ಮುಂಬೈನಲ್ಲಿ ಬೃಹತ್ ಗಾತ್ರದ ಗಣಪನ ಪ್ರತಿಷ್ಠಾಪನೆ, ಬೆಳಗ್ಗೆಯಿಂದಲೇ ನಮಿಸುತ್ತಿರುವ ಭಕ್ತಾದಿಗಳು

Updated on: Aug 27, 2025 | 12:48 PM

ಒಂದು ಅಂದಾಜಿನ ಪ್ರಕಾರ ಮುಂಬೈ ನಗರದಲ್ಲಿ 14,000ಕ್ಕೂ ಹೆಚ್ಚು ಮಂಟಪಗಳಲ್ಲಿ ಗಣೇಶನ ಪ್ರತಿಷ್ಠಾಪನೆಯಾಗುತ್ತದೆ ಮತ್ತು ಇವುಗಳಲ್ಲಿ 8,000 ಕ್ಕೂ ಹೆಚ್ಚು ಮಂಟಪಗಳ ನೋಂದಣಿಯಾಗಿದೆ. ಮಂಟಪಗಳಲ್ಲಿ ಗಣೇಶನ ಪ್ರತಿಷ್ಠಾಪನೆಯೊಂದಿಗೆ ಸ್ಥಳೀಯ ರಾಜಕೀಯ ಬೆರೆತಿರುತ್ತದೆ ಅನ್ನೋದು ಸುಳ್ಳಲ್ಲ. ಆದರೆ ಗಣಪನ ಉತ್ಸವದಲ್ಲಿ ಜನ ಪಕ್ಷಭೇದ ಮರೆತು ಒಂದಾಗುತ್ತಾರೆ ಮತ್ತು ವಿಘ್ನ ನಿವಾರಕನ ಆಚರಣೆಯನ್ನು ಸಡಗರದಿಂದ ನಡೆಸುತ್ತಾರೆ.

ಮುಂಬೈ, ಆಗಸ್ಟ್ 27: ಗಣೇಶ ಚತುರ್ಥಿ ಹಬ್ಬವನ್ನು ನಮ್ಮ ರಾಜ್ಯ ಮತ್ತು ದೇಶದ ಎಲ್ಲ ಭಾಗಗಳಲ್ಲಿ ಅತಿ ವಿಜೃಭಣೆ ಮತ್ತು ಸಾಂಸ್ಕೃತಿಕ ಕಲರವಗಳೊಂದಿಗೆ ಆಚರಿಸಲಾಗುತ್ತದೆ. ನಮ್ಮ ನೆರೆರಾಜ್ಯ ಮಹಾರಾಷ್ಟ್ರದ ರಾಜಧಾನಿ (Maharashtra capital) ಮುಂಬೈ ಮತ್ತು ಪುಣೆ ನಗರಗಳಲ್ಲಿ ನಡೆಯುವ ವಿನಾಯಕ ಚತುರ್ಥಿ ವಿಶ್ವವಿಖ್ಯಾತಿಯನ್ನು ಪಡೆದುಕೊಂಡಿದೆ, ನಮ್ಮ ಮೈಸೂರು ದಸರಾ ಮಹೋತ್ಸವದ ಹಾಗೆ. ಇಲ್ನೋಡಿ, ಮುಂಬೈ ನಗರದ ಮಂಟಪವೊಂದರಲ್ಲಿ ಬೃಹತ್ ಗಾತ್ರದ ಗಣೇಶನ ಪ್ರತಿಷ್ಠಾಪನೆಯಾಗಿದೆ ಮತ್ತು ಜನ ಭಕ್ತಿಭಾವದಿಂದ ನಮಿಸುತ್ತಿದ್ದಾರೆ. ಭಾರತೀಯರು ಗಣೇಶನನ್ನು ವಿಘ್ನ ನಿವಾರಕ ಮತ್ತು ಹೊಸ ಆರಂಭಗಳ ದೇವರು ಎಂದು ಪೂಜಿಸುತ್ತಾರೆ. ಗಣೇಶೋತ್ಸವ ಸಾಮಾನ್ಯವಾಗಿ ಹತ್ತು ದಿನಗಳ ಕಾಲ ನಡೆಯುತ್ತದೆ, ಇವತ್ತು ವಿನಾಯಕನ ಪ್ರತಿಷ್ಠಾಪನೆಗೊಂಡು ಸೆಪ್ಟಂಬರ್ 6 ರಂದು ನಡೆಯುವ ವಿಸರ್ಜನೆಯೊಂದಿಗೆ ಉತ್ಸವ ಸಂಪನ್ನಗೊಳುತ್ತದೆ.

ಇದನ್ನೂ ಓದಿ:  ಗಣೇಶನಿಗೆ ಚತುರ್ಥಿಯೇ ಯಾಕೆ ಪ್ರಿಯ? ಗಣಪತಿ ಹಬ್ಬ ಮಾಡುವುದು ಹೇಗೆ? ಇಲ್ಲಿದೆ ನೋಡಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 27, 2025 12:13 PM