಿಯೋ ವೈರಲ್ ಆಗಿದೆ. ನಗರದ ಲಿಂಬಾಯತ್ ಪ್ರದೇಶದ ಖಾಲಿ ರಸ್ತೆಯಲ್ಲಿ ಪ್ರಧಾನಿಯವರ ಬೆಂಗಾವಲು ಪಡೆಯ ವಾಹನಗಳು ಹಾದುಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕಾರುಗಳು ಚಲಿಸುತ್ತಲೇ ಇದ್ದಾಗ, ಹುಡುಗ ಮಾರ್ಗದಲ್ಲಿ ಸೈಕಲ್ ಸವಾರಿ ಮಾಡುತ್ತಿರುವುದನ್ನು ಕಾಣಬಹುದು. ಆತ ತನ್ನ ತಪ್ಪಿನ ಅರಿವಾದಾಗ, ಹಿಂದಿರುಗಿ ಬರುತ್ತಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ