Virat Kohli: ನಿಯಮ ಉಲ್ಲಂಘಿಸಿದ್ರ ಕೊಹ್ಲಿ?: ಭಾರತೀಯರು ತಂಗಿರುವ ಬೆಂಗಳೂರಿನ ಹೋಟೆಲ್​ನಲ್ಲಿ ವಿರಾಟ್ ಜೊತೆ ಅನುಷ್ಕಾ

Updated on: Nov 10, 2023 | 7:53 AM

India vs Netherlands, ICC ODI World Cup 2023: ನಿಯಮದ ಪ್ರಕಾರ ತಂಡದ ಸದಸ್ಯರು ಮಾತ್ರ ಹೋಟೆಲ್‌ನಲ್ಲಿ ಉಳಿದುಕೊಳ್ಳಬಹುದು. ಆದರೆ, ಹೋಟೆಲ್​ನಲ್ಲಿ ವಿರಾಟ್ ಕೊಹ್ಲಿ ಜೊತೆ ಅವರ ಪತ್ನಿ ಅನುಷ್ಕಾ ಶರ್ಮಾ ಕೂಡ ಇರುವುದು ಕಂಡುಬಂದಿದೆ. ಕೊಹ್ಲಿ-ಅನುಷ್ಕಾ ಹೋಟೆಲ್‌ನಿಂದ ಹೊರ ಹೋಗುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾರತ ತಂಡ ಸೆಮಿ ಫೈನಲ್​ಗು ಮುನ್ನ ತನ್ನ ಕೊನೆಯ ಪಂದ್ಯವನ್ನು ಭಾನುವಾರ (ನವೆಂಬರ್ 12) ನೆದರ್ಲೆಂಡ್ಸ್ (India vs Netherlands) ವಿರುದ್ಧ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ. ಈ ಪಂದ್ಯಕ್ಕಾಗಿ ಈಗಾಗಲೇ ಟೀಮ್ ಇಂಡಿಯಾ ಆಟಗಾರರು ಬೆಂಗಳೂರಿಗೆ ತಲುಪಿದ್ದು, ಹೋಟೆಲ್​ನಲ್ಲಿ ತಂಗಿದ್ದಾರೆ. ನಿಯಮದ ಪ್ರಕಾರ ತಂಡದ ಸದಸ್ಯರು ಮಾತ್ರ ಹೋಟೆಲ್‌ನಲ್ಲಿ ಉಳಿದುಕೊಳ್ಳಬಹುದು. ಆದರೆ, ಹೋಟೆಲ್​ನಲ್ಲಿ ವಿರಾಟ್ ಕೊಹ್ಲಿ ಜೊತೆ ಅವರ ಪತ್ನಿ ಅನುಷ್ಕಾ ಶರ್ಮಾ ಕೂಡ ಇರುವುದು ಕಂಡುಬಂದಿದೆ. ಕೊಹ್ಲಿ-ಅನುಷ್ಕಾ ಹೋಟೆಲ್‌ನಿಂದ ಹೊರ ಹೋಗುತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಕೊಹ್ಲಿ ನಿಯಮ ಉಲ್ಲಂಘಿಸಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಟೀಮ್ ಇಂಡಿಯಾ ಇಂದು ಮತ್ತು ನಾಳೆ ಐಚ್ಛಿಕ ತರಬೇತಿಯನ್ನು ಹೊಂದಿದೆ. ಕೊಹ್ಲಿ ಈ ತರಬೇತಿಯಲ್ಲಿ ಪಾಲ್ಗೊಳ್ಳುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More