ವಿಜಯ್ ರಾಘವೇಂದ್ರ ನಟನೆಯ ‘ಕದ್ದ ಚಿತ್ರ’ ಸಿನಿಮಾ ನೋಡಿ ಅಜಯ್ ರಾವ್ ಹೇಳಿದ್ದಿಷ್ಟು

|

Updated on: Sep 07, 2023 | 11:50 PM

Vijay Raghavendra: ವಿಜಯ್ ರಾಘವೇಂದ್ರ ನಟನೆಯ 'ಕದ್ದ ಚಿತ್ರ' ಸಿನಿಮಾ ಇಂದು (ಸೆಪ್ಟೆಂಬರ್ 7) ಬಿಡುಗಡೆ ಆಗಿದೆ. ಸಿನಿಮಾ ವೀಕ್ಷಿಸಿದ ನಟ ಅಜಯ್ ರಾವ್ ತಮ್ಮ ಗೆಳೆಯನ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯ್ ರಾಘವೇಂದ್ರ (Vijay Raghavendra) ನಟನೆಯ ‘ಕದ್ದ ಚಿತ್ರ’ ಸಿನಿಮಾ ಇಂದು (ಸೆಪ್ಟೆಂಬರ್ 7) ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಬಹಳ ಡಿಫರೆಂಟ್ ಪಾತ್ರದಲ್ಲಿ ವಿಜಯ್ ನಟಿಸಿದ್ದಾರೆ. ತಮ್ಮ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ಒರಟು ವ್ಯಕ್ತಿಯ ಪಾತ್ರದಲ್ಲಿ ನಟ ವಿಜಯ್ ರಾಘವೇಂದ್ರ ಕಾಣಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆಗಳು ಪ್ರೇಕ್ಷಕರಿಂದ ವ್ಯಕ್ತವಾಗಿದೆ. ಸಿನಿಮಾವನ್ನು ಚಿತ್ರರಂಗದ ಕೆಲವು ಗಣ್ಯರು ವೀಕ್ಷಿಸಿದ್ದು, ಅದರಲ್ಲಿ ನಟ ಅಜಯ್ ರಾವ್ ಸಹ ಒಬ್ಬರು. ತಮ್ಮ ಗೆಳೆಯನ ಸಿನಿಮಾ ಬಗ್ಗೆ ಅಜಯ್ ರಾವ್ ಹೇಳಿದ್ದಿಷ್ಟು…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ