ಲೀಲಾವತಿ 11ನೇ ದಿನದ ಕಾರ್ಯದಲ್ಲಿ ತಾಯಿಯ ನೆನೆದು ಭಾವುಕರಾದ ವಿನೋದ್​ ರಾಜ್​

Edited By:

Updated on: Dec 18, 2023 | 5:49 PM

ನಟಿ ಲೀಲಾವತಿ ಅವರ ಅಗಲಿಕೆಯಿಂದ ಪುತ್ರ ವಿನೋದ್​ ರಾಜ್​ ತೀವ್ರ ನೋವು ಅನುಭವಿಸಿದ್ದಾರೆ. ತಾಯಿಯ 11ನೇ ದಿನದ ಕಾರ್ಯದಲ್ಲಿ ಅವರು ಭಾವುಕರಾಗಿ ಮಾತನಾಡಿದ್ದಾರೆ. ಅಮ್ಮನನ್ನು ನೆನಪು ಮಾಡಿಕೊಂಡು ಹಾಡು ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..

ಕನ್ನಡ ಚಿತ್ರರಂಗದ ಖ್ಯಾತ ನಟಿ ಲೀಲಾವತಿ (Leelavathi) ಅವರು ನಿಧನರಾಗಿ 11 ದಿನ ಕಳೆದಿದೆ. 11ನೇ ದಿನದ ಕಾರ್ಯವನ್ನು ಪುತ್ರ ವಿನೋದ್​ ರಾಜ್​ ಮಾಡಿದ್ದಾರೆ. ಈ ಕಾರ್ಯದಲ್ಲಿ ಸ್ಯಾಂಡಲ್​ವುಡ್​ನ ಅನೇಕರು ಭಾಗಿ ಆಗಿದ್ದಾರೆ. ಲೀಲಾವತಿ ಅವರ ನೆನಪುಗಳನ್ನು ಮೆಲುಕು ಹಾಕಲಾಗಿದೆ. ಕಾರ್ಯ ಮುಗಿದ ಬಳಿಕ ‘ಟಿವಿ9 ಕನ್ನಡ’ದ ಜೊತೆ ಮಾತನಾಡಿದ ವಿನೋದ್​ ರಾಜ್​ (Vinod Raj) ಅವರು ಭಾವುಕರಾದರು. ‘ಇನ್ನೂ ಅನೇಕ ಸಾಮಾಜಿಕ ಕೆಲಸಗಳನ್ನು ನಾವು ಮಾಡಬೇಕಿದೆ. ಅಮ್ಮ ಒಂದಷ್ಟು ಕೆಲಸವನ್ನು ಸೂಚಿಸಿದ್ದಾರೆ’ ಎಂದು ವಿನೋದ್​ ರಾಜ್​ ಹೇಳಿದ್ದಾರೆ. ಅಮ್ಮನ ನೆನಪಿನಲ್ಲಿ ಅವರು ಹಾಡು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More