ಬಸನಗೌಡ ಯತ್ನಾಳ್ ಪಕ್ಷದ ಹಿರಿಯರು, ಅವರು ಸಭೆ ನಡೆಸಿದರೆ ತಪ್ಪೇನು ಬಂತು? ಬಿವೈ ವಿಜಯೇಂದ್ರ
ಫೆಬ್ರುವರಿ 20 ನೇ ತಾರೀಖು ರಾಜ್ಯ ಬಿಜೆಪಿ ಘಟಕದಲ್ಲಿ ಎಲ್ಲವೂ ಸರಿಗೋಗುತ್ತದೆ ಅಂತ ನೀವು ಹೇಳಿದ್ದುಂಟು, ಏನು ಸರಿಹೋಗುತ್ತೆ ಅಂತ ಕೇಳಿದರೂ ವಿಜಯೇಂದ್ರ ಎಲ್ಲ ಪ್ರಶ್ನೆಗಳಿಗೆ ನಾಳೆಯೇ ಉತ್ತರವೆನ್ನುತ್ತಾರೆ. ಬಸನಗೌಡ ಪಾಟೀಲ್ ಯತ್ನಾಳ್ ಬಣದ ಸದಸ್ಯರು ಸಭೆ ನಡೆಸಿದರೆ ತಪ್ಪೇನು? ಅವರು ಪಕ್ಷದ ಹಿರಿಯರು ಮತ್ತು ಪಕ್ಷವನ್ನು ಮತ್ತಷ್ಟು ಬಲಪಡಿಸುವ ಯೋಚನೆ ಮಾಡಿ ಸಭೆ ನಡೆಸುತ್ತಾರೆ, ತಪ್ಪೇನೂ ಇಲ್ಲ ಎಂದ ವಿಜಯೇಂದ್ರ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸರ್ಕಾರ ಮೂರು ತಿಂಗಳಿಂದ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಣ ನೀಡಿಲ್ಲ ಮತ್ತು ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಬದಲಿಗೆ ನೀಡುತ್ತಿದ್ದ ಹಣವನ್ನೂ ಖಾತೆಗಳಿಗೆ ಹಾಕದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲಿಲ್ಲ. ಆದರೆ ನಾಳೆ ಒಂದು ಪತ್ರಿಕಾ ಗೋಷ್ಠಿಯನ್ನು ಕರೆದಿದ್ದು ಅಲ್ಲಿ ಎಲ್ಲ ವಿಷಯಗಳ ಬಗ್ಗೆ ಮಾತಾಡುವುದಾಗಿ ಅವರು ಹೇಳಿದರು. ಬಿಜೆಪಿ ಸಂಘಟನೆ ಚುನಾವಣೆಗಳಿಗೆ ರಾಜ್ಯದ ವೀಕ್ಷಕರಾಗಿರುವ ಶಿವರಾಜ್ ಸಿಂಗ್ ಚೌಹಾನ್ ಅವರು ಯಾವಾಗ ಬೆಂಗಳೂರಿಗೆ ಬರಲಿದ್ದಾರೆ ಎಂದು ಕೇಳಿದ ಪ್ರಶ್ನೆಗೂ ನಾಳಿನ ಪತ್ರಿಕಾ ಗೋಷ್ಠಿಯಲ್ಲಿ ಉತ್ತರ ನೀಡುತ್ತೇನೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಜ್ಯ ಬಿಜೆಪಿಯಲ್ಲಿರುವ ಬಂಡಾಯವನ್ನು ಆದಷ್ಟು ಬೇಗ ಶಮನಗೊಳಿಸುವ ಸೂಚನೆ ವರಿಷ್ಠರು ನೀಡಿದ್ದಾರೆ: ಬಿವೈ ವಿಜಯೇಂದ್ರ