ಹೆದ್ದಾರಿ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಟಿಟಿ ಟೆಂಪೋ ಪಲ್ಟಿ

Updated on: Oct 06, 2025 | 11:42 AM

ಅಳದಂಗಡಿಯ ಗುರುವಾಯನಕೆರೆ-ಕಾರ್ಕಳ ರಸ್ತೆಯಲ್ಲಿ ಶನಿವಾರದಂದು ರಸ್ತೆ ಅಪಘಾತವೊಂದು ನಡೆದಿದೆ. ಇದೀಗ ಈ ಅಪಘಾತದ ದೃಶ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಒಂದು ಬಾರಿ ಈ ದೃಶ್ಯ  ನೋಡಿದ್ರೆ ಎದೆ ಝಲ್ ಎನ್ನುತ್ತದೆ. ಹೆದ್ದಾರಿ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ  ಟೆಂಪೋ ಟ್ರಾವೆಲರ್ ಪಲ್ಟಿಯಾಗಿದೆ. ಈ ಬಗ್ಗೆ ಇಲ್ಲಿದೆ ನೋಡಿ ವಿಡಿಯೋ 

ಮಂಗಳೂರು, ಅ.6: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಅಳದಂಗಡಿಯ ಗುರುವಾಯನಕೆರೆ-ಕಾರ್ಕಳ ರಸ್ತೆಯಲ್ಲಿ ಶನಿವಾರದಂದು ಎದೆ ಝಲ್​​​ ಎನ್ನುವ ಅಪಘಾತವೊಂದು ನಡೆದಿದೆ. ಹೆದ್ದಾರಿ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ  ಟೆಂಪೋ ಟ್ರಾವೆಲರ್ ಪಲ್ಟಿಯಾಗಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಮಹಿಳೆ ರಸ್ತೆ ದಾಟುವ ವೇಳೆ, ಟೆಂಪೋ ಟ್ರಾವೆಲರ್ ತುಂಬಾ ವೇಗವಾಗಿ ಚಲಿಸುತ್ತಿತ್ತು. ಈ ಸಂದರ್ಭದಲ್ಲಿ ಚಾಲಕ ರಸ್ತೆ ದಾಟುತ್ತಿದ್ದ ಮಹಿಳೆಯನ್ನು ಅಪಘಾತದಿಂದ  ತಪ್ಪಿಸಲು ಹೋಗಿ, ನಿಯಂತ್ರಣ ತಪ್ಪಿ  ಡಿವೈಡರ್​​​ ಮೇಲೆ ಹತ್ತಿಸಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡು ಟೆಂಪೋ ಪಲ್ಟಿಯಾಗಿದೆ. ಈ ಅಪಘಾತದಿಂದ ಟೆಂಪೋದಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣ ಅಪಾಯ ಆಗಿಲ್ಲ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್​​ ಆಗಿದೆ. ಇನ್ನು ಅಧಿಕಾರಿಗಳು ಕೂಡ ಗುರುವಾಯನಕೆರೆ-ಕಾರ್ಕಳ ಮಾರ್ಗದಲ್ಲಿ, ವಿಶೇಷವಾಗಿ ಜನನಿಬಿಡ ರಸ್ತೆಗಳನ್ನು ದಾಟುವಾಗ ಜಾಗರೂಕರಾಗಿರಲು  ಒತ್ತಾಯಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 06, 2025 11:14 AM