ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ನೀವು ಈ ವಿಡಿಯೋ ನೋಡಲೇಬೇಕು

Updated on: Apr 23, 2025 | 8:55 PM

ಶಿಖರ, ಕಣಿವೆಗಳನ್ನು ನೋಡಲು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಹಾಗೇ, ಇಂದು ಕೂಡ ಪ್ರವಾಸಿಗರು ಕಾಶ್ಮೀರದ ಪಹಲ್ಗಾಮ್ ಕಣಿವೆಯಲ್ಲಿ ಸಣ್ಣ ರೆಸಾರ್ಟ್​ನ ಅಂಗಳದಲ್ಲಿ ಕುಳಿತು ತಿಂಡಿ ತಿನ್ನುತ್ತಾ, ಚಹಾ ಹೀರುತ್ತಾ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದರೆ ಸ್ವರ್ಗ. ಈ ಭೂಲೋಕದ ಸ್ವರ್ಗ ಎಂದೇ ಕರೆಯಲ್ಪಡುವ ಪಹಲ್ಗಾಮ್​ಅನ್ನು ನೀವು ನೋಡಿ.

ಶ್ರೀನಗರ, (ಏಪ್ರಿಲ್ 23):  ಸಾಲು ಸಾಲು ಮರಗಳು, ದಟ್ಟವಾದ ಪೈನ್ ಕಾಡುಗಳು, ಹುಲ್ಲುಗಾವಲುಗಳು ಮತ್ತು ಹಿಮದಿಂದ ಆವೃತವಾದ ಹಿಮಾಲಯ ಪರ್ವತಗಳಿಂದ ಸುತ್ತುವರೆದಿರುವ ಪಹಲ್ಗಾಮ್ ವನ್ನು ನೋಡುವುದೇ ಒಂದು ಸ್ವರ್ಗ. ಅದಕ್ಕೆ ಇದನ್ನು ಭೂಲೋಕದ ಸ್ವರ್ಗ ಎಂದೇ ಕರೆಯುತ್ತಾರೆ. ಮದುವೆಯಾದ ಹೊಸರತಲ್ಲಿ ನವ ಜೋಡಿಗಳು ಹನಿಮೂನ್​ಗೆಂದು ಇಲ್ಲಿಗೆ ಬರುತ್ತಾರೆ. ಹೌದು.. ಶಿಖರ, ಕಣಿವೆಗಳನ್ನು ನೋಡಲು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಹಾಗೇ, ಇಂದು ಕೂಡ ಪ್ರವಾಸಿಗರು ಕಾಶ್ಮೀರದ ಪಹಲ್ಗಾಮ್ ಕಣಿವೆಯಲ್ಲಿ ಸಣ್ಣ ರೆಸಾರ್ಟ್​ನ ಅಂಗಳದಲ್ಲಿ ಕುಳಿತು ತಿಂಡಿ ತಿನ್ನುತ್ತಾ, ಚಹಾ ಹೀರುತ್ತಾ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದರೆ ಸ್ವರ್ಗ. ಈ ಭೂಲೋಕದ ಸ್ವರ್ಗ ಎಂದೇ ಕರೆಯಲ್ಪಡುವ ಪಹಲ್ಗಾಮ್​ನಲ್ಲಿ ಉಗ್ರರಿಗೆ ರಕ್ತಪಾತ ಮಾಡುವುದಕ್ಕೆ ಅದ್ಹೇಗೆ ಮನಸ್ಸು ಬಂತೋ.

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More