AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಯುವತಿ ಜತೆ ಬೈಕ್​ನಲ್ಲಿ ಯುವಕರಿಬ್ಬರ ತ್ರಿಬಲ್ ರೈಡಿಂಗ್, ಕಿಸ್ಸಿಂಗ್! ವಿಡಿಯೋ ವೈರಲ್​

ಬೆಂಗಳೂರು: ಯುವತಿ ಜತೆ ಬೈಕ್​ನಲ್ಲಿ ಯುವಕರಿಬ್ಬರ ತ್ರಿಬಲ್ ರೈಡಿಂಗ್, ಕಿಸ್ಸಿಂಗ್! ವಿಡಿಯೋ ವೈರಲ್​

ರಾಚಪ್ಪಾಜಿ ನಾಯ್ಕ್
| Edited By: ವಿವೇಕ ಬಿರಾದಾರ|

Updated on: Mar 08, 2025 | 11:11 AM

Share

ಬೆಂಗಳೂರಿನಲ್ಲಿ ಯುವಕ-ಯುವತಿಯರು ಹೆಲ್ಮೆಟ್ ಇಲ್ಲದೆ ತ್ರಿಬಲ್ ರೈಡಿಂಗ್ ಮಾಡಿ, ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆ. ಒಬ್ಬ ಯುವತಿ ಬೈಕ್‌ನಲ್ಲಿ ಕುಳಿತು ಯುವಕನಿಗೆ ಮುತ್ತು ಕೊಟ್ಟಿದ್ದಾಳೆ. ಇತರ ವಾಹನ ಸವಾರರು ಪ್ರಶ್ನಿಸಿದಾಗ ಬೆದರಿಕೆ ಹಾಕಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ.

ಬೆಂಗಳೂರು, ಮಾರ್ಚ್​ 09: ಯುವಕ, ಯುವತಿಯರ ಹುಚ್ಚಾಟವಾಡಿದ್ದಾರೆ. ರಸ್ತೆಯಲ್ಲಿ ಯುವಕ, ಯುವತಿಯರ ಹುಚ್ಚಾಟದಿಂದ ರಸ್ತೆಯಲ್ಲಿನ ವಾಹನ ಸವಾರರು ಪರದಾಡಿದ್ದಾರೆ. ಒಂದೇ ಬೈಕನಲ್ಲಿ ಇಬ್ಬರು ಯುವಕರು ಮತ್ತು ಓರ್ವ ಯುವತಿ ಹೆಲ್ಮೆಟ್​ ಹಾಕದೆ, ತ್ರಿಬಿಲ್​ ರೈಡಿಂಗ್​ ಹೋಗಿದ್ದಾರೆ. ಅಲದೇ ಬೈಕ್​ನಲ್ಲಿ ಹೋಗುತ್ತಲೇ ಯುವತಿ ಯುವಕನಿಗೆ ಕಿಸ್​ ಕೊಟ್ಟಿದ್ದಾಳೆ. ಪ್ರಶ್ನಿಸಿದ ಇತರೆ ಬೈಕ್ ಸವಾರರಿಗೆ ಧಮ್ಕಿ ಹಾಕಿದ್ದಾರೆ. ಮಾರ್ಚ್ 7 ರಂದು ರಾತ್ರಿ ರಾಗಿಗುಡ್ಡ ರಸ್ತೆಯಲ್ಲಿ ಘಟನೆ ನಡೆದಿದೆ. ಓರ್ವ ಯುವಕ ಬೈಕ್ ಚಾಲನೆ ಮಾಡುತ್ತಿದ್ದನು. ಸವಾರನ ಹಿಂದೆ ಕುಳಿತಿದ್ದ ಯುವಕನಿಗೆ ಯುವತಿ ಮುತ್ತುಕೊಟ್ಟಿದ್ದಾಳೆ. ಯುವಕ‌ ಯುವತಿಯರ ಹುಚ್ಚಾಟವನ್ನು ಬೈಕ್ ಸವಾರ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ. ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾನೆ. ಜೆಪಿ ನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Follow Us
ರಾಚಪ್ಪಾಜಿ ನಾಯ್ಕ್
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More