James: ‘ಜೇಮ್ಸ್​​ನಲ್ಲಿ ಅಪ್ಪುನ ಕಣ್ತುಂಬ ನೋಡಬೇಕು’; ಮನದಿಂಗಿತ ಹೇಳಿಕೊಂಡ ವಿಜಯ್ ರಾಘವೇಂದ್ರ

Edited By:

Updated on: Feb 23, 2022 | 4:37 PM

Puneeth Rajkumar | Vijay Raghavendra: ನಟ ವಿಜಯ್ ರಾಘವೇಂದ್ರ ಪುನೀತ್​ ರಾಜ್​ಕುಮಾರ್ ಮಾಡುತ್ತಿದ್ದ ಕಸರತ್ತುಗಳು, ಅವುಗಳ ಹಿಂದಿನ ತಯಾರಿ, ಅಪ್ಪು ನಾಯಕನಾಗಿ ನಟಿಸಿರುವ ಕೊನೆಯ ಚಿತ್ರ ‘ಜೇಮ್ಸ್’ ಮೊದಲಾದ ವಿಚಾರಗಳ ಬಗ್ಗೆ ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಶೋ ಕಾರ್ಯಕ್ರಮದ ನಿರ್ಣಾಯಕರು ಹಾಗೂ ಸ್ಪರ್ಧಿಗಳು ಇತ್ತೀಚೆಗೆ ಶೋ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅದರಲ್ಲಿ ಮಾತನಾಡಿದ ನಟ, ಶೋ ನಿರ್ಣಾಕರಲ್ಲಿ ಒಬ್ಬರಾದ ವಿಜಯ್ ರಾಘವೇಂದ್ರ (Vijay Raghavendra) ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಡಾನ್ಸ್ ಕುರಿತು ಮಾತನಾಡುತ್ತಾ ಮಾತು ಪುನೀತ್ (Puneeth Rajkumar) ಬಗ್ಗೆ ಹೊರಳಿತು. ಆಗ ಅವರು ಹಲವು ಕುತೂಹಲಕರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

‘‘ಅಪ್ಪು ಅವರ ಅಭಿಮಾನಿ ನಾನು. ಪುನೀತ್ ಮಾಡುತ್ತಿದ್ದ ಬ್ಯಾಕ್ ಫ್ಲಿಪ್ ಹಾಗೂ ಫ್ರಂಟ್ ಫ್ಲಿಪ್​ನಲ್ಲಿ ಒಂದು ಅಂದವಿರುತ್ತಿತ್ತು. ಅಪ್ಪು ಅವರು ಮೊದಲ ಶಾಟ್​ನಲ್ಲೇ ಏರ್​ ಫ್ಲಿಪ್ ಮಾಡಿ ಲ್ಯಾಂಡ್ ಆಗುತ್ತಾರೆ. ಆ ಶಾಟ್​​ನಲ್ಲಿ ಅಪ್ಪು ಮಾಡಿದ ರೀತಿ ಮತ್ಯಾವ ಕಲಾವಿದನಿಗೂ ಮಾಡುವುದಕ್ಕೆ ಸಾಧ್ಯವಿಲ್ಲ. ಅವರು ಪ್ರತಿಯೊಂದನ್ನೂ ಪ್ರಾಕ್ಟೀಸ್ ಮಾಡುತ್ತಿದ್ದರು. ದಿನಕ್ಕೆ ಎರಡು- ಮೂರು ಸಾವಿರ ಸ್ಕಿಪ್ಪಿಂಗ್ ಮಾಡುತ್ತಿದ್ದರು. ಬೇರೆ ಏನನ್ನೇ ಮಾಡುವುದಿದ್ದರೂ ಅವರು ಅಭ್ಯಾಸ ಮಾಡುತ್ತಿದ್ದರು. ಯಾವುದನ್ನೂ ಅವರು ಸುಮ್ಮನೆ ಮಾಡುತ್ತಿರಲಿಲ್ಲ ಎಂದಿದ್ದಾರೆ ವಿಜಯ್ ರಾಘವೇಂದ್ರ.

ಕುಂಗ್​ಫುವನ್ನು ಅಪ್ಪು ಅಭ್ಯಾಸ ಮಾಡುತ್ತಿದ್ದರು. ಅವರಿಗೆ ಅವರೇ ಸ್ಫೂರ್ತಿಯಾಗಿದ್ದರು. ತಮ್ಮ ರೆಕಾರ್ಡ್​​ಗಳನ್ನು ತಾವೇ ಬ್ರೇಕ್ ಮಾಡುತ್ತಾ ಬಂದರು ಎಂದು ಅಪ್ಪು ಬಗ್ಗೆ ಹೇಳಿಕೊಂಡಿದ್ದಾರೆ ವಿಜಯ್ ರಾಘವೇಂದ್ರ.

​‘ಜೇಮ್ಸ್’ ಬಗ್ಗೆ ಮಾತನಾಡಿದ ವಿಜಯ್ ರಾಘವೇಂದ್ರ, ‘ಜೇಮ್ಸ್ ಅನ್ನೋದು ನಮಗೆ ಎಮೋಷನ್. ಅದರಲ್ಲಿ ಅಪ್ಪು ಅವರಿದ್ದಾರೆ. ಅದನ್ನು ಕಣ್ತುಂಬ ನೋಡಬೇಕು, ಖುಷಿಪಡಬೇಕು. ಒಬ್ಬ ಕನ್ನಡಿಗನಾಗಿ, ಅವರನ್ನು ಇಷ್ಟಪಡುವ ಅಭಿಮಾನಿಯಾಗಿ ಈ ಮಾತು ಹೇಳುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:

Puneeth Rajkumar: ಥೇಟ್​​ ಪುನೀತ್​ರಂತೆಯೇ ಇದ್ದಾರೆ ಈ ನಾಯಕ ನಟ; ಅವರ ಹೊಸ ಸಿನಿಮಾ ಯಾವುದು?

ದೇಸಿ ಲುಕ್​ನಲ್ಲಿ ಮಿಂಚಿದ ಕಿಯಾರಾ ಅಡ್ವಾಣಿ; ಸೀರೆ ಧರಿಸಿ ಪೋಸ್​ ನೀಡಿದ ಚೆಲುವೆ

Published on: Feb 23, 2022 04:12 PM
Loading...
Unable to load recommendations.
Follow Us
TV9 Web

TV9 Kannada

Read More