ಪುತ್ರ ಶೌರ್ಯ ಬಗ್ಗೆ ಸ್ಪಂದನಾ ಬಗ್ಗೆ ಇದ್ದ ಕನಸೇನು: ವಿಜಯ್ ರಾಘವೇಂದ್ರ ಹೇಳಿದ್ದು ಹೀಗೆ

Updated on: Aug 31, 2023 | 10:27 PM

Vijay Raghavendra: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಇತ್ತೀಚೆಗಷ್ಟೆ ಅಗಲಿದ್ದಾರೆ. ಈ ಮುದ್ದಾದ ಜೋಡಿಗೆ ಶೌರ್ಯ ಎಂಬ ಮಗನಿದ್ದಾನೆ. ಪತಿಯ ಸಿನಿಮಾ ಕೆಲಸ, ಅಣ್ಣನ ರಾಜಕೀಯ ಇನ್ನಿತರೆ, ಸ್ವಂತ ನಿರ್ಮಾಣ ಸಂಸ್ಥೆ ಆರಂಭಿಸುವುದು ಇನ್ನಿತರೆ ಕನಸುಗಳನ್ನು ಹೊಂದಿದ್ದ ಸ್ಪಂದನಾ, ಮಗ ಶೌರ್ಯನ ಬಗ್ಗೆಯೂ ಕನಸು ಕಟ್ಟಿಕೊಂಡಿದ್ದರು.

ವಿಜಯ್ ರಾಘವೇಂದ್ರ (Vijay Raghavendra), ತಮ್ಮ ಸ್ಪಂದನಾರನ್ನು ಇತ್ತೀಚೆಗಷ್ಟೆ ಕಳೆದುಕೊಂಡಿದ್ದಾರೆ. ತೀವ್ರ ನೋವಿನಲ್ಲಿರುವ ವಿಜಯ್ ರಾಘವೇಂದ್ರ ಟಿವಿ9ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಪುತ್ರ ಶೌರ್ಯನಿಗಾಗಿಯಾದರೂ ನಗಲೇ ಬೇಕು, ನಗುತ್ತೇನೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ. ಇದರ ಜೊತೆಗೆ ಪತ್ನಿ ಸ್ಪಂದನಾ ಅವರಿಗೆ ಶೌರ್ಯ ಬಗ್ಗೆ ಇದ್ದ ಕನಸೇನು? ಅವನು ಏನಾಗಬೇಕು ಎಂಬ ಆಸೆಯನ್ನು ಸ್ಪಂದನಾ ಹೊಂದಿದ್ದರು ಎಂಬುದರ ಬಗ್ಗೆ ವಿಜಯ್ ರಾಘವೇಂದ್ರ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More