‘ಸ್ಪಂದನಾಗೆ ಬಹಳ ಬೇಗ ಕೋಪ ಬರುತ್ತಿತ್ತು’: ಕಾರಣ ತಿಳಿಸಿದ ವಿಜಯ್ ರಾಘವೇಂದ್ರ
ಪತ್ನಿ ಸ್ಪಂದನಾ ಬಗೆಗಿನ ನೆನಪುಗಳನ್ನು ವಿಜಯ್ ರಾಘವೇಂದ್ರ ಮೆಲುಕು ಹಾಕಿದ್ದಾರೆ. ತಮಗಿಂತಲೂ ಸ್ಪಂದನಾಗೆ ಕೋಪ ಜಾಸ್ತಿ ಇತ್ತು ಎಂದು ಅವರು ಹೇಳಿದ್ದಾರೆ. ಪತ್ನಿಯ ಕೋಪಕ್ಕೆ ಕಾರಣ ಆಗುತ್ತಿದ್ದ ಸಂಗತಿಗಳು ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ‘ಕದ್ದ ಚಿತ್ರ’ ಬಿಡುಗಡೆ ಸಲುವಾಗಿ ಅವರು ನೀಡಿದ ಸಂದರ್ಶನದ ತುಣುಕು ಇಲ್ಲಿದೆ...
ಸ್ಪಂದನಾ ವಿಜಯ್ ರಾಘವೇಂದ್ರ (Spandana Vijay Raghavendra) ಅವರು ಹೃದಯಾಘಾತದಿಂದ ನಿಧನರಾಗಿದ್ದು ತೀವ್ರ ನೋವಿನ ಸಂಗತಿ. ಸ್ಪಂದನಾ ಇಲ್ಲದೇ ವಿಜಯ್ ರಾಘವೇಂದ್ರ ಅವರು ಮಂಕಾದರು. ಆದರೆ ಈಗ ಅವರು ತಮ್ಮ ಕರ್ತವ್ಯದ ಕಡೆಗೆ ಗಮನ ಹರಿಸುತ್ತಿದ್ದಾರೆ. ಅವರು ನಟಿಸಿರುವ ‘ಕದ್ದ ಚಿತ್ರ’ (Kadda Chitra) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ವೇಳೆ ಅವರು ‘ಟಿವಿ9 ಕನ್ನಡ’ಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ. ಪತ್ನಿ ಬಗೆಗಿನ ನೆನಪುಗಳನ್ನು ವಿಜಯ್ ರಾಘವೇಂದ್ರ ಮೆಲುಕು ಹಾಕಿದ್ದಾರೆ. ತಮಗಿಂತಲೂ ಸ್ಪಂದನಾಗೆ ಕೋಪ ಜಾಸ್ತಿ ಇತ್ತು ಎಂದು ಅವರು ಹೇಳಿದ್ದಾರೆ. ಪತ್ನಿಯ ಕೋಪಕ್ಕೆ ಕಾರಣ ಆಗುತ್ತಿದ್ದ ಸಂಗತಿಗಳು ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಪುತ್ರ ಶೌರ್ಯನ ಬಗ್ಗೆ ಸ್ಪಂದನಾ ಅವರು ಸಾಕಷ್ಟು ಕಾಳಜಿ ವಹಿಸುತ್ತಿದ್ದರು. ಆ ಎಲ್ಲ ವಿಚಾರಗಳ ಬಗ್ಗೆ ವಿಜಯ್ ರಾಘವೇಂದ್ರ (Vijay Raghavendra) ಅವರು ಈ ವಿಡಿಯೋದಲ್ಲಿ ಮಾತನಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

