ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು!

Updated on: Feb 01, 2026 | 8:44 PM

ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ, ಒಂದು ಮನೆಯಲ್ಲಿ ಇದ್ದಕ್ಕಿದ್ದಂತೆ ನೀರು ಚಿಮ್ಮಲು ಪ್ರಾರಂಭಿಸಿತು. ಹತ್ತಿರದಲ್ಲಿ ಬೋರ್​ವೆಲ್ ಕೊರೆಯುವ ಕೆಲಸ ನಡೆಯುತ್ತಿತ್ತು. ಹೀಗಾಗಿ, ಅದರ ಪ್ರೆಶರ್​​ನಿಂದಾಗಿ ನೀರು ಚಿಮ್ಮಲಾರಂಭಿಸಿದೆ. ನೆಲಕ್ಕೆ ಹಾಕಿದ್ದ ಟೈಲ್ಸನ್ನು ಒಡೆದು ನೀರು ಮೇಲೆ ಹಾರಿದೆ. ಈ ವೇಳೆ ಅಲ್ಲೇ ಇದ್ದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆನ್‌ಲೈನ್‌ನಲ್ಲಿಯೂ ಕಾಣಿಸಿಕೊಂಡಿದೆ.

ಬಿಲಾಸ್‌ಪುರ, ಫೆಬ್ರವರಿ 1: ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ಶನಿವಾರ (ಜನವರಿ 31) ಮನೆಯ ನೆಲದೊಳಗಿನ ನೀರಿನ ಪೈಪ್ ಒಡೆದು ಇದ್ದಕ್ಕಿದ್ದಂತೆ ನೀರು ಮೇಲೆ ಚಿಮ್ಮಿದೆ. ನೆಲಕ್ಕೆ ಹಾಕಿದ್ದ ಟೈಲ್ಸನ್ನು ಒಡೆದು ನೀರು ಮೇಲೆ ಹಾರಿದೆ. ಈ ವೇಳೆ ಅಲ್ಲೇ ಇದ್ದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆನ್‌ಲೈನ್‌ನಲ್ಲಿಯೂ ಕಾಣಿಸಿಕೊಂಡಿದೆ. ನೆರೆಹೊರೆಯಲ್ಲಿ ಬೋರ್​​ವೆಲ್ ಕೆಲಸ ನಡೆಯುತ್ತಿದ್ದುದರಿಂದ ಅದರ ಒತ್ತಡದಿಂದ ಈ ಮನೆಯೊಳಗೆ ನೀರಿನ ಪೈಪ್ ಒಡೆದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More