Viral Video: ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್

|

Updated on: Jul 06, 2024 | 3:29 PM

ಸಮುದ್ರದಲ್ಲಿ ಆರಾಮಾಗಿ ಎಂಜಾಯ್ ಮಾಡಿಕೊಂಡಿದ್ದ ಪ್ರವಾಸಿಗರು ನೋಡನೋಡುತ್ತಿದ್ದಂತೆ ಯುವತಿಯೊಬ್ಬಳ ಕಾಲನ್ನು ಶಾರ್ಕ್ ತಿಂದು ಹಾಕಿದೆ. ಇದರಿಂದ ಸಮುದ್ರದ ನೀರು ಕೆಂಪಾಗಿ ಬದಲಾಗಿರುವ ವಿಡಿಯೋ ವೈರಲ್ ಆಗಿದೆ.

ಟೆಕ್ಸಾಸ್‌ನ ಸೌತ್ ಪಾಡ್ರೆ ದ್ವೀಪದಲ್ಲಿ 4 ಶಾರ್ಕ್ ದಾಳಿಗಳು ಸಂಭವಿಸಿರುವ ಘಟನೆ ನಡೆದಿದೆ. ಗೇಮ್ ವಾರ್ಡನ್ ಕ್ಯಾಪ್ಟನ್ ಕ್ರಿಸ್ ಡೌಡಿ ಎಲ್ಲಾ ದಾಳಿಗಳು ಪರಸ್ಪರ 2 ಗಂಟೆಗಳ ಒಳಗೆ ಸಂಭವಿಸಿವೆ. ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದ ಮಹಿಳೆಯ ಕಾಲಿಗೆ ಬಾಯಿ ಹಾಕಿರುವ ಶಾರ್ಕ್ ಆಕೆಯ ಕಾಲಿನ ಪೀಸ್ ತಿಂದುಹಾಕಿದೆ. ಇದರಿಂದ ಸಮುದ್ರದ ನೀರು ಕೆಂಬಣ್ಣಕ್ಕೆ ತಿರುಗಿರುವ ಭಯಾನಕ ವಿಡಿಯೋ ವೈರಲ್ ಆಗಿದೆ.

ಆ ಶಾರ್ಕ್ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರ ಮೇಲೆ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಒಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನೊಬ್ಬ ಮಹಿಳೆಯ ಕಾಲು ಕಟ್ ಆಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸಮುದ್ರದಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ. ಸುಮಾರು 6 ಅಡಿ (ಸುಮಾರು 1.8 ಮೀಟರ್) ಉದ್ದದ ಒಂದೇ ಶಾರ್ಕ್ ಈ ಘಟನೆಗೆ ಕಾರಣ. ಈ ದಾಳಿಯ ನಂತರ ಸುರಕ್ಷತಾ ದೃಷ್ಟಿಯಿಂದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಕಡಲ ತೀರದಲ್ಲಿ ಗಸ್ತು ತಿರುಗುತ್ತಿದ್ದಾರೆ ಮತ್ತು ಡ್ರೋನ್‌ಗಳನ್ನು ಹಾರಿಸುತ್ತಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ