ಚಾಮರಾಜನಗರ: ಚುನಾವಣೆ ಪ್ರಚಾರಕ್ಕೆ ಬಂದ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿಗೆ ಗ್ರಾಮಸ್ಥರ ತರಾಟೆ

ಆಯೇಷಾ ಬಾನು

Updated on: Apr 04, 2023 | 12:37 PM

ಶಿವಪುರ ಗ್ರಾಮಸ್ಥರು ಚುನಾವಣಾ ಪ್ರಚಾರಕ್ಕೆ ಬಂದಿದ್ದ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿಗೆ ಮುತ್ತಿಗೆ ಹಾಕಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಚಾಮರಾಜನಗರ: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಪ್ರಚಾರಕ್ಕೆ ಹೋಗಿದ್ದ ವೇಳೆ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಚಾಮರಾಜನಗರ ತಾಲೂಕಿನ ಶಿವಪುರ ಗ್ರಾಮಸ್ಥರು ಚುನಾವಣಾ ಪ್ರಚಾರಕ್ಕೆ ಬಂದಿದ್ದ ಶಾಸಕರಿಗೆ ಮುತ್ತಿಗೆ ಹಾಕಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಚೆಸ್ಕಾಂ ಸುಖಾಸುಮ್ಮನೆ ಹಬ್ಬದ ದಿನ ವಿದ್ಯುತ್ ಕಟ್ ಮಾಡಿದಾಗ ಸಮಸ್ಯೆಗೆ ಶಾಸಕರು ಸ್ಪಂದಿಸಲಿಲ್ಲ. ಕತ್ತಲಲ್ಲೇ ಹಬ್ಬ ಮಾಡಬೇಕಾಯ್ತು. ಫೋನ್ ಮಾಡಿದ್ರು ಶಾಸಕರು ಸ್ಪಂದಿಸಲಿಲ್ಲ. ಊರಲ್ಲಿ ಒಂದು ಸಮುದಾಯ ಭವನ ಕಟ್ಟಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಸ್ವಾಮಿ ಗ್ರಾಮಸ್ಥರ‌ನ್ನು ಸಮಾಧಾನಪಡಿಸಿದರು.

Loading...
Unable to load recommendations.
Follow Us