Video: ತನ್ನಷ್ಟಕ್ಕೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 7 ವರ್ಷದ ಬಾಲಕಿ ಮೇಲೆ ಹತ್ತಾರು ನಾಯಿಗಳಿಂದ ದಾಳಿ

Updated on: Oct 27, 2025 | 9:14 AM

ತನ್ನಷ್ಟಕ್ಕೆ ತಾನು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 7 ವರ್ಷದ ಬಾಲಕಿ ಮೇಲೆ ಹತ್ತಾರು ನಾಯಿಗಳು ಏಕಕಾಲಕ್ಕೆ ದಾಳಿ ನಡೆದಿರುವ ಭಯಾನಕ ಘಟನೆ ತೆಲಂಗಾಣದ ವಾರಂಗಲ್​ನಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದೆ. ಸುಮಾರು 8-10 ನಾಯಿಗಳ ಗುಂಪೊಂದು ಬಾಲಕಿಯ ಮೇಲೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ವಾರಂಗಲ್ ನಗರ ಪ್ರದೇಶದಲ್ಲಿರುವ ಹನುಮಗೊಂಡ ನ್ಯೂ ಶಾಯಂಪೇಟೆಯಲ್ಲಿ ಈ ದುರಂತ ನಡೆದಿದೆ.

ವಾರಂಗಲ್, ಅಕ್ಟೋಬರ್ 27: ತನ್ನಷ್ಟಕ್ಕೆ ತಾನು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 7 ವರ್ಷದ ಬಾಲಕಿ ಮೇಲೆ ಹತ್ತಾರು ನಾಯಿಗಳು ಏಕಕಾಲಕ್ಕೆ ದಾಳಿ ನಡೆದಿರುವ ಭಯಾನಕ ಘಟನೆ ತೆಲಂಗಾಣದ ವಾರಂಗಲ್​ನಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದೆ. ಸುಮಾರು 8-10 ನಾಯಿಗಳ ಗುಂಪೊಂದು ಬಾಲಕಿಯ ಮೇಲೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿರುವುದನ್ನು ವೀಡಿಯೊದಲ್ಲಿ ಕಾಣಬಹುದು.
ವಾರಂಗಲ್ ನಗರ ಪ್ರದೇಶದಲ್ಲಿರುವ ಹನುಮಗೊಂಡ ನ್ಯೂ ಶಾಯಂಪೇಟೆಯಲ್ಲಿ ಈ ದುರಂತ ನಡೆದಿದೆ.

ವಿಡಿಯೋದಲ್ಲಿ ಬಾಲಕಿ ರಸ್ತೆಯಲ್ಲಿ ನಾಯಿಗಳಿಗಿಂತ ಸ್ವಲ್ಪ ದೂರದಲ್ಲೇ ನಡೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಳಿಕ ಎಲ್ಲಾ ದಿಕ್ಕುಗಳಿಂದಲೂ ನಾಯಿಗಳು ಓಡಿಬಂದು ಏಕಾಏಕಿ ಬಾಲಕಿ ಮೇಲೆ ದಾಳಿ ನಡೆಸಿವೆ. ಆಕೆಯನ್ನು ಕಚ್ಚುತ್ತಲೇ ಇದ್ದವು. ಅಲ್ಲೇ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಅದನ್ನು ಗಮನಿಸಿ ಕೂಡಲೇ ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾನೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ