Video: ಜರ್ಮನಿಯ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ, ಬಂದೂಕು, ಚಾಕುವಿನಿಂದ ಪರಸ್ಪರ ದಾಳಿ, 11 ಮಂದಿಗೆ ಗಾಯ

Updated on: Apr 21, 2026 | 7:55 AM

ಜರ್ಮನಿಯ ಮೋರ್ಸ್​ ನಗರದ ಡ್ಯೂಸ್ಬರ್ಗ್​​ನಲ್ಲಿರುವ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ ನಡೆದಿದೆ. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ. ಗುರುದ್ವಾರವು ಭಕ್ತರ ಪ್ರಾರ್ಥನೆಯಿಂದ ಸದಾ ಶಾಂತವಾಗಿರುತ್ತದೆ. ಆದರೆ ಸೋಮವಾರ ಮಾತ್ರ ಅಲ್ಲಿ ಶಾಂತಿಯ ಬದಲು ಶಸ್ತ್ರಾಸ್ತ್ರಗಳ ಸದ್ದು ಕೇಳಿಸಿತು. ಎರಡು ಗುಂಪುಗಳ ನಡುವಿನ ಅಧಿಕಾರದ ಹಪಾಹಪಿ ಪವಿತ್ರ ಆವರಣವನ್ನು ರಕ್ತಸಿಕ್ತಗೊಳಿಸಿತು. ಧಾರ್ಮಿಕ ಸಭೆ ಪ್ರಾರಂಭವಾಗುವ ಕೆಲವೇ ಕ್ಷಣಗಳ ಮೊದಲು ಈ ಘಟನೆ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಇದು ಆಕಸ್ಮಿಕವಾಗಿ ನಡೆದ ಜಗಳವಲ್ಲ, ಬದಲಾಗಿ ಒಂದು ವ್ಯವಸ್ಥಿತ ಸಂಚು. ಸುಮಾರು 40 ಜನರು ಈ ಭೀಕರ ಘರ್ಷಣೆಯಲ್ಲಿ ಭಾಗಿಯಾಗಿದ್ದರು.

ಬರ್ಲಿನ್, ಏಪ್ರಿಲ್ 21: ಜರ್ಮನಿಯ ಮೋರ್ಸ್​ ನಗರದ ಡ್ಯೂಸ್ಬರ್ಗ್​​ನಲ್ಲಿರುವ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ ನಡೆದಿದೆ. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ. ಗುರುದ್ವಾರವು ಭಕ್ತರ ಪ್ರಾರ್ಥನೆಯಿಂದ ಸದಾ ಶಾಂತವಾಗಿರುತ್ತದೆ. ಆದರೆ ಸೋಮವಾರ ಮಾತ್ರ ಅಲ್ಲಿ ಶಾಂತಿಯ ಬದಲು ಶಸ್ತ್ರಾಸ್ತ್ರಗಳ ಸದ್ದು ಕೇಳಿಸಿತು. ಎರಡು ಗುಂಪುಗಳ ನಡುವಿನ ಅಧಿಕಾರದ ಹಪಾಹಪಿ ಪವಿತ್ರ ಆವರಣವನ್ನು ರಕ್ತಸಿಕ್ತಗೊಳಿಸಿತು.
ಧಾರ್ಮಿಕ ಸಭೆ ಪ್ರಾರಂಭವಾಗುವ ಕೆಲವೇ ಕ್ಷಣಗಳ ಮೊದಲು ಈ ಘಟನೆ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಇದು ಆಕಸ್ಮಿಕವಾಗಿ ನಡೆದ ಜಗಳವಲ್ಲ, ಬದಲಾಗಿ ಒಂದು ವ್ಯವಸ್ಥಿತ ಸಂಚು. ಸುಮಾರು 40 ಜನರು ಈ ಭೀಕರ ಘರ್ಷಣೆಯಲ್ಲಿ ಭಾಗಿಯಾಗಿದ್ದರು.

ದಾಳಿಕೋರರು ಇದ್ದಕ್ಕಿದ್ದಂತೆ ಪೆಪ್ಪರ್ ಸ್ಪ್ರೇ ಬಳಸಿ ಎದುರಾಳಿಗಳ ಕಣ್ಣು ಕಾಣಿಸದಂತೆ ಮಾಡಿದರು. ಆ ಕ್ಷಣದಲ್ಲೇ ಬಂದೂಕಿನ ಗುಂಡು ಹಾರುವ ಸದ್ದು ಕೇಳಿಸಿತು. ಚಾಕುಗಳಿಂದ ಹತ್ತಿರದಲ್ಲಿದ್ದವರ ಮೇಲೆ ದಾಳಿ ಮಾಡಲು ಬಳಕೆಯಾದವು. ಇದು ಭೀಕರವಾಗಿತ್ತು. ದಾಳಿ ನಡೆಯುತ್ತಿದ್ದಂತೆ ಜನ ಭಯಭೀತರಾಗಿ ಹೊರಕ್ಕೆ ಓಡತೊಡಗಿದರು ಎಂದು ಸಭೆಯ ಸದಸ್ಯರೊಬ್ಬರು ಆ ಕರಾಳ ಕ್ಷಣವನ್ನು ನೆನೆಯುತ್ತಾರೆ.

ಈ ರಕ್ತಸಿಕ್ತ ಘರ್ಷಣೆಗೆ ಮೂಲ ಕಾರಣವೆಂದರೆ ಗುರುದ್ವಾರದ ಹೊಸ ನಿರ್ದೇಶಕ ಮಂಡಳಿಯ ಚುನಾವಣೆ. ಹಿಂದಿನ ಮಂಡಳಿ ಮತ್ತು ಪ್ರಸ್ತುತ ಸದಸ್ಯರ ನಡುವೆ ಗುರುದ್ವಾರದ ನಿಧಿ ಹಾಗೂ ಆಡಳಿತದ ಮೇಲಿನ ಹಿಡಿತಕ್ಕಾಗಿ ದೀರ್ಘಕಾಲದಿಂದ ಸಂಘರ್ಷ ನಡೆಯುತ್ತಿತ್ತು. ಅಧಿಕಾರದ ಆಸೆ ಹೇಗೆ ಧಾರ್ಮಿಕ ಚೌಕಟ್ಟನ್ನು ಮೀರಿ ಮನುಷ್ಯರನ್ನು ಹಿಂಸೆಯತ್ತ ತಳ್ಳುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More