ಸಿಗರೇಟ್​ ಸೇದುವ ಬಗ್ಗೆ ಸ್ಪಂದನಾಗೆ ಇದ್ದ ಅಭಿಪ್ರಾಯ ಏನು? ವಿಜಯ್​ ರಾಘವೇಂದ್ರ ಹೇಳಿದ್ದಿಷ್ಟು..

Updated on: Aug 31, 2023 | 8:18 PM

ಈ ಸಂದರ್ಶನದಲ್ಲಿ ಸ್ಪಂದನಾ ಬಗ್ಗೆ ವಿಜಯ್ ರಾಘವೇಂದ್ರ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹೃದಯಾಘಾತದಿಂದ ಪತ್ನಿಯನ್ನು ಕಳೆದುಕೊಂಡ ನೋವು ಅವರನ್ನು ಕಾಡುತ್ತಿದೆ. ಆದರೆ ನೆನಪುಗಳು ಹಸಿರಾಗಿವೆ. ಸಿಗರೇಟ್​ ಸೇದುವ ಬಗ್ಗೆ ಸ್ಪಂದನಾಗೆ ಯಾವ ರೀತಿಯ ಅಭಿಪ್ರಾಯ ಇತ್ತು ಎಂಬುದನ್ನು ವಿಜಯ್​ ರಾಘವೇಂದ್ರ ಈಗ ನೆನಪಿಸಿಕೊಂಡಿದ್ದಾರೆ.

ನಟ ವಿಜಯ್​ ರಾಘವೇಂದ್ರ (Vijay Raghavendra) ಅವರು ರಿಯಲ್​ ಲೈಫ್​ನಲ್ಲಿ ಸಿಗರೇಟ್​ ಸೇದುವುದಿಲ್ಲ. ಆದರೆ ಪಾತ್ರದ ಸಲುವಾಗಿ ಕೆಲವೊಮ್ಮೆ ಸಿಗರೇಟ್​ ಸೇದಬೇಕಾಗುವುದು ಅನಿವಾರ್ಯ. ‘ಕದ್ದ ಚಿತ್ರ’ ಸಿನಿಮಾದಲ್ಲೂ ಅಂಥ ಒಂದು ದೃಶ್ಯ ಇದೆ. ಅದಕ್ಕಾಗಿ ತಾವು ಸಿಗರೇಟ್​ ಸೇದಿದಾಗ ಏನಾಯಿತು ಎಂಬುದನ್ನು ವಿಜಯ್​ ರಾಘವೇಂದ್ರ ಅವರು ವಿವರಿಸಿದ್ದಾರೆ. ಅವರ ಪತ್ನಿ ಸ್ಪಂದನಾಗೆ ಸಿಗರೇಟ್​ (Cigarette) ಬಗ್ಗೆ ವಿರೋಧ ಇತ್ತು. ಅವರು ಎಂದಿಗೂ ಧೂಮಪಾನವನ್ನು ಪ್ರಚೋದಿಸುತ್ತಿರಲಿಲ್ಲ. ಇಂದು ಸ್ಪಂದನಾ (Spandana Vijay Raghavendra) ಅವರು ನಮ್ಮೊಂದಿಗೆ ಇಲ್ಲ. ಹೃದಯಾಘಾತದಿಂದ ನಿಧನರಾದ ಪತ್ನಿಯ ನೆನಪು ವಿಜಯ್​ ರಾಘವೇಂದ್ರ ಅವರನ್ನು ಕಾಡುತ್ತಿದೆ. ಅದರ ನಡುವೆಯೂ ಅವರು ‘ಕದ್ದ ಚಿತ್ರ’ ಸಿನಿಮಾಗೆ ಪ್ರಮೋಷನ್​ ಮಾಡುತ್ತಿದ್ದಾರೆ. ಈ ಸಂದರ್ಶನದಲ್ಲಿ ಸ್ಪಂದನಾ ಬಗ್ಗೆ ವಿಜಯ್ ರಾಘವೇಂದ್ರ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More