ನಡುರಸ್ತೆಯಲ್ಲೇ ವ್ಯಕ್ತಿಯನ್ನು ಥಳಿಸಿ ಕೊಂದ ಜನರು; ಶಾಕಿಂಗ್ ವಿಡಿಯೋ ವೈರಲ್

Updated on: Jul 08, 2024 | 8:53 PM

ಪಂಜಾಬ್​ನ ಭಟಿಂಡಾ ಬಳಿ ಇರುವ ಮೌರ್ ಮಂಡಿಯಲ್ಲಿ ಭಾನುವಾರ ನಡೆದ ಆಘಾತಕಾರಿ ಘಟನೆಯಲ್ಲಿ 40 ವರ್ಷದ ಜಸ್ಪಾಲ್ ಸಿಂಗ್ ಅಥಿಯಾನಿ ಎಂಬಾತನ ಮೇಲೆ ಇಬ್ಬರು ವ್ಯಕ್ತಿಗಳು ಚೂಪಾದ ಆಯುಧಗಳಿಂದ ನಡುರಸ್ತೆಯಲ್ಲೇ ಹಲ್ಲೆ ನಡೆಸಿದ್ದಾರೆ. ಅಥಿಯಾನಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ವರದಿ ಮಾಡಿದ್ದಾರೆ.

ಪಂಜಾಬ್ ರಾಜ್ಯದಲ್ಲಿ ಇತ್ತೀಚೆಗೆ ನೈತಿಕ ಪೊಲೀಸ್​ಗಿರಿ ಪ್ರಕರಣಗಳು ಹೆಚ್ಚಾಗಿವೆ. ಇಲ್ಲಿನ ಭಟಿಂಡಾ ಜಿಲ್ಲೆಯ ಮೌರ್ ಮಂಡಿ ಗ್ರಾಮದಲ್ಲಿ ವ್ಯಕ್ತಿಗಳ ಗುಂಪೊಂದು ಹರಿತವಾದ ಆಯುಧಗಳಿಂದ ಮತ್ತೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದೆ. ಮೌರ್ ಮಂಡಿಯ ಟ್ರಕ್ ಯೂನಿಯನ್ ಬಳಿ ಈ ಘಟನೆ ಸಂಭವಿಸಿದ್ದು, ಜಸ್ಪಾಲ್ ಸಿಂಗ್ ಎಂಬ 40 ವರ್ಷದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸುತ್ತಲೂ ಅನೇಕ ಜನರು ಜಮಾಯಿಸಿದ್ದರೂ, ಆ ವ್ಯಕ್ತಿಯನ್ನು ಕಾಪಾಡಲು ಯಾರೂ ಮುಂದೆ ಬರಲಿಲ್ಲ. ತೀವ್ರವಾಗಿ ಥಳಿಸಿದ್ದರಿಂದ ಆತ ಸಾವನ್ನಪ್ಪಿದ್ದಾರೆ.

ಗಾಯಗೊಂಡ ಸಿಂಗ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ದಾಳಿ ಮಾಡಿದವರನ್ನು ಗುರುತಿಸಲಾಗಿದ್ದು, ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us