’ಅಂದೊಂತಿತ್ತು ಕಾಲ’, ಆ ಸುಂದರ ಕಾಲ ತೋರಿಸಲು ಬಂದ ವಿನಯ್ ರಾಜ್ಕುಮಾರ್
Vinay Rajkumar: ಒಂದಕ್ಕಿಂತಲೂ ಒಂದು ಭಿನ್ನವಾದ ಕತೆಗಳುಳ್ಳ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುವ ವಿನಯ್ ರಾಜ್ಕುಮಾರ್ ಇದೀಗ ‘ಅಂದೊಂದಿತ್ತು ಕಾಲ’ ಹೆಸರಿನ ಸಿನಿಮಾ ಆಯ್ಕೆ ಮಾಡಿಕೊಂಡಿದ್ದಾರೆ. ಇದು 80-90ರ ದಶಕದ ಕತೆ ಹೇಳುವ ಸಿನಿಮಾ. ಈ ಸಿನಿಮಾದ ಬಗ್ಗೆ ಪಾತ್ರದ ಬಗ್ಗೆ ವಿನಯ್ ಹೇಳಿರುವುದು ಹೀಗೆ...
ವಿನಯ್ ರಾಜ್ಕುಮಾರ್ ಹೆಚ್ಚಿನ ಅಬ್ಬರ ಇಲ್ಲದೆ, ಸರಳವಾದ ಸಿನಿಮಾಗಳನ್ನು ಮಾಡುತ್ತಾ ತಮ್ಮದೇ ಭಿನ್ನ ಹಾದಿಯನ್ನು ಮಾಡಿಕೊಂಡು ಸಾಗುತ್ತಿದ್ದಾರೆ. ವಿನಯ್ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳು ಒಂದಕ್ಕಿಂತಲೂ ಒಂದು ಭಿನ್ನವಾಗಿರುತ್ತವೆ. ಬಹುಮುಖ್ಯವಾಗಿ ವಿನಯ್, ಎಲಿವೇಷನ್ಗಳಿಗಾಗಿ ಅಲ್ಲದೆ ಕತೆಯ ಕಾರಣಕ್ಕೆ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಾರೆ. ಇದೀಗ ಮತ್ತೊಂದು ಸ್ಟೋರಿ ಓರಿಯೆಂಟೆಡ್ ಸಿನಿಮಾ ಅನ್ನು ವಿನಯ್ ಆರಿಸಿಕೊಂಡಿದ್ದಾರೆ. ಸಿನಿಮಾದ ಹೆಸರು ‘ಅಂದೊಂದಿತ್ತು ಕಾಲ’. ಇದು 80-90ರ ದಶಕದ ಕತೆ ಹೇಳುವ ಸಿನಿಮಾ. ಸಿನಿಮಾದಲ್ಲಿ ವಿನಯ್ ನಿರ್ದೇಶಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದಿತಿ ಪ್ರಭುದೇವ ನಾಯಕಿ. ಸಿನಿಮಾದ ಪಾತ್ರದ ಬಗ್ಗೆ ವಿನಯ್ ಹೇಳಿರುವ ಮಾತುಗಳನ್ನು ಕೇಳಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ