VIDEO: ಔಟಾ… ನಾಟೌಟಾ? ಹೊಸ ಚರ್ಚೆಗೆ ಕಾರಣವಾದ ಸ್ಟಂಪ್ ಔಟ್
WBBL 2025: ಈ ತೀರ್ಪಿನ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಗಳು ಶುರುವಾಗಿದೆ. ಕೆಲವರು ಚೆಂಡು ತಾಗಿ ಬೇಲ್ಸ್ ಬಿದ್ದಿರುವುದು ಎಂದರೆ, ಇನ್ನು ಕೆಲವರು ಗ್ಲೌಸ್ ತಾಗಿ ಎಂದಿದ್ದಾರೆ. ಮತ್ತೆ ಕೆಲವರು ಗ್ಲೌಸ್ ಮುಂದಕ್ಕೆ ಕೊಂಡೊಯ್ದಾಗ ಗಾಳಿಯಿಂದ ಬೇಲ್ಸ್ ಬಿದ್ದಿದೆ ಎಂಬ ವಾದವನ್ನು ಸಹ ಮುಂದಿಡುತ್ತಿದ್ದಾರೆ. ಒಟ್ಟಿನಲ್ಲಿ ವುಮೆನ್ಸ್ ಬಿಗ್ ಬ್ಯಾಷ್ ಲೀಗ್ನ ಮೂರನೇ ಪಂದ್ಯವು ಸ್ಟಂಪ್ ಔಟ್ ಕಾರಣದಿಂದ ಸಖತ್ ಸುದ್ದಿಯಲ್ಲಿದೆ.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ವುಮೆನ್ಸ್ ಬಿಗ್ ಬ್ಯಾಷ್ ಲೀಗ್ನ 3ನೇ ಪಂದ್ಯವು ಸುದ್ದಿಯಲ್ಲಿದೆ. ಹೀಗೆ ಸುದ್ದಿಯಾಗಲು ಮುಖ್ಯ ಕಾರಣ ಸೋಫಿ ಡಿವೈನ್ ಅವರ ಸ್ಟಂಪ್ ಔಟ್. ಪರ್ತ್ನಲ್ಲಿ ನಡೆದ ಈ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ಹಾಗೂ ಪರ್ತ್ ಸ್ಕಾಚರ್ಸ್ ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪರ್ತ್ ಸ್ಕಾಚರ್ಸ್ ಪರ ನಾಯಕಿ ಸೋಫಿ ಡಿವೈನ್ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಆದರೆ ಕ್ರೀಸ್ಗೆ ಆಗಮಿಸಿ 6 ಎಸೆತಗಳನ್ನು ಎದುರಿಸಿದ ಬೆನ್ನಲ್ಲೇ ಪೆವಿಲಿಯನ್ಗೆ ಹಿಂತಿರುಗಬೇಕಾಯಿತು.
ಇದರ ನಡುವೆ ನಾಟಕೀಯ ಸನ್ನಿವೇಶಕ್ಕೆ ಮೈದಾನ ಸಾಕ್ಷಿಯಾಗಿತ್ತು. ಏಕೆಂದರೆ ಸ್ಪಿನ್ನರ್ ಆಶ್ಲೀ ಗಾರ್ಡ್ನರ್ ಎಸೆತದಲ್ಲಿ ಸೋಫಿ ಡಿವೈನ್ ಮುನ್ನುಗ್ಗಿ ಹೊಡೆಯಲು ಯತ್ನಿಸಿದ್ದರು. ಆದರೆ ಚೆಂಡು ವಿಕೆಟ್ ಕೀಪರ್ನತ್ತ ಸಾಗಿತ್ತು. ಇದಾಗ್ಯೂ ವಿಕೆಟ್ ಕೀಪರ್ ಎಮ್ಮಾ ಮ್ಯಾನಿಕ್ಸ್ ಗ್ರೀವ್ಸ್ಗೆ ಚೆಂಡು ಹಿಡಿದು ಸ್ಟಂಪ್ ಮಾಡಲು ಸಾಧ್ಯವಾಗಿರಲಿಲ್ಲ.
ಬದಲಾಗಿ ಚೆಂಡು ಮ್ಯಾನಿಕ್ಸ್-ಗ್ರೀವ್ಸ್ ಅವರ ದೇಹಕ್ಕೆ ಬಡಿದು ಸ್ಟಂಪ್‌ಗೆ ತಾಗಿತು. ಇದಾಗ್ಯೂ ಬೇಲ್ಸ್ ಬಿದ್ದಿರಲಿಲ್ಲ. ಈ ವೇಳೆ ಎಮ್ಮಾ ಮ್ಯಾನಿಕ್ಸ್ ಗ್ರೀವ್ಸ್ ತನ್ನ ಗ್ಲೌಸ್ ಅನ್ನು ವಿಕೆಟ್ನತ್ತ ಕೊಂಡೊಯ್ದಿದ್ದರು. ಈ ವೇಳೆ ಬೇಲ್ಸ್ ಬಿದ್ದಿದೆ.
ಇದರಿಂದ ಬೇಲ್ಸ್ ಬಿದ್ದಿರುವುದು ಚೆಂಡು ತಾಗಿಯೋ ಅಥವಾ ವಿಕೆಟ್ ಕೀಪರ್ನ ಗ್ಲೌಸ್ ತಾಗಿಯೇ ಎಂಬ ಗೊಂದಲ ಏರ್ಪಟ್ಟಿತ್ತು. ಮೂರನೇ ಅಂಪೈರ್ ಹಲವು ಬಾರಿ ಪರಿಶೀಲಿಸಿ ಸ್ಟಂಪ್ ಔಟ್ ನೀಡಿದ್ದಾರೆ.
ಈ ತೀರ್ಪಿನ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಗಳು ಶುರುವಾಗಿದೆ. ಕೆಲವರು ಚೆಂಡು ತಾಗಿ ಬೇಲ್ಸ್ ಬಿದ್ದಿರುವುದು ಎಂದರೆ, ಇನ್ನು ಕೆಲವರು ಗ್ಲೌಸ್ ತಾಗಿ ಎಂದಿದ್ದಾರೆ. ಮತ್ತೆ ಕೆಲವರು ಗ್ಲೌಸ್ ಮುಂದಕ್ಕೆ ಕೊಂಡೊಯ್ದಾಗ ಗಾಳಿಯಿಂದ ಬೇಲ್ಸ್ ಬಿದ್ದಿದೆ ಎಂಬ ವಾದವನ್ನು ಸಹ ಮುಂದಿಡುತ್ತಿದ್ದಾರೆ. ಒಟ್ಟಿನಲ್ಲಿ ವುಮೆನ್ಸ್ ಬಿಗ್ ಬ್ಯಾಷ್ ಲೀಗ್ನ ಮೂರನೇ ಪಂದ್ಯವು ಸ್ಟಂಪ್ ಔಟ್ ಕಾರಣದಿಂದ ಸಖತ್ ಸುದ್ದಿಯಲ್ಲಿದೆ.