‘ಸರ್ಕಾರದ ನಿರ್ಧಾರಗಳ ಹಿಂದೆ ಒಂದು ಅರ್ಥ ಇರುತ್ತದೆ’; ವಿಜಯ್ ರಾಘವೇಂದ್ರ
ಕೊರೊನಾ ಮೂರನೇ ಅಲೆ ಸಂದರ್ಭದಲ್ಲೂ ಚಿತ್ರಮಂದಿರಗಳು ತಾರತಮ್ಯ ಮುಂದುವರಿದಿದೆ. ಈ ಬಗ್ಗೆ ನಟ ವಿಜಯರಾಘವೇಂದ್ರ ಮಾತನಾಡಿದ್ದಾರೆ. ಸರ್ಕಾರದ ಕೆಲವು ನಿಯಮಗಳಿಗೆ ಅದರದ್ದೇ ಆದ ಅರ್ಥ ಇರುತ್ತದೆ ಎಂದಿದ್ದಾರೆ.
ಕೊವಿಡ್ ಕಾಣಿಸಿಕೊಂಡಾಗಿನಿಂದಲೂ ಸಾಕಷ್ಟು ತೊಂದರೆಗೆ ಸಿಲುಕಿರುವ ಚಿತ್ರರಂಗಕ್ಕೆ (Cinema Industry) ಸರ್ಕಾರದ ಹೊಸ ನಿಯಮದಿಂದ ಮತ್ತೆ ನಿರಾಸೆ ಆಗಿದೆ. ಚಿತ್ರಮಂದಿರಗಳಲ್ಲಿ ಶೇ.50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ಇದೆ. ಹೀಗಾಗಿ, ದೊಡ್ಡದೊಡ್ಡ ಸಿನಿಮಾಗಳು ರಿಲೀಸ್ ಆಗೋದು ಮತ್ತೆ ವಿಳಂಬ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಗ್ಗೆ ಎಲ್ಲರಿಂದಲೂ ವಿರೋಧ ವ್ಯಕ್ತವಾಗಿದೆ. ಮೊದಲನೇ ಅಲೆ ಕಾಣಿಸಿಕೊಂಡಾಗ ಚಿತ್ರಮಂದರಗಳಿಗೆ ಮೊದಲು ಬೀಗ ಹಾಕಲಾಗಿತ್ತು. ಅನ್ಲಾಕ್ ಪ್ರಕ್ರಿಯೆ ವೇಳೆ ಚಿತ್ರಮಂದಿರಕ್ಕೆ ಕೊನೆಯಲ್ಲಿ ಅವಕಾಶ ನೀಡಲಾಗಿತ್ತು. ಎರಡನೇ ಅಲೆ ಸಂದರ್ಭದಲ್ಲಿಯೂ ಹೀಗೆಯೇ ಆಗಿತ್ತು. ಈಗ ಕೊರೊನಾ ಮೂರನೇ ಅಲೆ ಸಂದರ್ಭದಲ್ಲೂ ಇದೇ ತಾರತಮ್ಯ ಮುಂದುವರಿದಿದೆ. ಈ ಬಗ್ಗೆ ನಟ ವಿಜಯರಾಘವೇಂದ್ರ ಮಾತನಾಡಿದ್ದಾರೆ. ಸರ್ಕಾರದ ಕೆಲವು ನಿಯಮಗಳಿಗೆ ಅದರದ್ದೇ ಆದ ಅರ್ಥ ಇರುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಚಿತ್ರರಂಗಕ್ಕೆ ಮತ್ತೆ ತಾರತಮ್ಯ; ಎಲ್ಲದಕ್ಕೂ ಇದೆ ಅವಕಾಶ, ಥಿಯೇಟರ್ಗೆ ಮಾತ್ರ ಮುಂದುವರಿದ ನಿರ್ಬಂಧ
Latest Videos